ತೈಲದರ ಏರಿಕೆಗೆ ಕಂಗಾಲಾಗಿರುವ ಜನಸಾಮಾನ್ಯ! ಎಥೆನಾಲ್ ಬೆಲೆ ಏರಿಸಿ ಬರೆ ಎಳೆದ ಕೇಂದ್ರ ಸರ್ಕಾರ! ಲೀ. ಎಥೆನಾಲ್ ಗೆ 52.43 ರೂ. ದರ ನಿಗದಿ! ಎಥೆನಾಲ್ ದರ ಏರಿಕೆಗೆ ಕೇಂದ್ರ ಸಂಪುಟ ಸಭೆ ಒಪ್ಪಿಗೆ

ನವದೆಹಲಿ(ಸೆ.12): ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯನಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ.

ಎಥೆನಾಲ್ ದರದಲ್ಲೂ ಏರಿಕೆ ಮಾಡುವ ನಿರ್ಧಾರವನ್ನು ಕೇಂದ್ರ ಸಂಪುಟ ಸಭೆ ಕೈಗೊಂಡಿದೆ. ಪ್ರತಿ ಲೀಟರ್ ಎಥೆನಾಲ್ ಗೆ 52.43 ರೂ. ಎಂದು ಕೇಂದ್ರ ಸಂಪುಟ ಸಭೆಯಲ್ಲಿ ದರ ನಿಗದಿಪಡಿಸಲಾಗಿದೆ.

ಈ ಹಿಂದೆ ಲೀಟರ್ ಎಥೆನಾಲ್ ದರ 47. 49 ರೂ. ಇತ್ತು. ಆದರೆ, ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಎಥೆನಾಲ್ ದರವನ್ನು ಕೂಡಾ ಏರಿಸಲಾಗಿದೆ.

Scroll to load tweet…

ಈ ಕುರಿತು ಮಾಹಿತಿ ನೀಡಿದ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಎಥೆನಾಲ್ ದರ ಹೆಚ್ಚಿಸುವ ಕುರಿತು ಸಂಪುಟ ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಕಬ್ಬು, ಗೋಧಿ, ಜೋಳ ಮತ್ತಿತರ ಬೆಳೆಗಳಿಂದ ಉತ್ಪಾದಿಸುವ ಎಥೆನಾಲ್ ನ್ನು ಪರಿಸರ ಸ್ನೇಹಿ ಇಂಧನವನ್ನಾಗಿ ವಾಹನಗಳಿಗೆ ಬಳಸಲಾಗುತ್ತದೆ.