20 ಲಕ್ಷ ಕೋಟಿ ಪ್ಯಾಕೇಜ್‌ನ ಹಲವು ಯೋಜನೆಗೆ ಸಮ್ಮತಿ!

ಉದ್ಯೋಗ ನಷ್ಟದ ಮಾಹಿತಿ ಬಯಸಿದ ಪ್ರಧಾನಿ| ನೀಲಿ ಕ್ರಾಂತಿಗೆ 20 ಸಾವಿರ ಕೋಟಿ ರು| ಕಿರು, ಸಣ್ಣ, ಮಧ್ಯಮ ಉದ್ದಿಮೆ (ಎಂಎಸ್‌ಎಂಇ)ಗಳಿಗೆ ಯಾವುದೇ ಅಡಮಾನ ಅಥವಾ ಗ್ಯಾರಂಟಿ ಕೇಳದೆ 3 ಲಕ್ಷ ಕೋಟಿ ರು. ಸಾಲ

Cabinet approves Rs 3 lakh crore funding for MSMEs

ನವದೆಹಲಿ(ಮೇ.21): ಕೊರೋನಾದಿಂದ ಕಂಗೆಟ್ಟಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ್ದ 20 ಲಕ್ಷ ಕೋಟಿ ರು. ಪ್ಯಾಕೇಜ್‌ನ ಕೆಲ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಕಿರು, ಸಣ್ಣ, ಮಧ್ಯಮ ಉದ್ದಿಮೆ (ಎಂಎಸ್‌ಎಂಇ)ಗಳಿಗೆ ಯಾವುದೇ ಅಡಮಾನ ಅಥವಾ ಗ್ಯಾರಂಟಿ ಕೇಳದೆ 3 ಲಕ್ಷ ಕೋಟಿ ರು. ಸಾಲ, 8 ಕೋಟಿ ವಲಸೆ ಕಾರ್ಮಿಕರಿಗೆ 2 ತಿಂಗಳ ಕಾಲ ತಲಾ 5 ಕೆ.ಜಿ.ಆಹಾರ ಧಾನ್ಯ ಹಾಗೂ ಪ್ರತಿ ಕುಟುಂಬಕ್ಕೆ 1 ಕೆ.ಜಿ.ಬೇಳೆಕಾಳು ವಿತರಣೆ, 26 ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿಯೇ ಖರೀದಿಸುವ, ಕಲ್ಲಿದ್ದಲು ಗಣಿಗಳ ಖಾಸಗೀಕರಣದ ಮೂಲಕ ಖನಿಜ ನಿಕ್ಷೇಪಗಳ ಹರಾಜು ಮತ್ತು ಆದಾಯ ಹಂಚಿಕೆ ಆಧಾರದಲ್ಲಿ ಕಲ್ಲಿದ್ದಲು ಮಾರಾಟ, ಕೊರೋನಾದಿಂದ ಸಂಕಷ್ಟಎದುರಿಸುತ್ತಿರುವ ಉದ್ಯಮಗಳಿಗೆ ಅಗತ್ಯ ಸಾಲ ಸೌಲಭ್ಯ ಒದಗಿಸಿಕೊಡಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 30000 ಕೋಟಿ ರು.ವಿಶೇಷ ನೆರವ., ಕಿರುಸಾಲ ಸಂಸ್ಥೆಗಳಿಗೆ 450000 ಕೋಟಿ ರು. ಮೊತ್ತದ ಸಾಲಕ್ಕೆ ಬ್ಯಾಂಕ್‌ ಖಾತರಿ ನೀಡುವ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮೋದಿ 20 ಲಕ್ಷ ಕೋಟಿ ಪ್ಯಾಕೇಜ್, ಅಂಗೈಯಲ್ಲಿ ಆಕಾಶ..?

ಉದ್ಯೋಗ ನಷ್ಟದ ಮಾಹಿತಿ ಬಯಸಿದ ಪ್ರಧಾನಿ

ಕೊರೋನಾ ವೈರಸ್‌ ಕಾರಣ ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದ ದೇಶದಲ್ಲಿ 13 ಕೋಟಿಗೂ ಹೆಚ್ಚಿನ ಜನ ನಿರುದ್ಯೋಗಿಗಳಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಉದ್ಯೋಗ ನಷ್ಟವಾಗಿರುವ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ವಿವಿಧ ವಲಯಗಳಲ್ಲಿ ಎಷ್ಟುಉದ್ಯೋಗ ನಷ್ಟಆಗಿದೆ ಎಂಬುದರ ವಿವರವನ್ನು ಅವರು ವಿವಿಧ ಸಚಿವಾಲಯಗಳಿಂದ ಬಯಸಿದ್ದಾರೆ. ಪ್ರಧಾನಿ ಕಚೇರಿ ಈ ಸಂಬಂಧ ಎಲ್ಲ ಸಚಿವಾಲಯಗಳಿಗೆ ಆಂತರಿಕ ಸೂಚನೆ ನೀಡಿದೆ. ಲಾಕ್‌ಡೌನ್‌ ಅವಧಿಯಲ್ಲಿ ಎಷ್ಟುಜನರು ಉದ್ಯೋಗ ಕಳೆದುಕೊಂಡಿದ್ದಾರೆ ಮಾಹಿತಿ ನೀಡಿ ಎಂದು ಸಚಿವಾಲಯಗಳಿಗೆ ತಿಳಿಸಲಾಗಿದ್ದು, ಇವುಗಳು ನೀಡುವ ಪ್ರತಿಕ್ರಿಯೆ ಆಧರಿಸಿ ಮುಮದಿನ ಕ್ರಮ ಜರುಗಿಸಲು ನಿರ್ಧÃರಿಸಲಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವಾಲಯದ ಮೂಲಗಳು ಹೇಳಿವೆ.

Latest Videos
Follow Us:
Download App:
  • android
  • ios