Asianet Suvarna News Asianet Suvarna News

ಶುರುವಾಗಲಿದೆ ಭಾರತ-ಬಾಂಗ್ಲಾ ಪೈಪೋಟಿ: ಸಿದ್ಧವಾಗಬೇಕಿದೆ ಭಾರತೀಯ!

ಭಾರತ-ಬಾಂಗ್ಲಾ ನಡುವೆ ಶುರುವಾಗಲಿದೆ ಹೊಸ ಪೈಪೋಟಿ| ಪೈಪೋಟಿಯಲ್ಲಿ ಭಾರತವನ್ನು ಸೋಲಿಸಲಿದೆಯಾ ಬಾಂಗ್ಲಾದೇಶ?| 2030ರ ವೇಳೆಗೆ ತಲಾ ಆದಾಯದಲ್ಲಿ ಭಾರತವನ್ನು ಮೀರಿಸಲಿರುವ ಬಾಂಗ್ಲಾದೇಶ| ಶೇ.7ರಷ್ಟು ಜಿಡಿಪಿ ದಾಖಲಿಸಿರುವ ಏಷ್ಯಾದ ರಾಷ್ಟ್ರಗಳು|

By 2030 Bangladesh to be Richer Than India in Per Capita
Author
Bengaluru, First Published May 14, 2019, 2:49 PM IST

ನವದೆಹಲಿ(ಮೇ.14): ಏಷ್ಯಾದ ಪ್ರಬಲ ಆರ್ಥಿಕ ಶಕ್ತಿಗಳಲ್ಲಿ ಒಂದಾದ ಭಾರತಕ್ಕೆ ಮುಂದಿನ ದಿನಗಳಲ್ಲಿ ಆಘಾತ ಕಾದಿದೆ ಎಂಬ ಸುದ್ದಿಯೇ ಬಹಳ ಆಘಾತಕಾರಿಯಾದುದು. ಆದರೆ ನಮ್ಮ ಅಕ್ಕಪಕ್ಕದ ರಾಷ್ಟ್ರಗಳು ಸದ್ದಿಲ್ಲದೇ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳುವತ್ತ ಹೆಜ್ಜೆ ಇರಿಸಿವೆ.

ಅದರಂತೆ ಭಾರತಕ್ಕೆ ಆರ್ಥಿಕ ಕ್ಷೇತ್ರದಲ್ಲಿ ಶಾಕ್ ಕೊಡಲು ಸಿದ್ಧವಾದಂತಿರುವ ಪಕ್ಕದ ಬಾಂಗ್ಲಾದೇಶ, 2030ರ ವೇಳೆಗೆ ತಲಾ ಆದಾಯದಲ್ಲಿ ಭಾರತವನ್ನು ಮೀರಿಸಲಿದೆ ಎಂದು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

2020ರಲ್ಲಿ ಏಷ್ಯಾ ರಾಷ್ಟ್ರಗಳ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಭಾರತ, ಬಾಂಗ್ಲಾದೇಶ, ವಿಯೇಟ್ನಾಂ, ಮಯನ್ಮಾರ್ ಮತ್ತು ಫಿಲಿಪೈನ್ಸ್ ರಾಷ್ಟ್ರಗಳು ಶೇ.7ರ ಜಿಡಿಪಿ ದಾಖಲಿಸಲಿವೆ ಎಂದು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಹೇಳಿದೆ.

2018ರಲ್ಲಿ ಕೇವಲ 2,500 ಅಮೆರಿಕನ್ ಡಾಲರ್ ಜಿಡಿಪಿ ದಾಖಲಿಸಿರುವ ವಿಯೇಟ್ನಾಂ, 2030ರ ವೇಳೆಗೆ 10,400 ಅಮೆರಿಕನ್ ಡಾಲರ್ ಗೆ ವೃದ್ಧಿ ಕಾಣಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಲಾ ಆದಾಯದಲ್ಲಿ ಬಾಂಗ್ಲಾದೇಶ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಆದರೆ ಶೇ.7ರಷ್ಟು ಜಿಡಿಪಿ ದಾಖಲಿಸಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಇಲ್ಲದಿರುವುದು ಆಶ್ಚರ್ಯ ಮೂಡಿಸಿದೆ.

Follow Us:
Download App:
  • android
  • ios