Asianet Suvarna News Asianet Suvarna News

ಮಕ್ಕಳಿಗೆ ಆಟಿಕೆ ಖರೀದಿಸುತ್ತಿದ್ದೀರಾ? ಐಎಸ್ಐ ಮಾರ್ಕ್ ಇರದಿದ್ರೆ ಇಲ್ಲಿ ದೂರು ನೀಡಿ

ಮಕ್ಕಳಿಗೆ ಆಟಿಕೆ ಖರೀದಿಸುವಾಗ ಕಣ್ಣಿಗೆ ಚೆನ್ನಾಗಿ ಕಂಡಿದ್ದನ್ನು ಆರಿಸೋದಲ್ಲ, ಬದಲಿಗೆ ಅದರಲ್ಲಿ ಐಎಸ್ಐ ಮಾರ್ಕ್ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸೋದು ಅಗತ್ಯ. ಒಂದು ವೇಳೆ ಐಎಸ್ ಐ ಮಾರ್ಕ್ ಇರದಿದ್ದರೆ ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ದೂರು ಕೂಡ ನೀಡಬಹುದು. 
 

Buying Toys For Children Always Check For This Special Mark anu
Author
First Published Nov 24, 2023, 1:30 PM IST

Business Desk:ಆಟಿಕೆಗಳಿಲ್ಲದೆ ಬಾಲ್ಯವಿಲ್ಲ. ಪ್ರತಿಯೊಬ್ಬರೂ ಆಟಿಕೆಗಳ ಜೊತೆಗೆ ಆಟವಾಡುತ್ತ ಬಾಲ್ಯದ ಸವಿ ಸವಿದವರೇ. ತಂತ್ರಜ್ಞಾನ ಬದಲಾದಂತೆ ಆಟಿಕೆಗಳು ಕೂಡ ಬದಲಾಗಿವೆ. 15-20 ವರ್ಷದಹಿಂದೆ ಬಳಕೆಯಲ್ಲಿದ್ದ ಆಟಿಕೆಗಳು ಈಗ ಅಷ್ಟು ಬಳಕೆಯಾಗುತ್ತಿಲ್ಲ. ಇಂದು ಬ್ಯಾಟರಿ ಹೊಂದಿರುವ ಆಟಿಕೆಗಳ ಪ್ರಮಾಣ ಹೆಚ್ಚಿದೆ. ಅನೇಕ ರೊಬೋಟಿಕ್ ಆಟಿಕೆಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆಟಿಕೆಗಳ ಮಾರುಕಟ್ಟೆ ಕ್ಷಿಪ್ರ ಗತಿಯ ಬೆಳವಣಿಗೆಗಳ ಮೂಲಕ ಮಕ್ಕಳಿಗೆ ಮನೋರಂಜನೆ ನೀಡುವ ವಿವಿಧ ವಿನ್ಯಾಸದ ಆಟಿಕೆಗಳನ್ನು ಉತ್ಪಾದಿಸುತ್ತಿದೆ. ಆದರೆ, ಈ ಆಟಿಕೆಗಳು ಮಕ್ಕಳಿಗೆ ಎಷ್ಟು ಸುರಕ್ಷಿತ? ಇವುಗಳ ನಿಯಂತ್ರಣಕ್ಕೆ ಏನಾದರೂ ನಿಯಮವಿದೆಯಾ? ಹೌದು, ಭಾರತ ಸರ್ಕಾರ ಇತ್ತೀಚೆನ ಕೆಲವು ವರ್ಷಗಳಿಂದ ಆಟಿಕೆಗಳಿಗೆ ಗುಣಮಟ್ಟ ನಿಯಂತ್ರಣ ಆದೇಶ (ಕ್ಯುಸಿಒ) ಅನುಷ್ಠಾನಗೊಳಿಸಿದೆ. ಈ ಆರ್ಡರ್ ಅನುಸಾರ ಆಟಿಕೆಗಳ ಮೇಲೆ ವಿಶೇಷ ಮಾರ್ಕ್ ಹೊಂದಿರೋದು ಅಗತ್ಯ. ಹಾಗೆಯೇ ಪೋಷಕರು ಆಟಿಕೆಗಳನ್ನು ಖರೀದಿಸುವಾಗ ಈ ವಿಶೇಷ ಚಿಹ್ನೆ ಅಥವಾ ಮಾರ್ಕ್ ಹೊಂದಿರುವ ಆಟಿಕೆಗಳನ್ನು ಖರೀದಿಸುವಂತೆ ನಿರ್ದೇಶನ ಕೂಡ ನೀಡಲಾಗಿದೆ. ಈ ವಿಶೇಷ ಮಾರ್ಕ್ ಹೊಂದಿರುವ ಆಟಿಕೆಗಳು ಮಾತ್ರ ಬಳಕೆಗೆ ಸುರಕ್ಷಿತ.

ISI ಮಾರ್ಕ್ ಇಲ್ಲದಿದ್ದರೆ ದೂರು ನೀಡಬಹುದು
ಅನೇಕ ಕಂಪನಿಗಳು ಮಕ್ಕಳ ಆಟಿಕೆಗಳ ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟಿವೆ ಕೂಡ. 7ರಿಂದ 14 ವರ್ಷ ವಯಸ್ಸಿನ ಮಕ್ಕಳ ಆಟಿಕೆಗಳಿಗೆ ಗುಣಮಟ್ಟ ನಿಯಂತ್ರಣ ಆದೇಶ (QCO)ಅನ್ನು ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೊಳಿಸಿದೆ. ಈ ಆದೇಶದ ಅನ್ವಯ ಆಟಿಕೆಗಳ ಗುಣಮಟ್ಟ ನಿಯಂತ್ರಣಕ್ಕೆ ಉತ್ಪಾದನಾ ಕಂಪನಿಗಳು ಅವುಗಳ ಮೇಲೆ ಐಎಸ್ಐಮಾರ್ಕ್ ಅಳವಡಿಸೋದು ಅಗತ್ಯ. ಇನ್ನು ಗ್ರಾಹಕರು ಕೂಡ ಆಟಿಕೆಗಳನ್ನು ಖರೀದಿಸುವಾಗ ಐಎಸ್ಐ ಮಾರ್ಕ್ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸೋದು ಅಗತ್ಯ. ಒಂದು ವೇಳೆ ಆಟಿಕೆಯಲ್ಲಿ ಐಎಸ್ಐ ಮಾರ್ಕ್ ಇಲ್ಲದಿದ್ದರೆ ಗ್ರಾಹಕರು ರಾಷ್ಟ್ರೀಯ ಗ್ರಾಹಕರ ಸಹಾಯವಾಣಿ ಸಂಖ್ಯೆ 1915 ಕರೆ ಮಾಡಿ ದೂರು ದಾಖಲಿಸಬಹುದು. 

ನೀವು ಗೂಗಲ್‌ ಪೇ ಬಳಸ್ತಿದ್ರೆ ಕೂಡಲೇ ನಿಮ್ಮ ಫೋನ್‌ನಿಂದ ಈ ಆ್ಯಪ್‌ಗಳನ್ನು ತೆಗೆದುಹಾಕಿ: ಗೂಗಲ್‌ ಎಚ್ಚರಿಕೆ

ಇನ್ನು ವರದಿಗಳ ಅನ್ವಯ ಐಎಸ್ ಐ ಮಾರ್ಕ್ ಹೊಂದಿರದ ಆಟಿಕೆಗಳನ್ನು ಮಾರಾಟ, ಟ್ರೇಡ್, ಆಮದು ಅಥವಾ ಸಂಗ್ರಹಣೆ ಮಾಡಬಾರದು. ಕಳೆದ ಕೆಲವು ವರ್ಷಗಳಿಂದ ಮಕ್ಕಳಿಗೆ ಆಟಿಕೆಗಳಿಂದ ಹಾನಿ ಹಾಗೂ ಆರೋಗ್ಯ ಸಮಸ್ಯೆಗಳು ಆಗಿರುವ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಕೆಲವು ಆಟಿಕೆಗಳಲ್ಲಿ ಹರಿತವಾದ ಬದಿಗಳನ್ನು ಹೊಂದಿರುತ್ತವೆ. ಇನ್ನೂ ಕೆಲವು ಆಟಿಕೆಗಳಲ್ಲಿ ವಿಷಕಾರಿ ಅಂಶಗಳಿರುತ್ತವೆ. ಇದು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲವು. ಇನ್ನು ಆಟಿಕೆಗಳ ಗುಣಮಟ್ಟ ನಿರ್ವಹಣೆಗೆ ಅನೇಕ ಮಾನದಂಡಗಳನ್ನು ಕೂಡ ನಿಗದಿಪಡಿಸಲಾಗಿದೆ. 

ಸರ್ಕಾರದ ಅನೇಕ ಪ್ರಯತ್ನಗಳ ಹೊರತಾಗಿ ಕೂಡ ಇನ್ನೂ ಕೆಲವು ಜನರು ಐಎಸ್ಐ ಮಾರ್ಕ್ ಹೊಂದಿರದ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂಥ ಆಟಿಕೆಗಳು ಸ್ಥಳೀಯ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗಿವೆ. 

ಯುಪಿಐ ಪಾವತಿ ತಪ್ಪಾಗಿ ಬೇರೆ ಖಾತೆಗೆ ಹೋದ್ರೆ ಟೆನ್ಷನ್ ಬಿಡಿ, NPCI ವೆಬ್ ಸೈಟ್ ನಲ್ಲಿ ದೂರು ದಾಖಲಿಸಿ

ಆಟಿಕೆ ರಫ್ತಿನಲ್ಲಿ ಹೆಚ್ಚಳ
ಈ ವರ್ಷ ಭಾರತದ ಆಟಕೆಗಳ ರಫ್ತಿನಲ್ಲಿ ಶೇ.60ರಷ್ಟು ಏರಿಕೆಯಾಗಿದ್ದು,  2018-19ನೇ ಸಾಲಿನಲ್ಲಿ 203.46 ಮಿಲಿಯನ್ ಡಾಲರ್ ನಿಂದ 2022-23ನೇ ಸಾಲಿನಲ್ಲಿ 325.72 ಮಿಲಿಯನ್ ಡಾಲರ್ ಗೆ ಹೆಚ್ಚಳವಾಗಿದೆ. ಆಟಿಕೆಗಳ ಆಮದಿನಲ್ಲಿ ಶೇ.57ಷ್ಟು ಇಳಿಕೆಯಾಗಿದ್ದು, 2018-19ರಲ್ಲಿ 371.69 ಮಿಲಿಯನ್ ಡಾಲರ್ ನಿಂದ 2022-23ನೇ ಸಾಲಿನಲ್ಲಿ 158.70 ಮಿಲಿಯನ್ ಡಾಲರ್ ಗೆ ಕುಸಿತ ಕಂಡಿದೆ. ಸರ್ಕಾರ ಕೈಗೊಂಡ ಅನೇಕ ಕ್ರಮಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಗೆ ಆಮದಾಗಿರುವ ಆಟಿಕೆಗಳ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ 

Latest Videos
Follow Us:
Download App:
  • android
  • ios