12 ತಿಂಗಳೂ ಲಾಭ ಕೊಡುವ 5 ವ್ಯವಹಾರಗಳು; ಪ್ರತಿ ತಿಂಗಳು ಸಿಗುತ್ತೆ ಕೈ ತುಂಬಾ ಹಣ
ಸ್ವಂತ ವ್ಯವಹಾರ ಆರಂಭಿಸುವ ಮುನ್ನ ಅದರ ಸಾಧ್ಯತೆಗಳನ್ನು ಅರಿತುಕೊಳ್ಳುವುದು ಮುಖ್ಯ. ವರ್ಷದ 12 ತಿಂಗಳೂ ಲಾಭ ತರುವಂತಹ 5 ವ್ಯವಹಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಸ್ವಂತದ್ದೊಂದು ಬ್ಯುಸಿನೆಸ್ ಮಾಡಬೇಕು ಅನ್ನೋದು ಎಲ್ಲರ ಕನಸು. ಯಾವುದೇ ವ್ಯವಹಾರ ಆರಂಭಿಸುವ ಮುನ್ನ ಅದರ ಆಳ ಮತ್ತು ಅಗಲವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಅವಸರವಾಗಿ ಬ್ಯುಸಿನೆಸ್ ಆರಂಭಿಸಿದ್ರೆ ಭವಿಷ್ಯದಲ್ಲಿ ನಷ್ಟ ನಿಮ್ಮ ಹೆಗಲೇರುತ್ತದೆ. ಹಾಗಾಗಿ ಮೊದಲು ನೀವು ಶುರು ಮಾಡುತ್ತಿರುವ ಬ್ಯುಸಿನೆಸ್ ಎಲ್ಲಾ ಕಾಲದಲ್ಲಿಯೂ ನಡೆಯುತ್ತಿರುವಂತಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚಳಿ, ಮಳೆ, ಬೇಸಿಗೆ ಇರಲಿ ನಿಮ್ಮ ವ್ಯವಹಾರ ನಡೆಯುತ್ತಿರಬೇಕು. ನಿಮ್ಮ ಉತ್ಪನ್ನ ಸದಾ ಬೇಡಿಕೆಯನ್ನು ಹೊಂದಿರುವಂತಹ ವ್ಯವಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು. ಇಂದು ನಾವು ನಿಮಗೆ 12 ತಿಂಗಳು ನಡೆಯುವ 5 ವ್ಯವಹಾರಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ವ್ಯವಹಾರಗಳು ನಿಮಗೆ ಕೈ ತುಂಬಾ ಹಣ ಸಿಗುತ್ತದೆ.
1.ಹೋಮ್ ಮೇಡ್ ಉತ್ಪನ್ನಗಳ ಮಾರಾಟ
ಬೇಕರಿ ಉತ್ಪನ್ನಗಳು ವರ್ಷದ 12 ತಿಂಗಳೂ ಮಾರಾಟವಾಗುತ್ತವೆ. ಕೇಕ್, ಬ್ರೆಡ್, ಬಿಸ್ಕಟ್, ಸಿಹಿ ಮತ್ತು ಖಾರದ ತಿಂಡಿಗಳು ಎಲ್ಲಾ ದಿನಗಳಲ್ಲಿಯೂ ಮಾರಾಟವಾಗುತ್ತಿರುತ್ತವೆ. ಇನ್ನು ಹಬ್ಬಗಳ ಸಂದರ್ಭದಲ್ಲಿ ಮಾರಾಟದ ಪ್ರಮಾಣ ದುಪ್ಪಟ್ಟು ಆಗುತ್ತದೆ. ಇದರ ಜೊತೆಗೆ ಹೋಮ್ ಮೇಡ್ ಪ್ರೊಡಕ್ಟ್ ಹೆಸರಿನಲ್ಲಿ ಮನೆಯಲ್ಲಿ ತಯಾರಿಸಲಾಗುವ ಸಾಂಪ್ರಾದಾಯಿಕ ತಿಂಡಿಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿರುತ್ತವೆ. ದೇಶಿ ಶೈಲಿಯಲ್ಲಿ ತಯಾರಿಸಲಾಗುವ ಉತ್ಪನ್ನಗಳಿಗೆ ನಗರ ಪ್ರದೇಶದಲ್ಲಿ ಹೆಚ್ಚು ಬೇಡಿಕೆ ಇರುತ್ತದೆ.
2.ಆರೊಮ್ಯಾಟಿಕ್ ಸಸ್ಯಗಳ ಕೃಷಿ
ಇತ್ತೀಚಿನ ದಿನಗಳಲ್ಲಿ ಉಡುಗೊರೆ ರೂಪದಲ್ಲಿ ಹೂವಿನ ಕುಂಡಗಳನ್ನು ನೀಡುವ ಟ್ರೆಂಡ್ ಶುರುವಾಗಿದೆ. ಮದುವೆಗಳಲ್ಲಿ ಆಗಮಿಸುವ ಪ್ರತಿಯೊಬ್ಬ ಅತಿಥಿಗಳಿಗೆ ಬಗೆ ಬಗೆಯ ಸಸಿಗಳನ್ನು ನೀಡಲಾಗುತ್ತದೆ. ನೀವು ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದರೆ ಸಸ್ಯಗಳ ಮಾರಾಟ ಬ್ಯುಸಿನೆಸ್ ಆರಂಭಿಸಬಹುದು. ಬಗೆ ಬಗೆಯ ಹೂವಿನ ಕುಂಡಗಳು ಬೇಡಿಕೆಯನ್ನು ಹೊಂದಿದ್ದು, ಹೆಚ್ಚು ಬೆಲೆಗೆ ಮಾರಾಟವಾಗುತ್ತವೆ. ಈ ವ್ಯಾಪಾರದಲ್ಲಿ ಲಾಭದ ಪ್ರಮಾಣವೂ ಸಹ ಅಧಿಕವಾಗಿರುತ್ತದೆ. ಈ ವ್ಯಾಪಾರವನ್ನು ಆನ್‌ಲೈನ್ ಮೂಲಕ ವಿಸ್ತರಿಸಿಕೊಳ್ಳುವ ಅವಕಾಶವಿದೆ.
3.ಡ್ರೈ ಕ್ಲೀನಿಂಗ್ ಮತ್ತು ಲಾಂಡ್ರಿ ಸರ್ವಿಸ್
ನಗರ ಪ್ರದೇಶದ ಜನರ ಬಳಿ ಬಟ್ಟೆ ತೊಳೆದು ಇಸ್ತ್ರೀ ಮಾಡಿಕೊಳ್ಳುವಷ್ಟೂ ಸಮಯ ಇಲ್ಲ. ಅದರಲ್ಲಿಯೂ ಫಾರ್ಮಲ್ ಶರ್ಟ್-ಪ್ಯಾಂಟ್, ಸೂಟ್, ಪಂಚೆಗಳ ಇಸ್ತ್ರಿಗೆ ಜನರು ಅಂಗಡಿಗಳನ್ನು ಹುಡುಕುತ್ತಿರುತ್ತಾರೆ. ಮಹಿಳೆಯರು ತಮ್ಮ ದುಬಾರಿ ಬೆಲೆಯ ಸೀರೆಗಳ ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಾರೆ. ಇಂತಹ ಪ್ರದೇಶದಲ್ಲಿ ನೀವು ವಾಸವಾಗಿದ್ದರೆ ಡ್ರೈ ಕ್ಲೀನಿಂಗ್ ಮತ್ತು ಲಾಂಡ್ರಿ ಸರ್ವಿಸ್ ಆರಂಭಿಸಬಹುದು. ಪಿಕ್-ಅಪ್ ಮತ್ತು ಡೆಲಿವರಿ ಸೇವೆ ನೀಡುವ ಮೂಲಕ ಹೆಚ್ಚಿನ ಹಣವನ್ನು ಗಳಿಸಬಹುದು.
ಇದನ್ನೂ ಓದಿ: 1500 ರೂಪಾಯಿಯಿಂದ ಆರಂಭಿಸಿ ಇಂದು 3 ಕೋಟಿ ಕಂಪನಿಯ ಒಡತಿಯಾದ ಗೃಹಿಣಿ
4.ಮಕ್ಕಳ ಆಟಿಕೆ ಮಾರಾಟ ಮತ್ತು ಗಿಫ್ಟ್ ಸೆಂಟರ್
ಮಕ್ಕಳ ಆಟಿಕೆ ವ್ಯಾಪಾರ ಅತ್ಯಧಿಕ ಲಾಭ ಹೊಂದಿರುವ ವ್ಯವಹಾರವಾಗಿದೆ. ಮಗು ಒಂದು ಆಟಿಕೆ ಇಷ್ಟಪಟ್ಟರೇ ಅದು ಎಷ್ಟೇ ಬೆಲೆಯಾಗಿದ್ದರೂ ಪೋಷಕರು ಅನಿವಾರ್ಯವಾಗಿ ಖರೀದಿಸಬೇಕಾಗುತ್ತದೆ. ವಿವಿಧ ಆಟಿಕೆಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚು ಲಾಭಗಳಿಸಬಹುದು. ಇದರ ಜೊತೆ ಮದುವೆ, ಬರ್ತ್ ಡೇ ಸಂದರ್ಭಗಳಲ್ಲಿ ನೀಡಲಾಗುವ ಗಿಫ್ಟ್‌ಗಳನ್ನು ಸಹ ಮಾರಾಟ ಮಾಡಬಹುದು. ಈ ಎರಡೂ ವ್ಯವಹಾರವನ್ನು ಜೊತೆಯಾಗಿ ಆರಂಭಿಸಿದ್ರೆ ವರ್ಷದ 12 ತಿಂಗಳೂ ವ್ಯಾಪಾರ ನಡೆಯುತ್ತಿರುತ್ತದೆ.
5.ಫಿಟ್‌ನೆಸ್ ಸೆಂಟರ್
ಇಂದಿನ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದು, ಫಿಟ್ನೆಸ್ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಆರೋಗ್ಯವಾಗಿರಬೇಕು ಎಂಬ ಒಂದೇ ಒಂದು ಕಾರಣದಿಂದ ಫಿಟ್ನೆಸ್ ಸೆಂಟರ್‌ನತ್ತ ಬರುತ್ತಾರೆ. ಜಿಮ್ ಅಥವಾ ಫಿಟ್‌ನೆಸ್ ಕೇಂದ್ರ ಆರಂಭಿಸುವುದು ಇಂದಿನ ದಿನದಲ್ಲಿ ಒಳ್ಳೆಯ ಬ್ಯುಸಿನೆಸ್ ಆಗಿದೆ. ಟ್ರೆಡ್‌ಮಿಲ್, ಡಂಬ್ಬೆಲ್ಸ್, ಸೈಕ್ಲಿಂಗ್ ಯಂತ್ರ ಮತ್ತು ತೂಕದ ಯಂತ್ರದಂತಹ ಉತ್ತಮ ಸಾಧನದ ಜೊತೆ ಓರ್ವ ಒಳ್ಳೆಯ ತರಬೇತುದಾರರ ಮೂಲಕ ಈ ಬ್ಯುಸಿನೆಸ್ ಆರಂಭಿಸಬಹುದು. ಇದು ಸಹ ವರ್ಷದ 12 ತಿಂಗಳು ಆದಾಯ ತಂದುಕೊಡುತ್ತದೆ. ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಈ ರೀತಿ ವಿಶೇಷ ಪ್ಯಾಕೇಜ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸಬಹುದು.
ಇದನ್ನೂ ಓದಿ: ಈ ಯಂತ್ರ ಅಳವಡಿಸಿ ಬ್ಯುಸಿನೆಸ್ ಆರಂಭಿಸಿದ್ರೆ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಲಾಭ