ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ನು ಮೇಲೆ  ದಿನದ 24 ಗಂಟೆಯೂ ವಾರದ ಏಳು ದಿನವೂ ಎಲ್ಲಾ ವ್ಯಾಪಾರ ವಹಿವಾಟುಗಳು ತೆರೆದಿರಲಿವೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಈ ವಿಚಾರಕ್ಕೆ ಸಂಬಂಧಿಸಿದ 300 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದಾರೆ.

ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ನು ಮೇಲೆ ದಿನದ 24 ಗಂಟೆಯೂ ವಾರದ ಏಳು ದಿನವೂ ಎಲ್ಲಾ ವ್ಯಾಪಾರ ವಹಿವಾಟುಗಳು ತೆರೆದಿರಲಿವೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಈ ವಿಚಾರಕ್ಕೆ ಸಂಬಂಧಿಸಿದ 300 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದಾರೆ. ದೆಹಲಿ ಸರ್ಕಾರ ಹಾಗೂ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಎರಡೂ ಕಳೆದ ಐದು ವರ್ಷಗಳಿಂದ ಈ 24x7 ದೆಹಲಿ ಯೋಜನೆಯ ಪರ ವಕಾಲತು ನಡೆಸಿವೆ.

ಹೊಟೇಲ್ ರೆಸ್ಟೋರೆಂಟ್‌ಗಳಿಂದ ಹಿಡಿದು ಸಾರಿಗೆ ಸೇವೆ, ಬಿಪಿಒಗಳಿಂದ ಹಿಡಿದು ಆನ್‌ಲೈನ್ ವಿತರಣಾ ಸೇವೆಗಳವರೆಗೆ ಎಲ್ಲವೂ 24x7 ಕಾರ್ಯನಿರ್ವಹಿಸಲಿದ್ದು, ಈ ರೀತಿ 24x7 ತೆರೆದಿರುವುದಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ವ್ಯಾಪಾರೋದ್ಯಮಿಗಳಿಗೆ ಮುಂದಿನ ವಾರದಿಂದ ದೆಹಲಿಯಲ್ಲಿ 24×7 ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುತ್ತದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ (Lieutenant Governor) ವಿ ಕೆ ಸಕ್ಸೇನಾ (V K Saxena) ಅವರು 314 ಸ್ಥಳಗಳಿಗೆ ದಿನವಿಡೀ ಕಾರ್ಯನಿರ್ವಹಿಸಲು ಅವಕಾಶ ನೀಡುವ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ. ಅವುಗಳಲ್ಲಿ ಕೆಲವು ಸಂಸ್ಥೆಗಳು 2016ರಲ್ಲಿಯೇ ಅರ್ಜಿ ಸಲ್ಲಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಏಳು ದಿನಗಳೊಳಗೆ ಅಧಿಸೂಚನೆ ಹೊರಡಿಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್‌ ನಿರ್ದೇಶನ ನೀಡಿದ್ದಾರೆ. ದೆಹಲಿ ಅಂಗಡಿಗಳು ಮತ್ತು ಸ್ಥಾಪನೆ ಕಾಯಿದೆ, 1954 ರ ಸೆಕ್ಷನ್ 14, 15 ಮತ್ತು 16 ರ ಅಡಿಯಲ್ಲಿ ಈ ವಿನಾಯಿತಿ ನೀಡಲಾಗುತ್ತದೆ. ಈ ನಿರ್ಧಾರವು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾದ ಉತ್ತಮ ಮತ್ತು ಅನುಕೂಲಕರ ವ್ಯಾಪಾರಿ ವಾತಾವರಣವನ್ನು ಉತ್ತೇಜಿಸಲಿದೆ. ಈ ನಿರ್ಧಾರವು ನಗರದಲ್ಲಿ ಹೆಚ್ಚು ನೀರೀಕ್ಷಿಸಿದ್ದ ರಾತ್ರಿ ಜೀವನಕ್ಕೆ ಪೂರಕವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ರೀತಿ ವಿನಾಯಿತಿಗಳನ್ನು ಪಡೆಯಲು ಸಂಸ್ಥೆಗಳು, ವ್ಯಾಪಾರಸ್ಥರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಕೇಜ್ರಿವಾಲ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆ, ವಿವಾದ ಸೃಷ್ಟಿಸಿದ ಸಚಿವ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ!

ಮೂಲ ಕಾಯಿದೆಯ ಸೆಕ್ಷನ್ 14 ರ ಪ್ರಕಾರ ದೆಹಲಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 7 ರವರೆಗೆ ಕೆಲಸ ಮಾಡಲು ಮಹಿಳೆಯರು ಅಥವಾ ಯುವಕರನ್ನು ಕೇಳುವಂತಿಲ್ಲ. ಸೆಕ್ಷನ್ 15 ರ ಪ್ರಕಾರ, ಸಂಸ್ಥೆಗಳನ್ನು ತೆರೆಯುವ ಮತ್ತು ಮುಚ್ಚುವ ಸಮಯವನ್ನು ನಿಗದಿಪಡಿಸುವ ಹಕ್ಕನ್ನು ಸರ್ಕಾರ ಹೊಂದಿದೆ. 1979 ರ ಅಧಿಸೂಚನೆಯಲ್ಲಿ ಇದನ್ನು ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ನಿಗದಿಪಡಿಸಲಾಗಿತ್ತು. ಜೊತೆಗೆ ವಿಭಾಗ 16ರ ಅಡಿ ಬರುವ ಸಂಸ್ಥೆಗಳನ್ನು ವಾರಕ್ಕೆ ಒಂದು ದಿನ ಮುಚ್ಚುವಂತೆ ಆದೇಶಿಸಿತ್ತು. 2004 ರಲ್ಲಿ, ಈ ಕಾಯಿದೆಗೆ ಬದಲಾವಣೆಗಳನ್ನು ಮಾಡಲಾಯಿತು ಮತ್ತು ತೆರೆಯುವ ಸಮಯವನ್ನು 11 ಗಂಟೆಗೆ ವಿಸ್ತರಿಸಲಾಯಿತು. ಆದಾಗ್ಯೂ, ಇದು ಕಡ್ಡಾಯವಾಗಿರಲಿಲ್ಲ. ಇದರ ಜೊತೆಗೆ ವಾರದಲ್ಲಿ ಒಂದು ದಿನ ಅಂಗಡಿಗಳನ್ನು ಮುಚ್ಚುವ ಆದೇಶವನ್ನು ಸಡಿಲಿಸಲಾಗಿದೆ.

ದೆಹಲಿಯ ಆಪ್‌ ಸಚಿವನಿಂದ Hindu ವಿರೋಧಿ ಪ್ರಮಾಣ: ಗೌತಮ್ ವಜಾ ಮಾಡಲು BJP ಆಗ್ರಹ

ಕಾಯಿದೆಯ ಸೆಕ್ಷನ್ 14, 15 ಮತ್ತು 16 ರ ಅಡಿಯಲ್ಲಿ ಕಾರ್ಮಿಕ ಮತ್ತು ಭದ್ರತೆ (labour and security) ಮುಂತಾದ ಕಲ್ಯಾಣಕ್ಕೆ ಒಳಪಡುವ ಕೆಲವು ಷರತ್ತುಗಳನ್ನು ಹೇರಿ 24X7 ಆಧಾರದ ಮೇಲೆ ವಾಣಿಜ್ಯ ಸಂಸ್ಥೆಗಳನ್ನು ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು. ಲೆಫ್ಟಿನೆಂಟ್ ಗವರ್ನರ್‌ ಕಚೇರಿ ಅಧಿಕಾರಿಗಳ ಪ್ರಕಾರ, ಸಂಸ್ಥೆಗಳು (establishments) ಈ ರೀತಿ ವಿನಾಯಿತಿಗಾಗಿ ಅರ್ಜಿಗಳನ್ನು ಕಳುಹಿಸುತ್ತಿವೆ ಆದರೆ ಕಾರ್ಮಿಕ ಇಲಾಖೆಯು (Labour Department) ಅವರೊಂದಿಗೆ ನ್ಯಾಯಯುತವಾಗಿ ವ್ಯವಹರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.