Asianet Suvarna News Asianet Suvarna News

ಈ ಬ್ಯುಸಿನೆಸ್ ಮಾಡಿ ತಿಂಗಳಿಗೆ ಲಕ್ಷ ಗಳಿಸ್ತಿದ್ದಾನೆ ಈ ವ್ಯಕ್ತಿ.. ನೀವೂ ಟ್ರೈ ಮಾಡಿ

ಸತತ ಪ್ರಯತ್ನ, ಪರಿಶ್ರಮದಿಂದ ನೀವು ಒಳ್ಳೆ ಗುಣಮಟ್ಟದ ವಸ್ತು ನೀಡಿದ್ರೆ ಜನ ನಿಮ್ಮ ಬಳಿ ಬಂದೇ ಬರ್ತಾರೆ. ಸದಾ ಬೇಡಿಕೆಯಲ್ಲಿರುವ ಈ ಬ್ಯುಸಿನೆಸ್ ನಿಮ್ಮ ಕೈ ಹಿಡಿಯುತ್ತದೆ. ಅದ್ಯಾವ ಬ್ಯುಸಿನೆಸ್ ಎಂಬ ಮಾಹಿತಿ ಇಲ್ಲಿದೆ. 
 

Business Idea These Men earns Lakhs By Doing Paper Plate Business  roo
Author
First Published Nov 29, 2023, 2:44 PM IST

ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರಿದ ನಂತ್ರ ಪೇಪರ್ ನಿಂದ ತಯಾರಿಸುವ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಪೇಪರ್ ಪ್ಲೇಟ್, ಗ್ಲಾಸ್, ಪೇಪರ್ ಬ್ಯಾಗ್ ಸೇರಿದಂತೆ ಅನೇಕ ವಸ್ತುಗಳನ್ನು ಮಾರುಕಟ್ಟೆಯಲ್ಲಿ ನೀವು ನೋಡಬಹುದು. ಮದುವೆ ಸೇರಿದಂತೆ ಹುಟ್ಟುಬ್ಬದ ಪಾರ್ಟಿ, ಪಿಕ್ನಿಕ್, ಮನೆಗೆ ಆರೇಳು ಜನ ಗೆಸ್ಟ್ ಬಂದಾಗ್ಲೂ ನಾವು ಈ ಪೇಪರ್ ಪ್ಲೇಟ್ ಬಳಕೆ ಮಾಡ್ತೇವೆ. ಸದಾ ಬೇಡಿಕೆಯಲ್ಲಿರುವ ಪರಿಸರಕ್ಕೆ ಹೆಚ್ಚು ಹಾನಿ ಮಾಡದ ಈ ಉದ್ಯಮ ಅನೇಕರಿಗೆ ಆದಾಯ ತಂದುಕೊಡ್ತಿದೆ. ಮನೆಯಲ್ಲೇ ಸಣ್ಣದಾಗಿ ಉದ್ಯಮ ಶುರು ಮಾಡಬೇಕು ಎನ್ನುವವರಿಂದ ಹಿಡಿದು ದೊಡ್ಡ ಮಟ್ಟದಲ್ಲಿ ವ್ಯಾಪಾರಕ್ಕೆ ಕೈ ಹಾಕುವವರು ಕೂಡ ಪೇಪರ್ ಪ್ಲೇಟ್ ತಯಾರಿ ಬ್ಯುಸಿನೆಸ್ ಶುರು ಮಾಡಬಹುದು. ಕಡಿಮೆ ಬಂಡವಾಳದಲ್ಲಿ ಹೆಚ್ಚು ಸಂಪಾದನೆ ಮಾಡುವ ಬ್ಯುಸಿನೆಸ್ ನಲ್ಲಿ ಇದು ಒಂದು.

ಪೇಪರ್ ಪ್ಲೇಟ್ (Paper Plate) ತಯಾರಿಸಿ ಜೀವನ ಕಂಡುಕೊಂಡ ಅನೇಕ ಮಂದಿ ನಮ್ಮಲ್ಲಿದ್ದಾರೆ. ಅದ್ರಲ್ಲಿ ಜಾರ್ಖಂಡ್ ಬೊಕಾರೊದ ವಿಕ್ಕಿ ಕೂಡ ಒಬ್ಬರು. ವಿಕ್ಕಿ ಪೇಪರ್ ಪ್ಲೇಟ್ ವ್ಯವಹಾರ ಶುರು ಮಾಡುವ ಜೊತೆಗೆ ಅನೇಕರಿಗೆ ಉದ್ಯೋಗ ನೀಡಿದ್ದಾರೆ. ಸ್ವಂತ ವ್ಯಾಪಾರ (Business) ಶುರು ಮಾಡಬೇಕೆಂಬ ಆಸೆ ಹೊಂದಿದ್ದ ವಿಕ್ಕಿ ಆರಂಭದಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ನಂತ್ರ ದೃಢ ನಿರ್ಧಾರ ತೆಗೆದುಕೊಂಡು ಪೇಪರ್ ಪ್ಲೇಟ್ ತಯಾರಿಸುವ ಕಾರ್ಖಾನೆ ಶುರು ಮಾಡಿದ್ರು. ನಾಲ್ಕು ಯಂತ್ರ, ವೈರಿಂಗ್, ಕಚ್ಚಾ ವಸ್ತು ಸೇರಿದಂತೆ ಕಾರ್ಖಾನೆ ಶುರು ಮಾಡಲು ಅವರು ಸುಮಾರು 5 ಲಕ್ಷ ರೂಪಾಯಿ ವೆಚ್ಚ (Cost) ಮಾಡಿದ್ದಾರೆ. 

ವಾಟ್ಸಾಪ್‌ ಗ್ರೂಪ್‌ನಲ್ಲಿ ನಡೆಸ್ತಿದ್ದ ಬಿಸಿನೆಸ್‌ಗೆ 1600 ಕೋಟಿ ಹೂಡಿಕೆ ಮಾಡಿದ ಮುಕೇಶ್ ಅಂಬಾನಿ, ಬಂದ ಲಾಭವೆಷ್ಟು?

ಈಗ ನಾಲ್ಕು ಜನರೊಂದಿಗೆ ಪ್ರತಿ ದಿನ 20 ಸಾವಿರಕ್ಕೂ ಹೆಚ್ಚು ಪೇಪರ್ ಪ್ಲೇಟ್ ಗಳನ್ನು ವಿಕ್ಕಿ ಸಣ್ಣ ಕಾರ್ಖಾನೆಯಲ್ಲಿ ತಯಾರಿಸುತ್ತಾರೆ. ಇದರಿಂದ ಅವರು ತಿಂಗಳಿಗೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಾರಂತೆ. ನೀವೂ ವಿಕ್ಕಿಯಂತೆ ಪೇಪರ್ ಪ್ಲೇಟ್ ತಯಾರಿ ಶುರು ಮಾಡಿ ನಿಮ್ಮದೇ ಸ್ವಂತ ಬ್ಯುಸಿನೆಶ್ ಆರಂಭಿಸಬಹುದು.

ಪೇಪರ್ ಪ್ಲೇಟ್ ತಯಾರಿಸಲು ಅಗತ್ಯವಾದ ವಸ್ತುಗಳು : ಅತ್ಯುತ್ತಮ ಗುಣಮಟ್ಟದ ಮುದ್ರಿತ ಪಿಇ ಪೇಪರ್ ಖರೀದಿ ಮಾಡಬೇಕು. ಪ್ರತಿ ಕೆಜಿಗೆ  30 ರಿಂದ 40 ರೂಪಾಯಿಗೆ ಇದು ಸಿಗುತ್ತದೆ. ಬಾಟಮ್ ರೀಲ್ ಇದು  ಪ್ರತಿ ಕೆಜಿಗೆ 40 ರೂಪಾಯಿ. ನೀವು ಇದಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಆನ್ಲೈನ್ ನಲ್ಲಿ ಅಥವಾ ಆಫ್ಲೈನ್ ನಲ್ಲಿ ಖರೀದಿ ಮಾಡಬೇಕು. ನೀವು ಹೆಚ್ಚಿನ ಮಟ್ಟದಲ್ಲಿ ಕಚ್ಚಾವಸ್ತು ಖರೀದಿ ಮಾಡಿದ್ರೆ ಬೆಲೆ ಕಡಿಮೆಯಾಗುತ್ತದೆ. ಇದಕ್ಕೆ ಅಗತ್ಯವಿರುವ ಯಂತ್ರಗಳು ಭಾರತದ ಎಲ್ಲ ಕಡೆ ಲಭ್ಯವಿದೆ. ನೀವು ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಶುರು ಮಾಡುವುದಿದ್ದಲ್ಲಿ ಸಣ್ಣ ಯಂತ್ರಗಳನ್ನು ಖರೀದಿ ಮಾಡಿ. 9,000 ರೂಪಾಯಿಯಿಂದ 25,000 ರೂಪಾಯಿಗೆ ಕೈನಲ್ಲಿ ಓಡುವ ಯಂತ್ರ ಲಭ್ಯವಿದೆ. ಸಿಂಗಲ್ ಡೈ ಸ್ವಯಂಚಾಲಿತ ಯಂತ್ರದ ಬೆಲೆ 30,000 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಡಬಲ್ ಡೈ ಪೇಪರ್ ಪ್ಲೇಟ್ ಮೇಕರ್ ಯಂತ್ರದ ಬೆಲೆ ಕನಿಷ್ಠ 55,000 ರೂಪಾಯಿ.

ಒಂದೇ ದಿನ ಬರೋಬ್ಬರಿ 100 ಕೋಟಿ ಗಳಿಸೋ ಬೃಹತ್‌ ಕಂಪೆನಿಯಿದು; ಮಾಲೀಕರು ಅಂಬಾನಿ, ಅದಾನಿ, ಟಾಟಾ ಅಲ್ಲ!

ಇದು ಬಹಳ ಲಾಭದಾಯಕ ವ್ಯವಹಾರವಾಗಿದೆ. ಆದ್ದರಿಂದ, ಇದಕ್ಕೆ ಕೆಲವು ಅಗತ್ಯ ಪರವಾನಗಿಗಳು ಮತ್ತು ಸರ್ಕಾರದ ಅನುಮತಿಗಳು ಬೇಕಾಗುತ್ತವೆ. ವ್ಯಾಪಾರವು ಸಣ್ಣ ಪ್ರಮಾಣದಲ್ಲಿದ್ದರೂ, ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ತೆಗೆದುಕೊಳ್ಳುವುದು ಉತ್ತಮ. ನೀವು ಸ್ಥಳೀಯ ಅಂಗಡಿಗಳಿಗೆ ಇದನ್ನು ಮಾರಾಟ ಮಾಡಬಹುದು. ಆನ್ಲೈನ್ ಮೂಲಕವೂ ಇದರ ಮಾರಾಟ ಮಾಡಿ ಹಣ ಸಂಪಾದನೆ ಮಾಡಬಹುದು. ಇಲ್ಲಿ ಕಾಂಪಿಟೇಶನ್ ಹೆಚ್ಚಿರುವ ಕಾರಣ ನೀವು ಗುಣಮಟ್ಟಕ್ಕೆ ಆದ್ಯತೆ ನೀಡಬೇಕಾಗುತ್ತದೆ. 

Latest Videos
Follow Us:
Download App:
  • android
  • ios