ಕೆಲಸ ಸಿಗದಕ್ಕೆ ನೊಂದು ಬ್ಯುಸಿನೆಸ್ ಅರಂಭ: ಇಂದು 4000 ಸಿಬ್ಬಂದಿಗೆ ಸಂಬಳ ನೀಡುವ ನೀರಜ್ ಸಕ್ಸಸ್ ಕಥೆ

ಕೆಲಸ ಸಿಗದೆ ನಿರಾಶೆಗೊಂಡ ನೀರಜ್ ತಿವಾರಿ, ಹೊಸ ಬ್ಯುಸಿನೆಸ್ ಆರಂಭಿಸಿ ಇಂದು 4000 ಉದ್ಯೋಗಿಗಳಿಗೆ ಸಂಬಳ ನೀಡುತ್ತಿದ್ದಾರೆ. HiTech Human Capital (India) Ltd ಕಂಪನಿಯ ಸಿಇಓ ಆಗಿರುವ ಅವರು, ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ನೀಡಿ ಯಶಸ್ಸು ಗಳಿಸಿದ್ದಾರೆ.

HiTech Human Capital India Ltd Managing Director CEO Neeraj Tiwari Success Story

ಕೆಲಸ ಸಿಗದಕ್ಕೆ ನೊಂದು ಬ್ಯುಸಿನೆಸ್ ಅರಂಭ; ಇಂದು 4000 ಸಿಬ್ಬಂದಿಗೆ ಸಂಬಳ ಕೊಡ್ತಿರೊ ನೀರಜ್ ತಿವಾರಿ ಕಥೆ


Neeraj Tiwari Success Story: ಓದೋದು ಮುಗಿದ  ಬಳಿಕ ಕೆಲಸ  ಸಿಗುವ ಅವಕಾಶಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಕೈ ತುಂಬಾ ಸಂಬಳ ನೀಡುವ ಕೆಲಸಕ್ಕಾಗಿ  ಯುವ ಸಮುದಾಯ ಸಾಕಷ್ಟು  ಪ್ರಯತ್ನಿಸುತ್ತೇವೆ. ಆದ್ರೆ ಕೆಲಸ ಸಿಗದೇ ನಿರಾಶೆಗೊಳ್ಳುತ್ತಾರೆ. ಆದ್ರೆ ಕೆಲವರು ನಿರಾಶೆಗೊಳ್ಳದೇ ಹೊಸ ಮಾರ್ಗದಲ್ಲಿ ಹೋಗಿ ಯಶಸ್ವಿಯಾಗುತ್ತಾರೆ. ಇಂದು ನಾವು ನಿಮಗೆ ಕೆಲಸ  ಸಿಗದೇ ಇದ್ದಾಗ ಹೊಸ ಬ್ಯುಸಿನೆಸ್ ಆರಂಭಿಸಿ ಯಶಸ್ವಿಯಾದ ವ್ಯಕ್ತಿಯ ಬಗ್ಗೆ ಹೇಳುತ್ತಿದ್ದೇವೆ. ಇಂದು 4,000 ಉದ್ಯೋಗಿಗಳಿಗೆ ಈ ವ್ಯಕ್ತಿ ಸಂಬಳ ನೀಡುತ್ತಿದ್ದಾರೆ. ನೀರಜ್ ತಿವಾರಿ ತಮ್ಮ ವೃತ್ತಿಜೀವನ ಆರಂಭಿಸುವಾಗ ತುಂಬಾನೇ ಕಷ್ಟಗಳನ್ನು ಎದುರಿಸಿದ್ದರು.

ನೀರಜ್ ತಿವಾರಿ  HiTech Human Capital (India) Ltd ಕಂಪನಿಯ  ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಆಗಿದ್ದಾರೆ. ನೀರಜ್ ತಿವಾರಿ ಸಹ ಆರಂಭದಲ್ಲಿ ಹಲವು ಸಂದರ್ಶನಗಳನ್ನು ಎದುರಿಸಿ ರಿಜೆಕ್ಟ್ ಆಗಿದ್ದರು. ಅನೇಕ ಸಂದರ್ಶನಗಳನ್ನು  ನೀಡಿದ್ರೂ ನೀರಜ್ ತಿವಾರಿ ಅವರಿಗೆ ಉದ್ಯೋಗ ಸಿಕ್ಕಿರಲಿಲ್ಲ. ಯಾವುದೇ ಸಂದರ್ಶನಕ್ಕೂ ಹೋದ್ರೂ ನಾವು ನಿಮಗೆ ತಿಳಿಸುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರು. ಆದರೆ ಇದ್ಯಾವುದಕ್ಕೂ ನೀರಜ್ ತಿವಾರಿ ನಿರಾಶೆಗೊಂಡಿರಲಿಲ್ಲ. ಕೊನೆಗೂ ಎಲ್ಲಿಯೂ ಕೆಲಸ ಸಿಗದಿದ್ದಾಗ ಹೊಸದರದತ್ತ ಮುಖ ಮಾಡಿದರು. ಅಂದು ತೆಗೆದುಕೊಂಡ ದೃಢ ನಿರ್ಧಾರದಿಂದ ನಾಲ್ಕು ಸಾವಿರ ಮಂದಿಗೆ ಉದ್ಯೋಗ ನೀಡಿದ್ದಾರೆ.

ನೀರಜ್ ತಿವಾರಿ ಉತ್ತಮ ಗುಣಮಟ್ಟದ ಸೇವೆ ನೀಡಲು ಪ್ರಯತ್ನಿಸಿದರು. ಸೇವೆಯ ಗುಣಮಟ್ಟದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳಲಿಲ್ಲ. ಇತರರಿಗಿಂತ ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆಗಳನ್ನು ನೀಡಲು ಪ್ರಾರಂಭಿಸಿದ ನೀರಜ್ ತಿವಾರಿ ಕ್ರಮೇಣ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾದರು. ನೀರಜ್ ತಿವಾರಿ ಕಾಲಕ್ಕೆ ತಕ್ಕಂತೆ ತಮ್ಮ ಕಂಪನಿಯ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇದ್ದರು. ಇಂದು HHCiL ವ್ಯಾಪಕ ಶ್ರೇಣಿಯ ಸೇವೆಗಳನ್ನು ಒದಗಿಸುತ್ತದೆ. ಭದ್ರತಾ ಪರಿಹಾರ, ನಗದು ಪರಿಹಾರ, ಸೌಲಭ್ಯ ನಿರ್ವಹಣೆ ಪರಿಹಾರ, ವೇತನದಾರರ ನಿರ್ವಹಣೆ, ಅಗ್ನಿ ಮತ್ತು ಸುರಕ್ಷತೆ ತರಬೇತಿ, ಎಲೆಕ್ಟ್ರಾನಿಕ್ ಪರಿಹಾರ, ಕಾರ್ಪೊರೇಟ್ ಅಪಾಯ ನಿರ್ವಹಣೆಯನ್ನು ಸುಧಾರಿಸುವ ಮೂಲಕ ಮಾರುಕಟ್ಟೆಯಲ್ಲಿ ಭದ್ರ ಬುನಾದಿ ಹಾಕಿಕೊಂಡರು.

ಇದನ್ನೂ ಓದಿ: ₹70,000 ಸಂಬಳ ಬಿಟ್ಟು ರೈತರಿಗಾಗಿ 'ಕೃಷಿ ಆಸ್ಪತ್ರೆ' ಆರಂಭಿಸಿದ ಯುವಕ!

ಇಂದು ನೀರಜ್ ತಿವಾರಿಯವರ  HiTech Human Capital (India) Ltd ಕಂಪನಿ ದೇಶದ 12 ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದೀಗ ನೀರಜ್ ತಿವಾರಿ ಅವರ ಕಂಪನಿ ಐಪಿಓ ತೆಗೆದುಕೊಳ್ಳಲು ನಿರ್ಧರಿಸಿದೆ. ವರದಿಯೊಂದರ ಪ್ರಕಾರ, HHCiL  2027-28ವರೆಗೆ ಐಪಿಓ ತೆಗೆದುಕೊಂಡು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಕಂಪನಿ ಆರಂಭಿಸಿದ ಕೇವಲ ಆರು ವರ್ಷದಲ್ಲಿಯೇ HHCiL ಗುಜರಾತಿನಲ್ಲಿ ಸರ್ವಶ್ರೇಷ್ಠ ಸುರಕ್ಷಾ ಏಜೆನ್ಸಿಯ ಗೌರವಕ್ಕೆ ಪಾತ್ರವಾಗಿದೆ. 2017ರಲ್ಲಿ ಯಂಗ್ ಅಚಿವರ್ಸ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಿ ನೀರಜ್ ತಿವಾರಿ ಅವರನ್ನು ಗೌರವಿಸಲಾಗಿದೆ.

ಇದನ್ನೂ ಓದಿ: 1 ಕೋಟಿ ರೂ ವೇತನದ ಉದ್ಯೋಗ ಬಿಟ್ಟು 4000 ಕೋಟಿ ಮೌಲ್ಯದ ಸೌಂದರ್ಯವರ್ಧಕ ಕಂಪೆನಿ ಕಟ್ಟಿದ ವಿನೀತಾ ಸಿಂಗ್!

Latest Videos
Follow Us:
Download App:
  • android
  • ios