Asianet Suvarna News Asianet Suvarna News

ಪಾನ್ ಶಾಪ್ ಶುರು ಮಾಡಲು ಬೇಡ ದೊಡ್ಡ ಮೊತ್ತ, ತರುತ್ತೆ ಹೆಚ್ಚಿನ ಆದಾಯ!

ಹೂಡಿಕೆ ಕಡಿಮೆ ಇರಬೇಕು, ಕೆಲಸ ತುಂಬಾ ಇರಬಾರದು, ತುಂಬಾ ಕಿರಿಕಿರಿ ಇಲ್ಲದೆ ಆರಾಮವಾಗಿ ವ್ಯಾಪಾರ ಶುರು ಮಾಡಿ ತಕ್ಕಮಟ್ಟಿಗೆ ಹಣ ಗಳಿಸಬೇಕು ಎನ್ನುವವರಿಗೂ ಸಾಕಷ್ಟು ಆಯ್ಕೆಯಿದೆ. ಅದ್ರಲ್ಲಿ ಪಾನ್ ಶಾಪ್ ಕೂಡ ಒಂದು. 
 

Business Idea Start Paan Shop Business
Author
First Published Feb 4, 2023, 10:40 AM IST

ನಮ್ಮ ದೇಶದಲ್ಲಿ ಪಾನ್ ಹಾಕೋರ ಸಂಖ್ಯೆ ಸಾಕಷ್ಟಿದೆ. ಊಟವಾದ್ಮೇಲೆ ಬಾಯಿಗೆ ಅಡಿಕೆ – ಎಲೆ ಹೋಗಿಲ್ಲವೆಂದ್ರೆ ಸಮಾಧಾನ ಆಗೋದಿಲ್ಲ. ಈಗಿನ ದಿನಗಳಲ್ಲಿ ಬರೀ ಅಡಿಕೆ – ಎಲೆ ಮಾತ್ರವಲ್ಲ ಅದಕ್ಕೆ ಬೇರೆ ಬೇರೆ ವಸ್ತುಗಳನ್ನು ಹಾಕಿ ರುಚಿ – ರುಚಿ ಪಾನ್ ಸಿದ್ಧಪಡಿಸಲಾಗುತ್ತದೆ. ಈ ಪಾನ್ ಗೆ ಬೇಡಿಗೆ ಹೆಚ್ಚು. ಭಾರತದ ಗಲ್ಲಿ – ಗಲ್ಲಿಯಲ್ಲಿ ಪಾನ್ ಶಾಪ್ ಗಳನ್ನು ನೀವು ನೋಡ್ಬಹುದು. ಕಡಿಮೆ ಹೂಡಿಕೆಯಲ್ಲಿ ಲಾಭದಾಯಕ ವ್ಯವಹಾರ ಮಾಡ್ಬೇಕೆಂದ್ರೆ ನೀವೂ ಪಾನ್ ಶಾಪ್ ತೆರೆಯಬಹುದು. ನಾವಿಂದು ಪಾನ್ ಶಾಪ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ. 

ಪಾನ್ ಶಾಪ್ (Pan Shop ) ವ್ಯವಹಾರ : ಪಾನ್ ಶಾಪ್ ವ್ಯಾಪಾರವನ್ನು ನೀವು ಮನೆಯಲ್ಲಿಯೇ ಮಾಡಬಹುದು. ಮನೆ ರಸ್ತೆ ಬದಿಯಲ್ಲಿದ್ದರೆ ಆರಾಮವಾಗಿ ಈ ವ್ಯಾಪಾರ (Business) ಶುರು ಮಾಡಬಹುದು. ಹಳ್ಳಿಯಲ್ಲೂ ಈ ವ್ಯಾಪಾರ ನಡೆಸಬಹುದು. ಮಾರುಕಟ್ಟೆ ಅಥವಾ ಜನನಿಬಿಡ ಪ್ರದೇಶದಲ್ಲಿ ಸಣ್ಣ ಜಾಗವನ್ನು ಬಾಡಿಗೆಗೆ ಪಡೆದು ಅಲ್ಲಿಯೂ ನೀವು ಪಾನ್ ಮಾರಾಟ ಮಾಡಬಹುದು. ಪಾನ್ ವ್ಯಾಪಾರಕ್ಕೆ ವೀಳ್ಯದೆಲೆ, ಅಡಿಕೆ, ಜರ್ದಾ, ಸುಣ್ಣ, ಗುಲ್ಕನ್, ಸೋಂಪ್, ಚಾಕೊಲೇಟ್ ಹೀಗೆ ಕೆಲ ವಸ್ತುಗಳು ಅಗತ್ಯವಿರುತ್ತದೆ. ಪಾನ್ ಸೇವನೆ ಮಾಡುವವರು ನೀವಾಗಿದ್ದರೆ ಪಾನ್ ಬಗ್ಗೆ ಐಡಿಯಾ ಇರುತ್ತದೆ. ಇಲ್ಲವೆಂದ್ರೆ ಯುಟ್ಯೂಬ್  ನೋಡಿ ನೀವು ಪಾನ್ ತಯಾರಿಸೋದು ಹೇಗೆ ಎಂಬುದನ್ನು ಕಲಿಯಬಹುದು. ನೀವು ರುಚಿಕರ ಪಾನ್ ತಯಾರಿಸಿದ್ರೆ ನಿಮ್ಮ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಾಗೋದ್ರಲ್ಲಿ ಎರಡು ಮಾತಿಲ್ಲ. 

Business Ideas : ಕಲಿಸುವ ಸಾಮರ್ಥ್ಯ ನಿಮಗಿದ್ರೆ ಈ ಕೆಲಸ ಬೆಸ್ಟ್

ಪಾನ್ ಅಂಗಡಿಗೆ ಹೆಸರಿಡಬೇಕು ಎನ್ನುವ ಅಗತ್ಯವಿಲ್ಲ. ಅನೇಕರು ಹೊಟೇಲ್ (Hotel) ಅಥವಾ ರೆಸ್ಟೋರೆಂಟ್ ಮುಂದೆ ಸಣ್ಣದಾಗಿ ಒಂದು ಟೇಬಲ್ ಇಟ್ಕೊಂಡು ಪಾನ್ ಶಾಪ್ ತೆರೆಯುತ್ತಾರೆ. ಮತ್ತೆ ಕೆಲವರು ಸಣ್ಣ ಗೂಡಂಗಡಿ ಇಟ್ಟುಕೊಳ್ಳುತ್ತಾರೆ. ನೀವು ಯಾವ ರೀತಿ ಪಾನ್ ಶಾಪ್ ಶುರು ಮಾಡ್ತಿರಿ ಎನ್ನುವುದು ನಿಮಗೆ ಬಿಟ್ಟಿದ್ದು. ಅನುಕೂಲವಿದ್ರೆ ಅದಕ್ಕೊಂದು ಹೆಸರಿಡಿ. ಮೊದಲೇ ಹೇಳಿದಂತೆ ಈ ಪಾನ್ ಶಾಪನ್ನು ನೀವು ಎಲ್ಲಿ ಬೇಕಾದ್ರೂ ಮಾಡಬಹುದು. ಟೀ ಅಂಗಡಿ ಮುಂದೆ ನೀವು ಪಾನ್ ಶಾಪ್ ಶುರು ಮಾಡಿದ್ರೆ ಲಾಭ ಹೆಚ್ಚು. ಇದಕ್ಕೆ ಹೆಚ್ಚು ಶ್ರಮದ ಅಗತ್ಯವಿಲ್ಲ.

ಪಾನ್ ಅಂಗಡಿಗೆ ಪರವಾನಗಿ (License) ಮತ್ತು ನೋಂದಣಿ : ಪಾನ್ ಅಂಗಡಿಯನ್ನು ತೆರೆಯಲು ನಿಮಗೆ ಯಾವುದೇ ರೀತಿಯ ನೋಂದಣಿ ಮತ್ತು ಪರವಾನಗಿ ಅಗತ್ಯವಿಲ್ಲ. ನೀವು ಇತರ ವ್ಯಾಪಾರದ ಜೊತೆಗೆ ಪಾನ್ ಅಂಗಡಿಯನ್ನು ತೆರೆಯಲು ಬಯಸಿದ್ರೆ ನೋಂದಣಿ ಮಾಡಿ.  ಇಲ್ಲದಿದ್ದರೆ  ನೀವು ಪಾನ್ ವ್ಯವಹಾರದಲ್ಲಿ ಯಾವುದೇ ನೋಂದಣಿಯನ್ನು ಮಾಡಬೇಕಾಗಿಲ್ಲ.  

ಪಾನ್ ಶಾಪ್ ವ್ಯಾಪಾರದ ವೆಚ್ಚ : ಪಾನ್ ಅಂಗಡಿ ವ್ಯಾಪಾರವು ಹೆಚ್ಚು ವೆಚ್ಚದ ವ್ಯಾಪಾರವಲ್ಲ. ಇದನ್ನು ಯಾರು ಬೇಕಾದರೂ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಿ ವ್ಯಾಪಾರ ಶುರು ಮಾಡಬಹುದು. ಬಂದ ಹಣವನ್ನೇ ನೀವು ಮತ್ತೆ ವ್ಯಾಪಾರಕ್ಕೆ ಬಳಸಬಹುದು.

ವಿಷಕಾರಿ ಹಾವು ಸಾಕಣೆ ಮೂಲಕವೇ 100 ಕೋಟಿ ಸಂಪಾದಿಸುತ್ತೆ ಈ ಗ್ರಾಮ!

ಪಾನ್ ಶಾಪ್ ವ್ಯಾಪಾರದಿಂದ ಲಾಭ : ಪಾನ್ ದುಬಾರಿಯಲ್ಲ. ಆದ್ರೆ ದಿನಕ್ಕೆ 50 – 100 ಪಾನ್ ಮಾರಾಟ ಮಾಡಿದ್ರೆ ಹೆಚ್ಚು ಲಾಭ ಪಡೆಯಬಹುದು. ಪುರುಷರು ಹಾಗೂ ಮಹಿಳೆಯರು ಎಲ್ಲರೂ ಪಾನ್ ಇಷ್ಟಪಡ್ತಾರೆ. ನೀವು ಯಾವ ಸ್ಥಳದಲ್ಲಿ ಪಾನ್ ಶಾಪ್ ತೆರೆದಿದ್ದೀರಿ ಎಂಬುದು ಕೂಡ ಮುಖ್ಯವಾಗುತ್ತದೆ. ಹೆಚ್ಚು ಜನರು ಓಡಾಡುವ, ಬೇಡಿಕೆ ಹೆಚ್ಚಿರುವ ಜಾಗದಲ್ಲಿ ಲಾಭ ಹೆಚ್ಚು. ನೀವು ದಿನಕ್ಕೆ 100 ಪಾನ್ ಮಾರಾಟ ಮಾಡಿದ್ರೆ 400 – 600 ರೂಪಾಯಿ ಗಳಿಸಬಹುದು. ಮಾರಾಟ ಹೆಚ್ಚಾದಂತೆ ಗಳಿಕೆ ಹೆಚ್ಚಾಗುತ್ತದೆ. ಇದನ್ನು ನೀವು ಪಾರ್ಟ್ ಟೈಂ ರೂಪದಲ್ಲಿಯೂ ಶುರು ಮಾಡಬಹುದು.

Follow Us:
Download App:
  • android
  • ios