Asianet Suvarna News Asianet Suvarna News

ವಿಷಕಾರಿ ಹಾವು ಸಾಕಣೆ ಮೂಲಕವೇ 100 ಕೋಟಿ ಸಂಪಾದಿಸುತ್ತೆ ಈ ಗ್ರಾಮ!

ಹಾವುಗಳೆಂದರೆ ಮಾರು ದೂರ ಹೋಗುವ ನಾವುಗಳು ಒಂದೆಡೆಯಾದರೆ, ಚೀನಾದ ಗ್ರಾಮವೊಂದರಲ್ಲಿ ವಿಷಕಾರಿ ಹಾವುಗಳ ಸಾಕಣೆ ಮಾಡುವ ಮೂಲವೇ 100 ಕೋಟಿ ರೂ ಆದಾಯ ಗಳಿಸುತ್ತಿದೆ. ಆಲ್ಕೋಹಾಲ್‌, ಔಷಧಿ ಸೇರಿದಂತೆ ಇತರ ಖಾದ್ಯಗಳಿಗೆ ಈ ಹಾವಿ ವಿಷಗಳನ್ನು ಬಳಸಲಾಗುತ್ತದೆ. 
 

Yang Hongchang Snake Factory And Snake Medicine China Snake Village Story san
Author
First Published Feb 3, 2023, 12:35 PM IST

ನವದೆಹಲಿ (ಫೆ.3): ಭತ್ತ, ಗೋಧಿಯನ್ನು ಭಾರತೀಯರು ತಮ್ಮ ಭೂಮಿಯಲ್ಲಿ ಬೆಳೆಯುತ್ತಾರೆ. ಇನ್ನು ಕುರಿ, ಕೋಳಿ ಹಾಗೂ ಹಂದಿ ಸಾಕಣೆಯೂ ಭಾರತದಲ್ಲಿ ಜನಪ್ರಿಯ. ಆದರೆ, ಚೀನಾದ ಗ್ರಾಮವೊಂದು ವಿಷಕಾರಿ ಹಾವುಗಳ ಸಾಕಣೆ ಮಾಡುವ ಮೂಲಕ ಪ್ರಸಿದ್ಧಿ ಪಡೆದುಕೊಂಡಿದೆ. ಈ ಗ್ರಾಮ ವಿಷಕಾರಿ ಹಾವುಗಳ ವಿಷವನ್ನು ಮಾರಾಟ ಮಾಡುವ ಮೂಲಕವೇ ಶ್ರೀಮಂತವಾಗಿದೆ. ಅಂದಾಜಿನ ಪ್ರಕಾರ, 100 ಕೋಟಿ ರೂಪಾಯಿಗೂ ಹಣವನ್ನು ವಿಚಕಾರಿ ಹಾವುಗಳ ಸಾಕಣೆ ಮೂಲಕ ಸಂಪಾದನೆ ಮಾಡುತ್ತದೆ. ಕೋವಿಡ್‌ ಸಮಯದ ವೇಳೆ ಉದ್ಯಮಕ್ಕೆ ಏಟು ಬಿದ್ದಿತ್ತಾದರೂ, ಈಗ ಮತ್ತೆ ಉದ್ಯಮ ಚೇತರಿಕೆ ಕಂಡಿದೆ. ಹಾವಿನ ವಿಷ ಮಾತ್ರವಲ್ಲದೆ, ಅದರ ಚರ್ಮ, ಹಾವಿನ ಮೊಟ್ಟೆಗಳು ಎಲ್ಲವನ್ನೂ ವಾಣಿಜ್ಯ ಉದ್ದೇಶಕ್ಕಾಗಿ ಈ ಗ್ರಾಮ ಬಳಕೆ ಮಾಡುತ್ತದೆ. ಕೆಲವೆಡೆ ಆಲ್ಕೋಹಾಲ್‌ಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಾವಿನ ವಿಷಗಳನ್ನು ಬೆರೆಸಿ ಕುಡಿಯುತ್ತಾರ. ಇನ್ನೂ ಕೆಲವು ಕಡೆ ಹಾವಿನ ವಿಷವನ್ನು ಒಣಗಿಸಿ ಪೌಡರ್‌ ರೀತಿ ಮಾಡುವ ಕೆಲಸವೂ ನಡೆಯುತ್ತದೆ. ಇವೆಲ್ಲದಕ್ಕೂ ವಿಷ ಪೂರೈಕೆಯಾಗುವುದು ಚೀನಾದ ಯಾಂಗ್‌ ಹೊಂಗ್‌ಚಾಂಗ್‌ ಎನ್ನುವ ವ್ಯಕ್ತಿ ನಿರ್ಮಾಣ ಮಾಡಿರುವ ಹಾವಿನ ಫ್ಯಾಕ್ಟರಿಯಿಂದ!

ಜಗತ್ತಿನಲ್ಲಿ 3 ಸಾವಿರಕ್ಕೂ ವಿಷಕಾರಿ ಹಾವಿನ ಪ್ರಬೇಧಗಳಿವೆ. ಹಾವು ಎಂದಾಗ ಕನಸಿನಲ್ಲಿಯೂ ಬೆಚ್ಚಿಬೀಳುವ ಜನರಿರುವ ನಡುವೆ ಚೀನಾದ ಒಂದು ಗ್ರಾಮ ಇಂಥ ವಿಷಷಕಾರಿ ಹಾವಿನಿಂದಲೇ ಭವಿಷ್ಯ ರೂಪಿಸಿಕೊಂಡಿದೆ ಎಂದರೆ ಅಚ್ಚರಿಯಾಗದೇ ಇರದು. ಅವರ ಉದ್ಯಮ ಎಷ್ಟು ಜನಪ್ರಿಯವಾಗಿದೆ ಎಂದರೆ, ಈ ಗ್ರಾಮದಲ್ಲಿರುವ ಬಹುತೇಕರು ಈಗ ಶ್ರೀಮಂತರಾಗಿದ್ದಾರೆ. ವಿಷಕಾರಿ ಹಾವುಗಳು ಇಲ್ಲಿನ ಜನರ ಅದೃಷ್ಟವನ್ನೇ ಬದಲಿಸಿದ್ದೇ ರೋಚಕ ಕಥೆ.

ಚೀನಾದ ಜಿಸಿಕಿಯಾವೊ ಗ್ರಾಮದ ಯಾಂಗ್‌ ಹಾಂಗ್‌ಚಾಂಗ್‌ ಈ ವಿಷಕಾರಿ ಹಾವಿನ ಮೂಲಕವೇ ಶ್ರೀಮಂತರಾಗಿದ್ದಾರೆ. ತಮ್ಮ ಗ್ರಾಮದಲ್ಲಿ ಹಾವುಗಳ ಸಾಕಣೆಯನ್ನು ಮೊದಲಿಗೆ ಆರಂಭಿಸಿದ್ದೇ ಯಾಂಗ್‌ ಹಾಂಗ್‌ ಚಾಂಗ್‌. ಬಳಿಕ ಇದು ಇಡೀ ಗ್ರಾಮಕ್ಕೆ ವಿಸ್ತರಣೆಯಾಯಿತು. ಇಂದು ಜಿಸಿಚ್ಯಾವ್‌ ಗ್ರಾಮದಲ್ಲಿ ಬೇಕಾದಷ್ಟು ಹಾವಿನ ಸಾಕಣೆ ಫ್ಯಾಕ್ಟರಿ ಸಿಗುತ್ತದೆ. ಅದಕ್ಕೆ ಮೂಲ ಕಾರಣರಾದವರು ಯಾಂಗ್‌ ಹಾಂಗ್‌ಚಾಂಗ್‌.  ಇನ್ನು ಯಾಂಗ್‌, ಹಾವಿನ ಸಾಖಣೆ ಆರಂಭಿಸಿದ್ದು ಕೂಡ ಸಾಹಸಗಾಥೆ. 18ನೇ ವರ್ಷದಲ್ಲಿ ಅವರಿಗೆ ಅಪರೂಪದ ಬೆನ್ನಿನ ಸಮಸ್ಯೆ ಕಾಣಿಸಿಕೊಂಡಿತ್ತು. ವೈದ್ಯರು, ಹಾವು ತಿಂದರೆ ಸರಿಯಾಗುತ್ತದೆ ಎಂದು ಹೇಳಿದ್ದರಂತೆ. ಇದಕ್ಕಾಗಿ ಯಾಂಗ್‌, ಒಮ್ಮೊಮ್ಮೆ ಇಂಥ ಹಾವುಗಳನ್ನು ಮದ್ಯದ ಬಾಟಲಿಯಲ್ಲಿ ಹಾಕಿಕೊಂಡು ಕುಡಿಯುತ್ತಿದ್ದರೆ, ಇನ್ನೂ ಕೆಲವೊಮ್ಮೆ ಅವುಗಳನ್ನು ಸುಟ್ಟು ತಿನ್ನುತ್ತಿದ್ದರು. ಕೆಲವೊಮ್ಮೆ ಅವುಗಳನ್ನು ಪುರ್ತಿಯಾಗಿ ಸುಟ್ಟು ಪೌಡರ್‌ ಮಾಡಿ ತಿನ್ನುತ್ತಿದ್ದರು. 

ಅಚ್ಚರಿ ಎಂದರೆ, ಇದರಿಂದ ಯಾಂಗ್‌ ಅವರ ಆರೋಗ್ಯ ಕೂಡ ಸುಧಾರಿಸಿತ್ತಲ್ಲದೆ, ಬ್ಯುಸಿನೆಸ್‌ ಐಡಿಯಾ ಕೂಡ ಸಿಕ್ಕಿತ್ತು. ಹಾವು ಸಾಕಣೆಯ ಫ್ಯಾಕ್ಟರಿ ಆರಂಭಿಸಲು ಯಾಂಗ್‌ ತೀರ್ಮಾನಿಸಿದ್ದರು.‌ 1970ರ ದಶಕದಲ್ಲಿ ಕೆರೆಯ ದಡದಲ್ಲಿ ಯಾಂಗ್‌ ಅವರ ಗ್ರಾಮದಲ್ಲಿ ಕಡು ಬಡತನವಿತ್ತು. ಆದರೆ, ಇಂಥ ಗ್ರಾಮದಲ್ಲಿ ಯಾಂಗ್‌ ಆರಂಭಿಸಿದ್ದ ಫ್ಯಾಕ್ಟರಿ ಯಶಸ್ಸು ಕಂಡ ಬೆನ್ನಲ್ಲಿಯೇ, ಗ್ರಾಮದ ಉಳಿದವರೂ ಕೂಡ ಇಂಥದ್ದೇ ಫ್ಯಾಕ್ಟಿ ಆರಂಭ ಮಾಡಲು ತೀರ್ಮಾನಿಸಿದರು.

ಆನೇಕಲ್‌ನಲ್ಲೊಂದು ವಿಸ್ಮಯ: ಒಂದೇ ಕೊಂಬೆಗೆ ಸರತಿಯಲ್ಲಿ ಬರುವ ನಾಗರ ಹಾವುಗಳು!

30 ಲಕ್ಷಕ್ಕೂ ಅಧಿಕ ಹಾವುಗಳು: ಈ ಗ್ರಾಮದಲ್ಲಿ ವರ್ಷಕ್ಕೆ 30 ಲಕ್ಷಕ್ಕೂ ಅಧಿಕ ಹಾವುಗಳು ಜನ್ಮತಾಳುತ್ತದೆಯಂತೆ. ಕೋಳಿ ಸಾಕಣೆಯ ರೀತಿಯಲ್ಲಿಯೇ ಹಾವುಗಳ ಮೊಟ್ಟೆಗಳನ್ನು ಬಳಸಿಕೊಂಡು ಹಾವನ್ನು ಬೆಳೆಸುತ್ತಾರೆ. ಹಾವಿನ ಬಳಿ ಮೊಟ್ಟೆಗಳನ್ನು ಇರಿಸಿದ ಬಳಿಕ ಅವುಗಳು ಅದನ್ನು ತಿನ್ನಬಾರದು ಎನ್ನುವ ಕಾರಣಕ್ಕೆ 15 ದಿನಗಳ ಕಾಲ ಹಾವಿನ ಬಾಯಿಗೆ ಹೊಲಿಗೆ ಹಾಕಲಾಗುತ್ತದೆ. ಬಳಿಕ ಇವುಗಳನ್ನು ಶೇಖರಿಸಿ ಇಡಲಾಗುತ್ತದೆ. ಜೂನ್‌ ಅಂತ್ಯದಿಂದ ಜುಲೈ ಆರಂಭದ ದಿನಗಳಲ್ಲಿ ಈ ಕೆಲಸ ನಡೆಯುತ್ತದೆ. ಈ ಸಮಯದಲ್ಲಿಯೇ ಹಾವುಗಳ ಹೆಚ್ಚಿನ ಮೊಟ್ಟೆಗಳನ್ನು  ಶೇಖರಿಸಲಾಗುತ್ತದೆ. ಹಾವುಗಳ ಮೊಟ್ಟೆಗಳನ್ನು 3 ರಿಂದ 4 ಗಂಟೆಗಳ ಒಳಗೆ ಶೇಖರಿಸಿ ಇಡದೇ ಹೋದರೆ, ಅವು ಮತ್ತೆ ಉಪಯೋಗಕ್ಕೆ ಬರೋದಿಲ್ಲ ಎಂದು ಅಲ್ಲಿನ ಜನರು ಹೇಳುತ್ತಾರೆ. ಮೊಟ್ಟೆಗಳನ್ನು ತೆಗೆದ ಬಳಿಕ ಅವುಗಳನ್ನು ಮರಳಿಂದಲೇ ತುಂಬಿರುವ ಬಾಕ್ಸ್‌ಗಳಲ್ಲಿ ಜೋಪಾನವಾಗಿ ಇಡುತ್ತಾರೆ. ಎರಡು ತಿಂಗಳ ಬಳಿಕ ಇವುಗಳಿಂದ ಹಾವಿನ ಮರಿಗಳು ಹೊರಬರುತ್ತವೆ. ಒಂದು ಬ್ಯಾಚ್‌ನಲ್ಲಿ ಅಂದಾಜು 10 ಸಾವಿರಕ್ಕೂ ಅಧಿಕ ಹಾವುಗಳು ಹೊರಬರುತ್ತದೆಯಂತೆ. ಪ್ರತಿ ವರ್ಷ ಅಂದಾಜು 30 ಲಕ್ಷ ಹಾವುಗಳ ಉತ್ಪಾದನೆಯಾಗುತ್ತದೆ. 

ಪುಣೆಯಲ್ಲಿ ಪತ್ತೆಯಾಯ್ತು ಅಪರೂಪದ ಬಿಳಿ ಹಾವು

ಸಾಂಪ್ರದಾಯಿಕವಾಗಿ ಚೀನಿಯರು ಹಾವನ್ನು ಬಳಕೆ ಮಾಡುತ್ತಾರೆ. ಇದರ ಅಂಗಗಳನ್ನು ವಿವಿಧ ಕಾರ್ಯಗಳಿಗೆ ಬಳಸುತ್ತಾರೆ. ಹಾವಿನ ವಿಷ ಹಾಗೂ ಸಣ್ಣ ಸಣ್ಣ ಮೂಳೆಗಳನ್ನು ಚೀನಾದ ಪ್ರಖ್ಯಾತ ಔಷಧವನ್ನು ತಯಾರಿಸಲು ಬಳಸುತ್ತಾರೆ. ಕಂಟೇನರ್‌ಗಳಲ್ಲಿ ಹಾವಿನ ಬಾಯಿಯನ್ನು ಇರಿಸಿ ಅದರ ವಿಷವನ್ನು ತೆಗೆಯಲಾಗುತ್ತದೆ. ಅದನ್ನು ಒಣಗಿಸಿ ಪೌಡರ್‌ ಮಾಡುತ್ತಾರೆ. ಒಣಗಿದ ವಿಷಗಳನ್ನು ಔಷಧ ಕಂಪನಿಗಳು ಖರೀದಿ ಮಾಡುತ್ತವೆ.  ಇನ್ನು ಹಾವುಗಳ ಆಹಾರವನ್ನು ಚೀನಿಯರು ಬಹಳವಾಗಿ ಇಷ್ಟಪಡುತ್ತಾರೆ. ಚರ್ಮಗಳು ಸುಕ್ಕಾಗುವುದನ್ನು ತಡೆಯಲು, ಚರ್ಮದ ಆರೈಕೆ ಮಾಡಲು ಸ್ನೇಕ್‌ ಪೌಡರ್‌, ಸ್ನೇಕ್‌ ಕ್ರೀಮ್‌ ಹಾಗೂ ಸ್ನೇಕ್‌ ವೈನ್‌ಅನ್ನು ಬಳಕೆ ಮಾಡುತ್ತಾರೆ.

1970ರವರೆಗೆ ವಾರ್ಷಿಕವಾಗಿ 11 ಲಕ್ಷ ರೂಪಾಯಿ ಆದಾಯ ಹೊಂದಿದ್ದ ಈ ಗ್ರಾಮದಲ್ಲೀಗ, ಪ್ರತಿ ವರ್ಷ 100 ಕೋಟಿ ಆದಾಯವನ್ನೂ ಮೀರುತ್ತದೆ. ಇನ್ನು ಯಾಂಗ್‌ರನ್ನು ವಿಶ್ವದಲ್ಲಿಯೇ ಹಾವಿನ ರಾಜ ಎನ್ನುವ ಹೆಸರಿನಿಂದ ಕರೆಯುತ್ತಾರೆ.

Follow Us:
Download App:
  • android
  • ios