ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬೇಕು ಎನ್ನುವವರು ಆಹಾರ ಸೆಕ್ಷನ್ ಆಯ್ಕೆ ಮಾಡಿಕೊಳ್ಬೇಕು. ಯಾಕೆಂದ್ರೆ ಇದ್ರಲ್ಲಿ ಹೂಡಿಕೆ ಕಡಿಮೆಯಿದ್ರೂ ಕೈತುಂಬ ಲಾಭ ಬರುತ್ತೆ. ಆ ಸಾಲಿಗೆ ಈಗ ನಾವು ಹೇಳ್ತಿರುವ ವ್ಯಾಪಾರ ಕೂಡ ಸೇರಿದೆ. 

ಕಚೇರಿಯಲ್ಲಿ ಬಾಸ್ ಮುಂದೆ ಬೈಸಿಕೊಳ್ತಾ, ಸಂಬಳಕ್ಕೆ ಕೈ ಚಾಚ್ತಾ ಬೋರ್ ಆಗಿದೆ ಅನ್ನೋರು ಬ್ಯುಸಿನೆಸ್ ಬಗ್ಗೆ ಆಲೋಚನೆ ಮಾಡ್ಬಹುದು. ನಮ್ಮ ದೇಶದಲ್ಲಿ ಸಾಕಷ್ಟು ಅವಕಾಶವಿದೆ. ಒಂದೊಳ್ಳೆ ವ್ಯಾಪಾರ ಶುರು ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಜನರು ನಮ್ಮಲ್ಲಿದ್ದಾರೆ. ಅಧಿಕ ಬಂಡವಾಳವಿಲ್ಲದೆ ಹೆಚ್ಚು ಬೇಡಿಕೆಯಿರುವ ವ್ಯಾಪಾರವನ್ನು ನೀವು ಶುರು ಮಾಡಬಹುದು. ನಾವಿಂದು ಇಡೀ ದೇಶದಲ್ಲಿ ಬೇಡಿಕೆಯಲ್ಲಿರುವ ಹಾಗೂ ಎಂದೂ ಬೇಡಿಕೆ ಕಡಿಮೆ ಮಾಡಿಕೊಳ್ಳದ ವ್ಯಾಪಾರವೊಂದರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಮಂಡಕ್ಕಿ (ಕಡ್ಲೆಪುರಿ) ಯಾರಿಗೆ ಗೊತ್ತಿಲ್ಲ ಹೇಳಿ. ಈ ಮಂಡಕ್ಕಿ (Puffed Rice) ಯಲ್ಲಿ ಎರಡು ವಿಧವಿದೆ. ಒಂದು ಉಪ್ಪಿನಿಂದ ಕೂಡಿದ್ರೆ ಇನ್ನೊಂದು ಸೆಪ್ಪೆಯಾಗಿರುತ್ತದೆ. ಭಾರತದ ಮೂಲೆ ಮೂಲೆಯಲ್ಲೂ ಜನರು ಇದನ್ನು ಬಳಕೆ ಮಾಡ್ತಾರೆ. ಕರ್ನಾಟಕದಲ್ಲಿ ಚುರ್ಮುರಿ ಪ್ರಸಿದ್ಧಿಪಡೆದಿದೆ. ನೀವು ಬೀದಿ ಬೀದಿಗಳಲ್ಲಿ ಚುರ್ ಮುರಿ (Chur Muri) ಮಾರಾಟಗಾರರನ್ನು ನೋಡ್ಬಹುದು. ಇದಲ್ಲದೆ ಮಂಡಕ್ಕಿ ಉಂಡೆ, ಮಂಡಕ್ಕಿ ಒಗ್ಗರಣೆ ಹೀಗೆ ನಾನಾ ವಿಧಗಳಲ್ಲಿ ನೀವು ಮಂಡಕ್ಕಿಯನ್ನು ಬಳಕೆ ಮಾಡಲಾಗುತ್ತದೆ. ಕೆಲವರ ಮನೆಯಲ್ಲಿ ಬೆಳಿಗ್ಗಿನ ಉಪಹಾರದಲ್ಲಿ ಮಂಡಕ್ಕಿ ಸ್ಥಾನ ಪಡೆದಿರುತ್ತದೆ. ಈ ಮಂಡಕ್ಕಿ ತಯಾರಿಕಾ ಘಟಕ ನಿಮಗೆ ಲಾಭತರಬಲ್ಲ ವ್ಯಾಪಾರ (Business) ವಾಗಿದೆ.

ಅಣಬೆ ಕೃಷಿಯಿಂದಲೂ ಇಷ್ಟು ಸಂಪಾದಿಸ್ಬಹುದಾ? ಕೇರಳದ ಈ ತಾಯಿ-ಮಗನ ದಿನದ ಗಳಿಕೆ 40 ಸಾವಿರ ರೂ.!

ಮಂಡಕ್ಕಿ ತಯಾರಿಕಾ ಘಟಕ ಶುರು ಮಾಡೋದು ಹೇಗೆ ? : ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಗ್ರಾಮೋದ್ಯೋಗ ಉದ್ಯೋಗ ಯೋಜನೆಯಡಿ ಮಂಡಕ್ಕಿ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಯೋಜನಾ ವರದಿಯನ್ನು ಸಿದ್ಧಪಡಿಸಿದೆ. ಈ ಯೋಜನಾ ವರದಿಯ ಪ್ರಕಾರ, ನೀವು ಮಂಡಕ್ಕಿ ತಯಾರಿಕಾ ಘಟಕ ಶುರು ಮಾಡಲು 3.55 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಬಳಿ ಇಷ್ಟು ಹಣವಿಲ್ಲದೆ ಹೋದ್ರೆ ಚಿಂತಿಸುವ ಅಗತ್ಯವಿಲ್ಲ. ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಅಡಿಯಲ್ಲಿ ನೀವು ಮಂಡಕ್ಕಿ ತಯಾರಿಕಾ ಘಟಕ ಶುರು ಮಾಡಲು ಸಾಲವನ್ನು ಪಡೆಯಬಹುದು.

ಪರವಾನಗಿ ಅಗತ್ಯವೇ? : ಮಂಡಕ್ಕಿ ಘಟಕ ಶುರು ಮಾಡಲು ನಿಮಗೆ ಪರವಾನಗಿ ಅಗತ್ಯವಿರುತ್ತದೆ. ಮಂಡಕ್ಕಿ ಆಹಾರ ಪದಾರ್ಥದ ಅಡಿ ಬರುತ್ತದೆ. ಹಾಗಾಗಿ ನೀವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (FSSAI) ಆಹಾರ ಪರವಾನಗಿ ಪಡೆಯಬೇಕು. ಅಲ್ಲದೆ ನಿಮ್ಮ ವ್ಯಾಪಾರವನ್ನು ನೀವು ನೋಂದಣಿ ಮಾಡಬೇಕಾಗುತ್ತದೆ. 

ಮಂಡಕ್ಕಿ ಘಟಕ ಶುರು ಮಾಡಲು ಅಗತ್ಯವಿರುವ ಕಚ್ಚಾ ವಸ್ತುಗಳು : ಮಂಡಕ್ಕಿ ತಯಾರಿಕಾ ಘಟಕ ಶುರು ಮಾಡಲು ನೀವು ಭತ್ತ ಅಥವಾ ಅಕ್ಕಿಯನ್ನು ಬಳಸಬೇಕಾಗುತ್ತದೆ. ನೀವು ಎಷ್ಟು ಪ್ರಮಾಣದಲ್ಲಿ ಮಂಡಕ್ಕಿ ತಯಾರಿಸುತ್ತೀರಿ ಎನ್ನುವ ಆಧಾರದ ಮೇಲೆ ನೀವು ಅಕ್ಕಿಯನ್ನು ಖರೀದಿಸಬೇಕು. ಸ್ಥಳೀಯ ಮಾರುಕಟ್ಟೆಯಲ್ಲಿ ನೀವು ಅಕ್ಕಿಯನ್ನು ಖರೀದಿ ಮಾಡಬಹುದು. ಆದ್ರೆ ಖರೀದಿ ವೇಳೆ ನೀವು ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡ್ಬೇಕಾಗುತ್ತದೆ. ಮಂಡಕ್ಕಿಯನ್ನು ಹೆಚ್ಚಿನ ಶಾಖದ ಮೂಲಕ ತಯಾರಿಸಲಾಗುತ್ತದೆ. ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಶುರು ಮಾಡಲು ಬಯಸಿದ್ದರೆ ನೀವು ಯಂತ್ರ ಖರೀದಿಸುವು ಅಗತ್ಯವಿಲ್ಲ. ದೊಡ್ಡ ಪ್ಯಾನ್ ಒಂದು ನಿಮ್ಮ ಬಳಿ ಇದ್ರೆ ಸಾಕಾಗುತ್ತದೆ. ನೀವು ಮಂಡಕ್ಕಿಯನ್ನು ಪ್ಯಾಕೇಟ್ ಮಾಡಿ ಮಾರಾಟ ಮಾಡ್ತಿದ್ದರೆ ಪ್ಯಾಕೇಜಿಂಗ್ ಯಂತ್ರ ಮತ್ತು ಪ್ಯಾಕೆಟ್‌ಗಳು ಬೇಕಾಗುತ್ತದೆ. 

ಭಾರತೀಯ ಶ್ರೀಮಂತರು ಭಾರತ ಪೌರತ್ವ ತ್ಯಜಿಸ್ತಿರೋದು ಯಾಕೆ ಗೊತ್ತಾ?

ಮಂಡಕ್ಕಿ ವ್ಯಾಪಾರದಿಂದ ಲಾಭ : ಇದೊಂದು ಲಾಭದಾಯಕ ವ್ಯವಹಾರವಾಗಿದೆ. ಕಡಿಮೆ ಖರ್ಚಿನಲ್ಲೂ ನೀವು ಕೈತುಂಬ ಹಣವನ್ನು ಗಳಿಸಬಹುದು. ಒಂದು ಕೆಜಿ ಮಂಡಕ್ಕಿ ಮಾಡಲು ನಿಮಗೆ 10 ರಿಂದ 20 ರೂಪಾಯಿ ಖರ್ಚು ಬರುತ್ತದೆ. ಆದ್ರೆ ನೀವು ಅದನ್ನು 40ರಿಂದ 45 ರೂಪಾಯಿಗೆ ಮಾರಾಟ ಮಾಡಬಹುದು. ನಿಮ್ಮ ಮಾರಾಟ ಹೆಚ್ಚಾದಂತೆ ಗಳಿಕೆ ಹೆಚ್ಚಾಗುತ್ತದೆ. ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸುವ ವ್ಯವಹಾರದಲ್ಲಿ ಇದೂ ಒಂದು.