Asianet Suvarna News Asianet Suvarna News

ತುಂಡು ಭೂಮಿ ಇದ್ದರೂ ಸಾಕು, ಈ ಬ್ಯೂಸಿನೆಸ್ ಶುರು ಮಾಡಬಹುದು ನೋಡಿ

ಕೃಷಿಗೆ, ಭೂಮಿ ಬೇಕು. ಹೊಲದಲ್ಲಿ ಬೀಜ ಹಾಕಿ ಹಣ ತೆಗೆಯುವ ಕಲೆ ಗೊತ್ತಿರಬೇಕು. ನೀವು ವ್ಯಾಪಾರದ ತಲೆಯಲ್ಲಿದ್ರೆ, ಕೈನಲ್ಲಿ ಜಮೀನಿದ್ರೆ ತಡ ಮಾಡ್ಬೇಡಿ. ಒಂದ್ವೇಳೆ ಕೃಷಿ ಭೂಮಿ ಇಲ್ಲ ಎನ್ನುವವರು ಸಗಟು ರೂಪದಲ್ಲೂ ಈ ವ್ಯವಹಾರ ಶುರು ಮಾಡ್ಬಹುದು. ಸಾಕಷ್ಟು ಆದಾಯ ತರುವ ಈ ಬ್ಯುಸಿನೆಸ್ ಯಾವುದು ಗೊತ್ತಾ?
 

Business Idea Cumin Farming With Low Investment Get High Income
Author
First Published Mar 1, 2023, 3:52 PM IST

ಈಗಿನ ಸಮಯದಲ್ಲಿ ಓದು ಮುಗಿಸಿದ ಕೆಲ ವಿದ್ಯಾವಂತರು ಕೃಷಿಯತ್ತ ಮುಖ ಮಾಡ್ತಿದ್ದಾರೆ. ಒಳ್ಳೆಯ ಉದ್ಯೋಗ ಬಿಟ್ಟು ಕೃಷಿ ಕೆಲಸಕ್ಕೆ ಕೈ ಹಾಕಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಜನರು ನಮ್ಮಲ್ಲಿ ಸಾಕಷ್ಟು ಮಂದಿಯಿದ್ದಾರೆ. ನೀವೂ ಕೃಷಿ ಮೂಲಕ ಜೀವನ ಕಟ್ಟಿಕೊಳ್ಳುವ ಆಲೋಚನೆಯಲ್ಲಿದ್ದರೆ ನಿಮಗೊಂದು ಒಳ್ಳೆಯ ಅವಕಾಶವಿದೆ.

ಎಲ್ಲರ ಅಡುಗೆ ಮನೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜೀರಿಗೆ (Cumin)  ಬೆಳೆ ಬೆಳೆದು ನೀವು ಸಂಪಾದನೆ ಶುರು ಮಾಡಬಹುದು. ಜೀರಿಗೆಯನ್ನು ಪ್ರತಿ ಭಾರತೀಯರ ಮನೆಯಲ್ಲಿ ಬಳಕೆ ಮಾಡಲಾಗುತ್ತದೆ. ಅಡುಗೆ ಜೊತೆಗೆ ಔಷಧಿ (Medicine) ಯಾಗಿಯೂ ಇದನ್ನು ಬಳಸಲಾಗುತ್ತದೆ. ಎಂದೂ ಬೇಡಿಕೆ ಕಳೆದುಕೊಳ್ಳದ ಮಸಾಲೆ (Spice) ಗಳಲ್ಲಿ ಜೀರಿಗೆ ಕೂಡ ಒಂದು. 

ದೇಶದ ಶೇಕಡಾ 80ಕ್ಕೂ ಹೆಚ್ಚು ಜೀರಿಗೆಯನ್ನು ಗುಜರಾತ್ (Gujarat) ಮತ್ತು ರಾಜಸ್ಥಾನದಲ್ಲಿ ಬೆಳೆಯಲಾಗುತ್ತದೆ. 5 ಎಕರೆಯಲ್ಲಿ ಜೀರಿಗೆ ಬೆಳೆದು ಸುಮಾರು 2 ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು. ವರ್ಷವಿಡೀ ಜೀರಿಗೆ ಬೇಡಿಕೆ ಇರುತ್ತದೆ. ಜೀರಿಗೆ ಸಸ್ಯವು ಒಣ ಮರಳು ಮಿಶ್ರಿತ ಲೋಮ್ ಮಣ್ಣಿನಲ್ಲಿ ಸುಮಾರು 30 ಡಿಗ್ರಿ ತಾಪಮಾನದಲ್ಲಿ ಬೆಳೆಯುತ್ತದೆ. ಜೀರಿಗೆ ಬೆಳೆ ಹಣ್ಣಾಗಲು ಸುಮಾರು 110-115 ದಿನಗಳನ್ನು ತೆಗೆದುಕೊಳ್ಳುತ್ತದೆ. ಭಾರತದಲ್ಲಿ ಜೀರಿಗೆಯನ್ನು ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಬಿತ್ತಲಾಗುತ್ತದೆ.  ಫೆಬ್ರವರಿಯಲ್ಲಿ ಕೊಯ್ಲು ಮಾಡಲಾಗುತ್ತದೆ. ತಾಜಾ ಬೆಳೆ ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಮಾರುಕಟ್ಟೆಯನ್ನು ತಲುಪುತ್ತದೆ. ಜೀರಿಗೆ ಸಸ್ಯದ ಎತ್ತರ 15 ರಿಂದ 50 ಸೆಂಟಿಮೀಟರ್ ಇರಬೇಕು.

Business Ideas: ಮಂಡಕ್ಕಿ ಮಾಡೋದು ಒಳ್ಳೇ ಆದಾಯ ತರುತ್ತೆ ಇಲ್ನೋಡಿ

ಜೀರಿಗೆ ಬೆಳೆ ಬೆಳೆಯೋದು ಹೇಗೆ? : ಮೊದಲೇ ಹೇಳಿದಂತೆ ಜೀರಿಗೆ ಕೃಷಿಗೆ ಬೆಳಕು ಮತ್ತು ಲೋಮಮಿ ಮಣ್ಣು ಉತ್ತಮ. ಇಂತಹ ಮಣ್ಣಿನಲ್ಲಿ ಜೀರಿಗೆಯನ್ನು ಸುಲಭವಾಗಿ ಬೆಳೆಸಬಹುದು. ಬಿತ್ತನೆ ಮಾಡುವ ಮೊದಲು ಹೊಲವನ್ನು ಸರಿಯಾಗಿ ಸಿದ್ಧಪಡಿಸುವುದು ಅವಶ್ಯಕ. ಜೀರಿಗೆ ಬಿತ್ತಬೇಕಾದ ಗದ್ದೆಯ ಕಳೆ ತೆಗೆದು ಸ್ವಚ್ಛಗೊಳಿಸಬೇಕು. ಜೀರಿಗೆಯ ಉತ್ತಮ ತಳಿಗಳಲ್ಲಿ ಮೂರು ತಳಿಗಳ ಹೆಸರುಗಳು ಪ್ರಮುಖವಾಗಿವೆ. RZ 19 ಮತ್ತು 209, RZ 223 ಮತ್ತು GC 1-2-3 ಪ್ರಭೇದಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ಪ್ರಭೇದಗಳ ಬೀಜಗಳು 120-125 ದಿನಗಳಲ್ಲಿ ಹಣ್ಣಾಗುತ್ತವೆ. ಈ ತಳಿಗಳ ಸರಾಸರಿ ಇಳುವರಿ ಹೆಕ್ಟೇರಿಗೆ 510 ರಿಂದ 530 ಕೆ.ಜಿ. ಆದ್ದರಿಂದ, ಈ ತಳಿಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು.

ಜೀರಿಗೆ ಬೆಳೆಯಿಂದ ಆದಾಯ : ಏಳರಿಂದ 8 ಕ್ವಿಂಟಲ್ ಬೀಜವನ್ನು ನೀವು ಒಂದು ಹೆಕ್ಟೇರ್ ನಲ್ಲಿ ಬಿತ್ತಬಹುದು. ಪ್ರತಿ ಹೆಕ್ಟೇರ್ ಗೆ ನೀವು 30 ಸಾವಿರದಿಂದ 35 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಜೀರಿಗೆ ಬೆಲೆ ಒಂದು ಕೆಜಿಗೆ 100 ರೂಪಾಯಿ ಎಂದು ಭಾವಿಸಿದ್ರೂ ಒಂದು ಹೆಕ್ಟೇರ್ ಗೆ ನೀವು 40 ರಿಂದ 45 ಸಾವಿರ ರೂಪಾಯಿ ಪಡೆಯಬಹುದು. ನೀವು ಐದು ಎಕರೆ ಪ್ರದೇಶದಲ್ಲಿ ಜೀರಿಗೆ ಬೆಳೆದಿದ್ದರೆ ಎರಡರಿಂದ ಎರಡುವರೆ ಲಕ್ಷ ರೂಪಾಯಿ ಲಾಭವನ್ನು ನೀವು ಪಡೆಯಬಹುದಾಗಿದೆ. 

ಭಾರತೀಯ ಶ್ರೀಮಂತರು ಭಾರತ ಪೌರತ್ವ ತ್ಯಜಿಸ್ತಿರೋದು ಯಾಕೆ ಗೊತ್ತಾ?

ಜೀರಿಗೆ ಹೋಲ್ಸೇಲ್ ಬ್ಯುಸಿನೆಸ್ : ನಿಮಗೆ ಜೀರಿಗೆ ಕೃಷಿ ಸಾಧ್ಯವಿಲ್ಲವೆಂದಾದ್ರೆ ನೀವು ಜೀರಿಗೆ ಸಗಟು ವ್ಯಾಪಾರ ಶುರು ಮಾಡಬಹುದು. ಧಾನ್ಯದ ಮಾರುಕಟ್ಟೆಯಿಂದ ಅಥವಾ ಗುಜರಾತ್ ಮತ್ತು ರಾಜಸ್ಥಾನದಿಂದ ಜೀರಿಗೆಯನ್ನು ಖರೀದಿಸಿ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಬಹುದು. ನೀವು ಜೀರಿಗೆಯನ್ನು ಪ್ಯಾಕ್ ಮಾಡಿ ಸಹ ಮಾರಾಟ ಮಾಡಬಹುದು. ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿರೋದಿಲ್ಲ. ಮನೆಯಲ್ಲಿಯೇ ನೀವು ಇದನ್ನು ಪ್ರಾರಂಭಿಸಿದ್ರೆ ಕಡಿಮೆ ಖರ್ಚಿನಲ್ಲಿ ವ್ಯಾಪಾರ ಶುರು ಮಾಡಬಹುದು. ದೊಡ್ಡ ಮಟ್ಟದಲ್ಲಿ, ಬ್ರ್ಯಾಂಡ್ ಹೆಸರಿನಲ್ಲಿ ವ್ಯಾಪಾರ ಶುರು ಮಾಡ್ತಿದ್ದರೆ ಕಂಪನಿ ಹೆಸರು ನೋಂದಣಿ, ಜಾಗ, ಕೆಲಸಗಾರರು ಹೀಗೆ ನಾನಾ ಕೆಲಸಕ್ಕೆ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ.
 

Follow Us:
Download App:
  • android
  • ios