ಒಂದು ಬಲ್ಬ್ ಚೇಂಜ್ ಮಾಡಿದ್ರೆ ಸಿಗುತ್ತೆ ಲಕ್ಷ ಲಕ್ಷ ಸ್ಯಾಲರಿ, ಆದ್ರೂ ಸಿಕ್ತಿಲ್ಲ ಸ್ಟ್ಯಾಫ್
ಒಳ್ಳೆಯ ಸಂಬಳ, ಎಲ್ಲ ಅನುಕೂಲ ಸಿಗುವ ಕೆಲಸ ಸಿಗೋದು ಅಪರೂಪ. ಸಂಬಳ ಹೆಚ್ಚಿದ್ರೂ ತೊಂದರೆ ಸಾಕಷ್ಟಿರುತ್ತದೆ. ಅಮೆರಿಕದಲ್ಲಿ ಬಲ್ಬ್ ಬದಲಿಸುವ ಕೆಲಸಕ್ಕೆ ಲಕ್ಷಾಂತರ ರೂಪಾಯಿ ಸಂಬಳ ನೀಡ್ತಾರೆ. ಆದ್ರೂ ಇದಕ್ಕೆ ಅಪ್ಲೈ ಮಾಡೋರು ಕಡಿಮೆ. ಯಾಕೆ ಗೊತ್ತಾ?
ಒಳ್ಳೆಯ ನೌಕರಿ ಹಾಗೂ ಒಳ್ಳೆಯ ಸಂಬಳ ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಕಲಿತು ಜಾಬ್ ಗಿಟ್ಟಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಕಲಿತ ವಿದ್ಯಾವಂತರೆಲ್ಲರಿಗೂ ಅವರ ವಿದ್ಯಾಭ್ಯಾಸಕ್ಕೆ ತಕ್ಕನಾದ ಉದ್ಯೋಗ ಸಿಗೋದಿಲ್ಲ. ಹಾಗೊಮ್ಮೆ ಸಿಕ್ಕರೂ ಸಂಬಳ ತೀರ ಕಡಿಮೆಯಿರುತ್ತೆ ಇಲ್ಲವೇ ಜಾಬ್ ರಿಸ್ಕಿಯಾಗಿರುತ್ತದೆ. ಇನ್ನು ಕೆಲವು ನೌಕರಿಯನ್ನು ಗಿಟ್ಟಿಸಿಕೊಳ್ಳಬೇಕಂದ್ರೆ ಅದಕ್ಕೆ ಬೇಕಾಗುವ ಕಾಗದ ಪತ್ರಗಳ ಅಗತ್ಯತೆಯನ್ನು ಪೂರೈಸುವಷ್ಟರಲ್ಲೇ ಅರ್ಧ ಆಯಸ್ಸು ಕಳೆದಿರುತ್ತದೆ.
ಇಷ್ಟೆಲ್ಲ ಸಮಸ್ಯೆಗಳು ಇರುವಾಗ ಇಲ್ಲೊಂದು ಕಡೆ ಕೇವಲ ಒಂದು ಬಲ್ಬ್ (Bulb) ಚೇಂಜ್ ಮಾಡುವ ಕೆಲಸ (Work) ಕ್ಕೆ ಲಕ್ಷಾಂತರ ರೂಪಾಯಿ ಸಂಬಳ ಸಿಗಲಿದೆ. ಈ ಕೆಲಸಕ್ಕೆ ಹೆಚ್ಚಿನ ಸ್ಕಿಲ್ ಅಥವಾ ವಿದ್ಯಾರ್ಹತೆ ಕೂಡ ಬೇಕಾಗಿಲ್ಲ. ಪ್ರತಿ ಆರು ಅಥವಾ ಏಳು ತಿಂಗಳಿಗೊಮ್ಮೆ ಈ ಕೆಲಸ ಮಾಡಿದರೆ ಸಾಕು, ಲಕ್ಷದಲ್ಲಿ ಸ್ಯಾಲರಿ ಪಡೆಯಬಹುದು. ಆದರೂ ಈ ಜಾಬ್ ಗೆ ಬಹಳ ಕಡಿಮೆ ಮಂದಿ ಅಪ್ಲೈ ಮಾಡ್ತಾರೆ. ಏಕಂದ್ರೆ ಈ ಜಾಬ್ ಅಷ್ಟು ರಿಸ್ಕಿಯಾಗಿದೆ.
ಭಾರತದ ಶ್ರೀಮಂತ ಅಂಬಾನಿ ಕುಟುಂಬದಲ್ಲಿ ಯಾರು ಎಷ್ಟು ಓದಿದ್ದಾರೆ? ಸೊಸೆಯಂದಿರ ಶೈಕ್ಷಣಿಕ ಅರ್ಹತೆಯೇನು?
600 ಮೀಟರ್ ಎತ್ತರದ ಟವರ್ (Tower) ನಲ್ಲಿ ಕೆಲಸ : ಅಮೆರಿಕದ ಉತ್ತರ ಡಾಕೋಟಾದಲ್ಲಿರುವ ಟವರ್ ಲ್ಯಾಂಟರ್ ಚೇಂಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಲ್ಯಾಂಟರ್ ಚೇಂಜರ್ ಹುದ್ದೆಗೆ ವರ್ಷಕ್ಕೆ 130,000 ಯುಎಸ್ ಡಾಲರ್ ಅಂದರೆ ವರ್ಷಕ್ಕೆ 10 ಲಕ್ಷ ರೂಪಾಯಿಗಳ ಆಫರ್ ನೀಡಲಾಗಿತ್ತು. ಈ ಕೆಲಸಕ್ಕೆ ಬರುವ ವ್ಯಕ್ತಿ 600 ಮೀಟರ್ ಎತ್ತರದ ಟವರ್ ಅನ್ನು ಏರಿ ಅಲ್ಲಿರುವ ಬಲ್ಬ್ ಅನ್ನು ಬದಲಾಯಿಸಬೇಕು. ಟವರ್ ಹತ್ತಲು ಬೇಕಾದ ಸೇಫ್ಟಿ ಪ್ರೊಡಕ್ಟ್ ಗಳನ್ನು ಕಂಪನಿಯೇ ನೀಡುತ್ತದೆ. ಈ ಜಾಬ್ ಗೆ ಅಪ್ಲೈ ಮಾಡುವವರು ಶರೀರದಲ್ಲಿ ಫಿಟ್ ಆಗಿರಬೇಕು. ಅಷ್ಟು ದೊಡ್ಡ ಟವರ್ ಅನ್ನು ಏರುವ ಸಾಮರ್ಥ್ಯ ಅವರಲ್ಲಿ ಇರಬೇಕು. ಒಂದು ವರ್ಷಕ್ಕಿಂತ ಕಡಿಮೆ ಅನುಭವ ಇರುವವರು ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಬಹಳ ಎಚ್ಚರಿಕೆಯಿಂದ ಈ ಕೆಲಸ ಮಾಡಬೇಕು : 600 ಮೀಟರ್ ಎತ್ತರದ ಟವರ್ ಅನ್ನು ಏರುವುದು ಸಾಹಸದ ಕೆಲಸವೇ ಆಗಿದೆ. ಹಾಗಾಗಿ ಹೆಚ್ಚು ಧೈರ್ಯ ಇರುವವರೇ ಈ ಜಾಬ್ ಗೆ ಅಪ್ಲೈ ಮಾಡಬೇಕು. ಈ ದೈತ್ಯಾಕಾರದ ಟವರ್ ಅನ್ನು ಏರಲು ಹಾಗೂ ಇಳಿಯಲು 3 ಗಂಟೆಯ ಸಮಯ ಬೇಕು. ಹಾಗಾಗಿ ಈ ಟವರ್ ನ ಒಂದು ಬಲ್ಬ್ ಬದಲಾಯಿಸಲು ಕನಿಷ್ಠ 6ರಿಂದ 7 ಗಂಟೆ ಹಿಡಿಯುತ್ತದೆ.
ಟವರ್ ಏರಿ ಬಲ್ಬ್ ಬದಲಾಯಿಸುವುದು ಕೂಡ ಸುಲಭದ ಮಾತಲ್ಲ. ಏಕೆಂದರೆ ಅಷ್ಟು ಎತ್ತರದ ಟವರ್ ನಲ್ಲಿ ಗಾಳಿ ಕೂಡ ಬಹಳ ವೇಗವಾಗಿ ಬೀಸುತ್ತಿರುತ್ತದೆ. 600 ಮೀಟರ್ ಎತ್ತರದಲ್ಲಿ ಗಾಳಿ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿರುತ್ತದೆ. ಈ ಹುದ್ದೆಗೆ ಆಯ್ಕೆಯಾದ ವ್ಯಕ್ತಿ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಈ ಟವರ್ ಏರಿ ಬಲ್ಬ್ ಬದಲಾಯಿಸಬೇಕಾಗುತ್ತದೆ.
ಹೆಚ್ಚು ಅಪಾಯಕಾರಿಯಾದ ಈ ಕೆಲಸಕ್ಕೆ ಬಹಳ ಕಡಿಮೆ ಮಂದಿ ಸೇರುತ್ತಾರೆ. ಹಾಗೊಮ್ಮೆ ಯಾರಾದರೂ ಈ ಕೆಲಸವನ್ನು ಮಾಡಲು ಮುಂದೆ ಬಂದರೆ ಅವರಿಗೆ ಸರಿಯಾದ ತರಬೇತಿಯನ್ನು ನೀಡಲಾಗುತ್ತದೆ. ಉತ್ತಮ ತರಬೇತಿ ಹೊಂದಿದ ನಂತರವಷ್ಟೇ ಇಲ್ಲಿ ಜಾಬ್ ಸಿಗುತ್ತದೆ. ಎಷ್ಟೇ ದೊಡ್ಡ ಸ್ಯಾಲರಿ ಅಥವಾ ಆಫರ್ ನೀಡಿದರೂ ಜೀವಕ್ಕಿಂತ ದುಡ್ಡು ಮುಖ್ಯವಲ್ಲ ಎನ್ನುವವರು ಈ ಜಾಬ್ ತಂಟೆಗೆ ಬರೋದಿಲ್ಲ. ಟವರ್ ಏರುವಾಗ ಅಥವಾ ಇಳಿಯುವಾಗ ಸ್ವಲ್ಪ ಯಾಮಾರಿದರೂ ಜೀವಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿಯೇ ಈ ರಿಸ್ಕಿ ಜಾಬ್ ಗೆ ಅಪ್ಲೈ ಮಾಡುವವರೇ ವಿರಳ.