ಇನ್ಮುಂದೆ ಜಾಗತಿಕ ಷೇರು ಖರೀದಿ, ವಿದೇಶದಲ್ಲಿ ವಿಹಾರ, ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಚ್ಚು ದುಬಾರಿ..!

ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ ಆದಾಯ ತೆರಿಗೆಯಾಗಿದ್ದು, ನಿರ್ದಿಷ್ಟಪಡಿಸಿದ ಸರಕುಗಳ ಮಾರಾಟಗಾರರಿಂದ ಖರೀದಿದಾರರಿಂದ ಇದನ್ನು ಸಂಗ್ರಹಿಸಲಾಗುತ್ತದೆ. ನಿರ್ದಿಷ್ಟ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಯು ನಿಗದಿತ ದರದಲ್ಲಿ ಖರೀದಿದಾರರಿಂದ ತೆರಿಗೆಯನ್ನು ಸಂಗ್ರಹಿಸಲು ಮತ್ತು ಅದನ್ನು ಸರ್ಕಾರಕ್ಕೆ ಠೇವಣಿ ಮಾಡಲು ಹೊಣೆಗಾರನಾಗಿರುವುದು ಟಿಸಿಎಸ್‌ನ ಪರಿಕಲ್ಪನೆಯಾಗಿದೆ. 

budget 2023 why buying global stocks holidaying abroad investing in crypto overseas has gotten more expensive ash

ನವದೆಹಲಿ (ಫೆಬ್ರವರಿ 2, 2023): ಕೇಂದ್ರ ಬಜೆಟ್‌ - 2023 ಅನ್ನು ಫೆಬ್ರವರಿ 1, 2023 ರ ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಮಡಿಸಿದ್ದಾರೆ. ಸಾಮಾನ್ಯ ಜನರ ತೆರಿಗೆ ಉಳಿಸಲು ನಾನಾ ಬಂಪರ್‌ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ, ನೀವು ಮ್ಯೂಚುವಲ್‌ ಫಂಡ್‌, ಕ್ರಿಪ್ಟೋ ಹೂಡಿಕೆ ಹಾಗೂ ವಿದೇಶದಲ್ಲಿ ಮೋಜು ಮಾಡಲು ಪ್ಲ್ಯಾನ್‌ ಮಾಡ್ತಿದ್ದೀರಾ..? ಹಾಗಾದ್ರೆ, ನಿಮಗಿಲ್ಲಿದೆ ಕಹಿ ಸುದ್ದಿ. ನೀವು ನೇರವಾಗಿ ಅಥವಾ ಮ್ಯೂಚುವಲ್ ಫಂಡ್‌ಗಳ ಮೂಲಕ ವಿದೇಶಿ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ ಅಥವಾ ಟೂರಿಸ್ಟ್‌ ಪ್ಯಾಕೇಜ್ ಮೂಲಕ ವಿದೇಶದಲ್ಲಿ ವಿಹಾರ ಮಾಡುತ್ತಿದ್ದರೆ, ಮೂಲದಲ್ಲಿ ಸಂಗ್ರಹಿಸಿದ ತೆರಿಗೆಯಾಗಿ 20 ಪ್ರತಿಶತದಷ್ಟು ಹೆಚ್ಚು ಪಾವತಿಸಲು ಸಿದ್ಧರಾಗಿರಿ.

ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ (TCS) ಆದಾಯ ತೆರಿಗೆಯಾಗಿದ್ದು, ನಿರ್ದಿಷ್ಟಪಡಿಸಿದ ಸರಕುಗಳ ಮಾರಾಟಗಾರರಿಂದ ಖರೀದಿದಾರರಿಂದ ಇದನ್ನು ಸಂಗ್ರಹಿಸಲಾಗುತ್ತದೆ. ನಿರ್ದಿಷ್ಟ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಯು ನಿಗದಿತ ದರದಲ್ಲಿ ಖರೀದಿದಾರರಿಂದ ತೆರಿಗೆಯನ್ನು ಸಂಗ್ರಹಿಸಲು ಮತ್ತು ಅದನ್ನು ಸರ್ಕಾರಕ್ಕೆ ಠೇವಣಿ ಮಾಡಲು ಹೊಣೆಗಾರನಾಗಿರುವುದು ಟಿಸಿಎಸ್‌ನ ಪರಿಕಲ್ಪನೆಯಾಗಿದೆ. 

ಇದನ್ನು ಓದಿ: Union Budget: ಉದ್ಯೋಗಿಗಳಿಗೆ ಕೊಂಚ ರಿಲೀಫ್, ಇಪಿಎಫ್ ವಿತ್ ಡ್ರಾ ಮೇಲಿನ ಟಿಡಿಎಸ್ ಶೇ.30ರಿಂದ ಶೇ.20ಕ್ಕೆ ಇಳಿಕೆ

2023 ರ ಬಜೆಟ್‌ನಲ್ಲಿ ಈ ಹೊಸ ನಿಯಮವನ್ನು ವಿಧಿಸಿದ್ದು, ಇದರಲ್ಲಿ ಉದಾರೀಕೃತ ರವಾನೆ ಯೋಜನೆಯಡಿಯಲ್ಲಿ ಯಾವುದೇ ಹೂಡಿಕೆ ಅಥವಾ ಖರ್ಚಿಗಾಗಿ 20% ಮುಂಗಡ ತೆರಿಗೆಯನ್ನು ಮೂಲದಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗೆ ಇದರಲ್ಲಿ ವಿನಾಯಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದುವರೆಗೆ ವಿದೇಶದಲ್ಲಿ ಹೂಡಿಕೆ ಮಾಡುತ್ತಿರುವ ಭಾರತೀಯರು 7 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲೆ TCS ಆಗಿ ಕೇವಲ 5% ಪಾವತಿಸುತ್ತಿದ್ದರು. ಆದರೆ ಮುಂದಿನ ಹಣಕಾಸು ವರ್ಷದಿಂದ ಈ ತೆರಿಗೆ ಪ್ರಮಾಣ ಶೇ. 20ಕ್ಕೆ ಏರಲಿದೆ. ಹೊಸ ನಿಯಮವು ವಿದೇಶದಲ್ಲಿ ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡಲು ಅಥವಾ ಕಲಾಕೃತಿಗಳನ್ನು ಸಂಗ್ರಹಿಸಲು ಮತ್ತು ಶಿಲ್ಪಗಳು ಹಾಗೂ ಆಸ್ತಿಯಂತಹ ಹೆಚ್ಚಿನ ಮೌಲ್ಯದ ಹೂಡಿಕೆಗಳಿಗೆ ಸಹ ಅನ್ವಯಿಸುತ್ತದೆ. ಪ್ರಸ್ತುತ, ಪ್ಯಾನ್‌ ಲಭ್ಯವಿಲ್ಲದ ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆಯ ಶೇಕಡಾ 20 ರಷ್ಟು ಹೆಚ್ಚಿನ ಮೌಲ್ಯದ ವಹಿವಾಟುಗಳಲ್ಲಿ ಮಾತ್ರ ಇದು ಅನ್ವಯವಾಗುತ್ತಿದ್ದು, ಏಪ್ರಿಲ್‌ನಿಂದ ಇದು ಬದಲಾಗಲಿದೆ.

ಇದನ್ನೂ ಓದಿ: ಹೊಸ ಹಾಗೂ ಹಳೆ ತೆರಿಗೆ ಪದ್ಧತಿ ನಡುವಿನ ವ್ಯತ್ಯಾಸವೇನು..?

ಇನ್ನೊಂದೆಡೆ, ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳುವವರ ಅನುಕೂಲಕ್ಕಾಗಿ ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ ವಿಧಿಸುತ್ತಿಲ್ಲ. ಆದರೆ ಹೂಡಿಕೆಗಳು, ಉಡುಗೊರೆಗಳು ಮತ್ತು ವರ್ಷದಲ್ಲಿ ರೂ 7 ಲಕ್ಷಕ್ಕಿಂತ ಹೆಚ್ಚಿನ ವಿದೇಶಿ ಪ್ರವಾಸಗಳು ಜುಲೈ 1, 2023 ರಿಂದ ಪರಿಣಾಮ ಬೀರುತ್ತವೆ ಎಂದು ತಿಳಿದುಬಂದಿದೆ. ಇದರಿಂದ ಅಂತಾರಾಷ್ಟ್ರೀಯ ಪ್ರವಾಸದ ವೆಚ್ಚ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಉದಾಹರಣೆಗೆ, ನೀವು ರೂ. 50,000 ರವಾನೆ ಮಾಡಲು ಯೋಜಿಸಿದರೆ ಮುಂದಿನ ಹಣಕಾಸು ವರ್ಷದಿಂದ ರೂ. 10,000 ಟಿಸಿಎಸ್ ಅನ್ವಯವಾಗುತ್ತದೆ. ನಿಮ್ಮ ಆದಾಯದ ಮೇಲಿನ ತೆರಿಗೆಯು ರೂ 5,000 ಎಂದು ಊಹಿಸಿ ನಂತರ ರೂ 10,000 ರ TCS ಅನ್ನು ಸರಿಹೊಂದಿಸಲಾಗುತ್ತದೆ ಮತ್ತು ನಿಮ್ಮ ತೆರಿಗೆಗಳನ್ನು ಸಲ್ಲಿಸುವ ಭಾಗವಾಗಿ ನೀವು ರೂ. 1,000 ಮರುಪಾವತಿಯನ್ನು ಪಡೆಯುತ್ತೀರಿ.

ಇನ್ನು, ಹೂಡಿಕೆ ಮಾಡಲು, ವಿದೇಶದಲ್ಲಿ ಅಧ್ಯಯನ ಮಾಡಲು ಅಥವಾ ವೈದ್ಯಕೀಯ ಪ್ರಕ್ರಿಯೆಗಳಿಗೆ ಒಳಗಾಗಲು ಭಾರತೀಯ ನಿವಾಸಿಗಳು ಪ್ರತಿ ಹಣಕಾಸು ವರ್ಷಕ್ಕೆ 2,50,000 ಡಾಲರ್‌ ವರೆಗೆ ಹಣವನ್ನು ಪಾವತಿಸಲು ಅನುಮತಿಸಲಾಗಿದೆ.

Latest Videos
Follow Us:
Download App:
  • android
  • ios