Union Budget:ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಹೆಚ್ಚಳ; ಠೇವಣಿ, ಬಡ್ಡಿದರ ಮಾಹಿತಿ ಇಲ್ಲಿದೆ

2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ ಮಾಡಿದ್ದಾರೆ. ಹಾಗಾದ್ರೆ ಇನ್ನು ಮುಂದೆ ಎಂಐಎಸ್ ನಲ್ಲಿ ಗರಿಷ್ಠ ಎಷ್ಟು ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ. 

Budget 2023 Post Office Monthly Income Schemes limit increased Check deposit Limit rate of interest and other details

ನವದೆಹಲಿ (ಫೆ.3): ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಉಳಿತಾಯ ಎಂದ ತಕ್ಷಣ ಭಾರತದ ಮಧ್ಯಮ ವರ್ಗದ ಜನರಿಗೆ ನೆನಪಾಗುವುದೇ ಅಂಚೆ ಕಚೇರಿ. ಹೌದು, ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಇಂದಿಗೂ ಗ್ರಾಮೀಣ ಭಾಗದ ಜನರ ಮೊದಲ ಆಯ್ಕೆಯಾಗಿದೆ. ಇದಕ್ಕೆ ಕಾರಣ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ ಎಂಬ ವಿಶ್ವಾಸ. ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್) ಕೂಡ ಒಂದು. ಈ ಯೋಜನೆಯ ಠೇವಣಿ ಮಿತಿಯನ್ನು ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಳ ಮಾಡಲಾಗಿದೆ. ಈ ಯೋಜನೆಯಲ್ಲಿ ಒಂದೇ ಖಾತೆ ಹೊಂದಿರೋರಿಗೆ ಗರಿಷ್ಠ ಠೇವಣಿ ಮಿತಿಯನ್ನು 4.5ಲಕ್ಷ ರೂ.ನಿಂದ  9ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಜಂಟಿ ಖಾತೆಗೆ 9ಲಕ್ಷ ರೂನಿಂದ 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಇನ್ನು ಪಿಎಂಐಸ್ ಖಾತೆ ಹೊಂದಿರೋರು ಜಂಟಿ ಖಾತೆಯಲ್ಲಿ ಸಮಾನ ಮೊತ್ತದ ಷೇರುಗಳನ್ನು ಹೊಂದಿರೋದು ಅಗತ್ಯ.

ಏನಿದು ಮಾಸಿಕ ಆದಾಯ ಯೋಜನೆ?
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS)ಅಥವಾ ಖಾತೆ ಹೂಡಿಕೆದಾರರಿಗೆ (Investors) ನಿಗದಿತ ರಿಟರ್ನ್ ನೀಡುತ್ತದೆ.  ಈ ಯೋಜನೆಯಡಿಯಲ್ಲಿ ನೀವು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದ್ರೆ ನಿಮಗೆ ಪ್ರತಿ ತಿಂಗಳು ನಿರ್ದಿಷ್ಟ ಮಾಸಿಕ ಆದಾಯ (Monthly Income) ಸಿಗುತ್ತದೆ. ಹೀಗಾಗಿ ಉಳಿತಾಯ ಮಾಡಲು ಯೋಚಿಸುತ್ತಿರೋರು ಈ ಯೋಜನೆಯ ಖಾತೆ ತೆರೆಯಬಹುದು. ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ ಕೂಡ ಸಿಗುತ್ತದೆ. 

Union Budget:ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಖರ್ಚಿಗೆ ಹಣ ಕಳುಹಿಸಿದ್ರೂ ಜೇಬಿಗೆ ಬೀಳುತ್ತೆ ಕತ್ತರಿ

ಬಡ್ಡಿದರ ಎಷ್ಟಿದೆ?
ಅಂಚೆ ಕಚೇರಿ ಮಾಸಿಕ ಆದಾಯ ಖಾತೆ ಅಥವಾ ಎಂಐಎಸ್  ಅಡಿಯಲ್ಲಿನ ಠೇವಣಿಗೆ ಪ್ರಸ್ತುತ ವಾರ್ಷಿಕ ಶೇ.7.1 ಬಡ್ಡಿದರ (Interest rate) ಇದೆ. ಮೆಚ್ಯುರಿಟಿ ಅವಧಿ ತನಕ ತಿಂಗಳಿಗೆ ಬಡ್ಡಿದರವನ್ನು ನೀಡಲಾಗುತ್ತದೆ. ಇನ್ನು ಬಡ್ಡಿ ವಿತ್ ಡ್ರಾ ಹಣವನ್ನು ಉಳಿತಾಯ ಖಾತೆಗೆ ಅಟೋ ಕ್ರೆಡಿಟ್ ಮಾಡುವ ಆಯ್ಕೆ ಕೂಡ ಖಾತೆದಾರರಿಗೆ ಇದೆ. 

ಕನಿಷ್ಠ ಠೇವಣಿ ಎಷ್ಟು?
ಅಂಚೆ ಕಚೇರಿ ಮಾಸಿಕ ಆದಾಯ ಖಾತೆ (MIS) ತೆರೆಯಲು ಕನಿಷ್ಠ 1000 ರೂ. ಹೂಡಿಕೆ ಮಾಡೋದು ಅಗತ್ಯ. ಆ ಬಳಿಕ ಖಾತೆದಾರರು ಒಂದು ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇಡಬೇಕು.

Union Budget: ಉದ್ಯೋಗಿಗಳಿಗೆ ಕೊಂಚ ರಿಲೀಫ್, ಇಪಿಎಫ್ ವಿತ್ ಡ್ರಾ ಮೇಲಿನ ಟಿಡಿಎಸ್ ಶೇ.30ರಿಂದ ಶೇ.20ಕ್ಕೆ ಇಳಿಕೆ

ಮೆಚ್ಯುರಿಟಿ ಅವಧಿ
ಎಂಇಎಸ್ ಖಾತೆಯನ್ನು ತೆರೆದ ಐದು ವರ್ಷಗಳ ಬಳಿಕ ಕ್ಲೋಸ್ ಮಾಡಬಹುದದಾಗಿದೆ. ಸಂಬಂಧಪಟ್ಟ ಅಂಚೆ ಕಚೇರಿಗೆ ಅಗತ್ಯ ಅರ್ಜಿ ಹಾಗೂ ಪಾಸ್ ಪುಸ್ತಕ ಸಲ್ಲಿಕೆ ಮಾಡುವ ಮೂಲಕ ಖಾತೆಯನ್ನು ಕ್ಲೋಸ್ ಮಾಡಬಹುದು. ಒಂದು ವೇಳೆ ಖಾತೆ ಮೆಚ್ಯುರ್ ಆಗುವ ಮುನ್ನ ಖಾತೆದಾರ ಸಾವನ್ನಪ್ಪಿದರೆ ಆತ ಅಥವಾ ಆಕೆಯ ನಾಮಿನಿ ಅಥವಾ ಕಾನೂನುಬದ್ದ ಉತ್ತರಾಧಿಕಾರಿಗೆ ಹಣವನ್ನು ರೀಫಂಡ್ ಮಾಡಲಾಗುವುದು. ರೀಫಂಡ್ ಮಾಡುವುದಕ್ಕೆ ಒಂದು ತಿಂಗಳು ಬಾಕಿಯಿರುವ ತನಕ ಬಡ್ಡಿ ನೀಡಲಾಗುತ್ತದೆ. 

ಮಕ್ಕಳು ಎಂಐಎಸ್ ಖಾತೆ ಹೊಂದಬಹುದಾ?
ಅಪ್ರಾಪ್ತ ಮಕ್ಕಳ ಪರವಾಗಿ ಅವರ ಪಾಲಕರು ಅಥವಾ ಪೋಷಕರು ಅಂಚೆ ಕಚೇರಿ ಎಂಐಎಸ್  (MIS) ಖಾತೆ ತೆರೆಯಬಹುದು.ಇನ್ನು 10 ವರ್ಷಗಳ ಮೇಲಿನ ಅಪ್ರಾಪ್ತರ ಹೆಸರಿನಲ್ಲೇ ಖಾತೆ ತೆರೆಯಲು ಅವಕಾಶವಿದೆ.  ಪ್ರತಿ ತಿಂಗಳು ಈ ಖಾತೆಯಲ್ಲಿರುವ ಠೇವಣಿಗೆ ಸಿಗುವ ಬಡ್ಡಿ ಹಣವನ್ನು ಪಾಲಕರು ಮಕ್ಕಳ ಶಾಲಾ ಶುಲ್ಕ ಅಥವಾ ಅವರಿಗೆ ಸಂಬಂಧಿಸಿದ ಇತರ ವೆಚ್ಚಗಳನ್ನು ಭರಿಸಲು ಬಳಸಬಹುದು.  


 

Latest Videos
Follow Us:
Download App:
  • android
  • ios