Asianet Suvarna News Asianet Suvarna News

Budget 2019: ಆರೋಗ್ಯಕ್ಕಾಗಿ ಆಯುಷ್ಮಾನ್‌ ಭಾರತ್‌ಗೆ ಒತ್ತು ನೀಡಿದ ನಿರ್ಮಲಾ

ಆಯುಷ್ಮಾನ್ ಭಾರತ್‌ಗೆ ₹ 6400 ಕೋಟಿ | 2 ವರ್ಷದಲ್ಲೇ ಗರಿಷ್ಠ ಅನುದಾನ |  ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್ ಅಡಿ ಆಯುಷ್ಮಾನ್ ಭಾರತ್ ಹಾಗೂ ವೆಲ್ನೆಸ್ ಸೆಂಟರ್ಗಳ ಸ್ಥಾಪನೆ

Budget 2019 Ayushman Bharat gets Rs 6400 crore
Author
Bengaluru, First Published Jul 6, 2019, 9:16 AM IST

ನವದೆಹಲಿ (ಜು. 06): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ನೂತನ ಬಜೆಟ್‌ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರೋಬರಿ ₹62,659.12 ಕೋಟಿ ಅನುದಾನ  ಘೋಷಿಸಿದ್ದಾರೆ.

ಕಳೆದ 2 ಆರ್ಥಿಕ ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕಲ್ಪಿಸಿದ ಗರಿಷ್ಠ ಅನುದಾನ ಇದಾಗಿದೆ. 2018- 2019ನೇ ಸಾಲಿಗೆ ಹೋಲಿಕೆ ಮಾಡಿದರೆ ಶೇ.19 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ₹52,800 ಕೋಟಿ ಮೀಸಲಿಡಲಾಗಿತ್ತು.

ಇನ್ನು ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಖಾತೆಗೆ ಹಣ ಹಾಕುವಂತಿಲ್ಲ!

₹ 2,400 ಕೋಟಿಯನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್‌ಗೆ ಮೀಸಲಿಡಲಾಗಿದೆ. ಆಯುಷ್ಮಾನ್ ಭಾರತ್ ವಿಮಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ₹ 5 ಲಕ್ಷ ಆರೋಗ್ಯ ವಿಮೆ ಸಿಗಲಿದೆ. 10.74 ಕೋಟಿ ಅರ್ಹ ಕುಟುಂಬಗಳು ಈಗಾಗಲೇ ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ. 50 ಕೋಟಿ ಕುಟುಂಬಗಳಿಗೆ ಯೋಜನೆ ಒದಗಿಸುವ ಗುರಿ ಹೊಂದಲಾಗಿದೆ.

ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್‌ನಡಿ ಆಯುಷ್ಮಾನ್ ಭಾರತ್ ಹಾಗೂ ವೆಲ್‌ನೆಸ್ ಸೆಂಟರ್ ಗಳ ಸ್ಥಾಪನೆಗಾಗಿ ₹ 249.96 ಕೋಟಿ ಮೀಸಲಿಡಲಾಗಿದೆ. ನ್ಯಾಷನಲ್ ರೂರಲ್ ಹೆಲ್ತ್ ಮಿಷನ್‌ನಡಿ ಹೆಲ್ತ್ ಹಾಗೂ ವೆಲ್‌ನೆಸ್ ಸೆಂಟರ್ ಸ್ಥಾಪನೆಗಾಗಿ ₹1, 349.97 ಕೋಟಿ ನಿಗದಿ ಪಡಿಸಲಾಗಿದೆ.

Union budget 2019: ರೈಲ್ವೆಗೆ ದೂರದೃಷ್ಟಿ ಯೋಜನೆಗಳೇ ಇಲ್ಲ!

ನ್ಯಾಷನಲ್ ಹೆಲ್ತ್ ಮಿಷನ್ (ಎನ್‌ಎಚ್‌ಎಂ)ಗೆ ಪ್ರಸಕ್ತ ಆಯವ್ಯಯದಲ್ಲಿ ₹32,995 ಕೋಟಿ ನೀಡಲಾಗಿದ್ದು, ಕಳೆದ ಬಜೆಟ್‌ನಲ್ಲಿ ₹30,129.61 ಕೋಟಿ ಮೀಸಲಿಡಲಾಗಿತ್ತು. ಎನ್‌ಎಚ್‌ಎಂ ಅಡಿ ಬರುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗೆ ₹ 159 ಕೋಟಿ ಮೀಸಲಿಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ₹ 1899 ಕೋಟಿ ಇಳಿಮುಖವಾಗಿದೆ. ಏಡ್ಸ್ ಹಾಗೂ ಲೈಂಗಿಕ ಕಾಯಿಲೆಗಳ ನಿಯಂತ್ರಣಕ್ಕಾಗಿ ₹ 2,500 ಕೋಟಿ ಮೀಸಲಿಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ₹ 400 ಕೋಟಿ ಹೆಚ್ಚಳವಾಗಿದೆ.

ಕಳೆದ ಬಜೆಟ್‌ನಲ್ಲಿ ₹ 2100 ಕೋಟಿ ನೀಡಲಾಗಿತ್ತು. ಏಮ್ಸ್‌ಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ₹3,599.65 ಕೋಟಿ ಮೀಸಲಿಡಲಾಗಿದ್ದ 2018-19 ನೇ ಸಾಲಿಗೆ ಹೋಲಿಕೆ ಮಾಡಿದರೆ ₹ 3,018 ಕೋಟಿ ಹೆಚ್ಚಳವಾಗಿ ರಾಷ್ಟ್ರೀಯ ಮಾನಸಿಕ ಸ್ವಾಸ್ಥ್ಯ ಕಾರ್ಯಕ್ರಮಗಳಿಗೆ ₹ 40 ಕೋಟಿ ನೀಡಲಾಗಿದ್ದು, ಕಳೆದ ವರ್ಷ ₹ 50 ಕೋಟಿ ನೀಡಲಾಗಿತ್ತು. ಕ್ಯಾನ್ಸರ್, ಮಧುಮೇಹ, ಹೃದ್ರೋಗ, ಪಾರ್ಶ್ವವಾಯು ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಯೋಜನೆಗೆ ನೀಡಲಾಗಿದ್ದ  ಅನುದಾನವನ್ನು ₹ 295 ಕೋಟಿಯಿಂದ ₹ 175 ಕೋಟಿಗೆ ಇಳಿಕೆ ಮಾಡಲಾಗಿದೆ.

ನರ್ಸಿಂಗ್ ಸೇವೆಗಳ ಮೇಲ್ಮಟಕ್ಕೇರಿಸಲು ಹಾಗೂ ಸದೃಢಗೊಳಿಸಲು ₹ 24 ಕೋಟಿ ಅನುದಾನ ನೀಡಲಾಗಿದೆ. ಫಾರ್ಮಸಿ ಶಾಲೆ ಹಾಗೂ ಕಾಲೇಜುಗಳ ಮೇಲ್ದರ್ಜೆಗೇರಿಸಲು ₹ 5 ಕೋಟಿ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಗಳು ಹಾಗೂ ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜು(ಸ್ನಾತಕೋತ್ತರ ಪದವಿ)ಗಳ ಉನ್ನತೀ ಕರಣಕ್ಕಾಗಿ ₹ 800 ಕೋಟಿ ಮೀಸಲಿಡಲಾಗಿದೆ.

ಜಿಲ್ಲಾ ಆಸ್ಪತ್ರೆಗಳನ್ನು ನೂತನ ವೈದ್ಯಕೀಯ ಕಾಲೇಜುಗಳಾಗಿ ಪರಿವರ್ತಿಸಲು ₹ 2,000 ಕೋಟಿ ನೀಡಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಕೇಂದ್ರ ಸರ್ಕಾರ ಆರೋಗ್ಯ ಸಂಸ್ಥೆಗಳನ್ನು ಸದೃಢಗೊಳಿಸಲು ₹ 1,361 ಕೋಟಿ ಮೀಸಲಿಡಲಾಗಿದೆ. ರಾಜ್ಯಗಳಲ್ಲಿ ಅರೆ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸ್ಥಾಪನೆ ಹಾಗೂ ಅರೆ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ₹ 20 ಕೋಟಿ ಮೀಸಲಿಡಲಾಗಿದೆ.

ತೃತೀಯ ಹಂತದ ಆರೋಗ್ಯ ಸೇವೆಗಳಿಗೆ ನೀಡಲಾಗಿದ್ದ ಅನುದಾನವನ್ನು ₹ 200 ಕೋಟಿಗೆ ಇಳಿಕೆ ಮಾಡಲಾಗಿದ್ದು, ಕಳೆದ ವರ್ಷ ₹ 750 ಕೋಟಿ ಅನುದಾನ ನೀಡಲಾಗಿತ್ತು. 

Follow Us:
Download App:
  • android
  • ios