Asianet Suvarna News Asianet Suvarna News

ಇನ್ನು ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಖಾತೆಗೆ ಹಣ ಹಾಕುವಂತಿಲ್ಲ!

ಇನ್ನು ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಖಾತೆಗೆ ಹಣ ಹಾಕುವಂತಿಲ್ಲ!| ಬಜೆಟ್‌ನಲ್ಲಿ ಘೋಷಣೆ|

Budget 2019 plans to stop cash deposits in bank accounts without holder consent
Author
Bangalore, First Published Jul 6, 2019, 8:58 AM IST

ನವದೆಹಲಿ[ಜು.06]: ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮ ಬ್ಯಾಂಕ್ ಖಾತೆಗೆ ಬೇರೆಯವರು ಹಣ ಹಾಕುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ನಿಯಮವೊಂದನ್ನು ಜಾರಿಗೆ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ.

ಸದ್ಯ ದೇಶದಲ್ಲಿ ಯಾರು ಯಾರ ಬ್ಯಾಂಕ್ ಖಾತೆಗೆ ಬೇಕಾದರೂ ಅವರ ಗಮನಕ್ಕೆ ತಾರದೆ ಹಣ ಠೇವಣಿ ಮಾಡಬಹುದು. ಅಪನಗದೀಕರಣದ ನಂತರ ಜನರಿಗೆ ಗೊತ್ತೇ ಇಲ್ಲದೆ ಅವರ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಹಣ ಪಾವತಿಯಾಗಿರುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದ್ದವು. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದಕ್ಕೆ ತಡೆಯೊಡ್ಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ನಿಯಮ ಜಾರಿಗೆ ತರುವುದಾಗಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್‌ 2019ಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: https://bit.ly/2LC5Jvu

ಆದರೆ, ಈ ನಿಯಮ ಹೇಗಿರುತ್ತದೆ ಮತ್ತು ಯಾವಾಗ ಜಾರಿಗೆ ಬರುತ್ತದೆ ಎಂಬುದನ್ನು ಅವರು ತಿಳಿಸಿಲ್ಲ. ಒಟ್ಟಿನಲ್ಲಿ ಖಾತೆದಾರರ ಅನುಮತಿಯಿದ್ದರೆ ಮಾತ್ರ ಅವರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುವ ವ್ಯವಸ್ಥೆ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ.

Follow Us:
Download App:
  • android
  • ios