ಹಿಂದು-ಮುಸ್ಲಿಂ ಜಾಹೀರಾತು ನೀಡಿ ವಿವಾದ ಸೃಷ್ಟಿಸಿದ್ದ ತನಿಷ್ಕ್ ಜ್ಯುವೆಲ್ಲರಿ ಇದೀಗ ಮತ್ತೆ ಟ್ರೆಂಡ್ ಆಗಿದೆ. ಇದೀಗ ನೋ ಪಟಾಕಿ ಅನ್ನೋ ತನಿಷ್ಕ್ ಜಾಹೀರಾತಿಗೆ ನೆಟ್ಟಿಗರು ಮತ್ತೊಮ್ಮೆ ಗರಂ ಆಗಿದ್ದಾರೆ.

ಜಾಹೀರಾತಿನಲ್ಲಿ ನೀನಾ ಗುಪ್ತಾ, ನಿಮೃತ್ ಕೌರ್, ಸಯನಿ ಗುಪ್ತ, ಆಲಯ ಅವರು ಈ ವರ್ಷ ದೀಪಾವಳಿ ಆಚರನೆ ಹೇಗಿರುತ್ತೆ ಎಂಬುದರ ಬಗ್ಗೆ ಮಾತನಾಡುತ್ತಾರೆ. ಇವರ ಮಾತಿನಲ್ಲಿ ದೀಪಾವಳಿಯನ್ನು ಪಟಾಕಿ ಇಲ್ಲದೆ ಆಚರಿಸುವ ಬಗ್ಗೆ ಮಾತನಾಡಲಾಗಿದೆ.

ಹೊಸ ಜಾಹೀರಾತಿನಲ್ಲಿ ಹಿಂದೂ, ಮುಸ್ಲಿಂ ದಂಪತಿ: #BoycottTanishq ಈಗ ಟಾಪ್ ಟ್ರೆಂಡಿಂಗ್!

ಬಹಳಷ್ಟು ಜನ ಜಾಹೀರಾತು ನೋಡಿ ಟ್ರೋಲ್ ಮಾಡಿದ್ದು, ಇದು ಹಿಂದೂಗಳಿಗೆ ಹಬ್ಬ ನೀಡುವ ಸಲಹೆಯಾ ಎಂದು ಟೀಕಿಸಿದ್ದಾರೆ. ಜಾಹೀರಾತಿನಲ್ಲಿ ಮಾತನಾಡುವ ಸಯಾನಿ ಗುಪ್ತಾ ದುಬಾರಿ ಆಭರಣ ಧರಿಸಿ, ನಾನು ಅಮ್ಮನನ್ನು ಬಹಳ ಸಮಯದ ನಂತರ ಭೇಟಿಯಾಗಲಿದ್ದೇನೆ. ಖಂಡಿತವಾಗಿಯೂ ಪಟಾಕಿ ಇಲ್ಲ. ಯಾರೂ ಪಟಾಕಿ ಬಹಳಸಬಾರದೆಂಬುದು ನನ್ನ ಸಲಹೆ. ಬಹಳಷ್ಟು ದೀಪಗಳು, ನಗು, ಬಹಳಷ್ಟು ಪೊಸಿಟಿವಿಟಿ ಎಂದಿದ್ದಾರೆ.

ಚೆನ್ನಾಗಿ ಬಟ್ಟೆ ತೊಟ್ಟು ಆಭರಣ ಧರಿಸಿ ಎಂದಿದ್ದಾರೆ ನೀನಾ. ಅಂತೂ ಸದ್ಯ ಈ ಜಾಹೀರಾತಿನ ತುಣುಕು ವೈರಲ್ ಆಗಿದ್ದು ಮತ್ತೊಮ್ಮೆ ತನಿಷ್ಕ್ ನೆಟ್ಟಿಗರ ಕೋಪಕ್ಕೆ ಗುರಿಯಾಗಿದೆ.

 

ಈಗಾಗಲೇ ಕೊರೋನಾ ರೋಗಿಗಳ ಸುರಕ್ಷತಾ ದೃಷ್ಟಿಯಿಂದ ಪಟಾಕಿ ಬಹಳಸದಂತೆ ಎಲ್ಲೆಡೆ ಸೂಚನೆ ನೀಡಲಾಗಿದೆ. ವಾಯ ಮಾಲೀನ್ಯ ಹೆಚ್ಚಿ ಕೊರೋನಾ ರೋಗಿಗಳಿಗೆ ಇನ್ನಷ್ಟು ಸಮಸ್ಯೆಯಾಗುವುದನ್ನು ತಪ್ಪಿಸಲು ಈ ರೀತಿ ಹೇಳಲಾಗಿದೆ.