ನಮ್ಮ ಮೆಟ್ರೋದಲ್ಲಿ ಈಗ QR ಕೋಡ್ ಟಿಕೆಟ್ ಬುಕ್ ಮಾಡಿ ರಿಯಾಯಿತಿ ಪಡೆಯಿರಿ!

ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ನಮ್ಮ ಮೆಟ್ರೋ, ಪ್ರಯಾಣಿಕರಿಗೆ ಪ್ರಯಾಣವನ್ನು ಮತ್ತಷ್ಟು ಸುಲಭ ಮಾಡುವ ಜೊತೆಗೆ ಬಂಪರ್ ಕೊಡುಗೆ ನೀಡ್ತಿದೆ. ನಮ್ಮ ಮೆಟ್ರೋ ಪ್ರಯಾಣಿಕರಿಗೆ QR ಕೋಡ್ ಮೂಲಕ ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ. ಈ ವ್ಯವಸ್ಥೆಯು ಸರತಿ ಸಾಲಿನಲ್ಲಿ ನಿಲ್ಲುವ ಸಮಯವನ್ನು ಉಳಿಸ್ತಿದೆ ಮತ್ತು ಟಿಕೆಟ್ ದರದ ಮೇಲೆ ರಿಯಾಯಿತಿ ನೀಡ್ತಿದೆ. 

Book ticket through Namma metro QR code get Rs five percent discount roo

ಬೆಂಗಳೂರಿಗರಿಗೆ ಈಗ ನಮ್ಮ ಮೆಟ್ರೋ (Namma Metro) ಫೆವರೆಟ್ ಆಗಿದೆ. ಯಾವುದೇ ಸಿಗ್ನಲ್ ಇಲ್ದೆ, ದೂರದ ಸ್ಥಳವನ್ನು ಅತಿ ಬೇಗ ತಲುಪಲು ನಮ್ಮ ಮೆಟ್ರೋದಿಂದ ಸಾಧ್ಯವಾಗಿದೆ. ಮೆಟ್ರೋ ಎಷ್ಟೇ ರಶ್ ಇದ್ರೂ ಸುಸ್ತಿಲ್ಲದ ಪ್ರಯಾಣ ಎನ್ನುವ ಸಿಲಿಕಾನ್ ಸಿಟಿ (Silicon City) ಜನರು ಇದನ್ನು ನೆಚ್ಚಿಕೊಂಡಿದ್ದಾರೆ. ನಮ್ಮ ಮೆಟ್ರೋ, ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಅನೇಕ ಸೌಲಭ್ಯಗಳನ್ನು ಜಾರಿಗೆ ತರ್ತಾನೆ ಇದೆ. ಟೋಕನ್, ಪಾಸ್ ಜೊತೆ ಈಗಾಗಲೇ ನಮ್ಮ ಮೆಟ್ರೋ, ಪ್ರಯಾಣಿಕರಿಗಾಗಿ ಕ್ಯೂಆರ್ ಕೋಡ್ (QR Code) ಜಾರಿಗೆ ತಂದಿದೆ. ನೀವಿನ್ನೂ ಕ್ಯೂಆರ್ ಕೋರ್ಡ್ ಬಳಸಿ ಟಿಕೆಟ್ ಬುಕ್ (Ticket Book) ಮಾಡಿಲ್ಲ ಅಂದ್ರೆ ಈಗ್ಲೇ ಇದ್ರ ಪ್ರಯೋಜನ ಪಡೆಯಿರಿ.

ನಮ್ಮ ಮೆಟ್ರೋ ಪ್ರಯಾಣಿಕರು ಕ್ಯೂನಲ್ಲಿ ನಿಂತು ಟಿಕೆಟ್ ಕೂಪನ್ (Ticket Coupon) ಪಡೆಯುವ ಅಗತ್ಯ ಇದ್ರಲ್ಲಿ ಇರೋದಿಲ್ಲ. ನೀವು ಸರತಿ ಸಾಲಿನಲ್ಲಿ ನಿಂತು ಟೈಂ ಹಾಳು ಮಾಡದೆ, ಆರಾಮವಾಗಿ ಟಿಕೆಟ್ ಬುಕ್ ಮಾಡ್ಬಹುದು. ಎಲ್ಲ ಮೆಟ್ರೋ ನಿಲ್ದಾಣದಲ್ಲಿ ಈ ಕ್ಯೂಆರ್ ಕೋಡ್ ಹಾಕಲಾಗಿದೆ. ಮೊದಲು ಅದನ್ನು ನೀವು ಸ್ಕ್ಯಾನ್ ಮಾಡಬೇಕು. ತಕ್ಷಣ ನಿಮಗೆ ಮೆಟ್ರೋ ಕಡೆಯಿಂದ ವಾಟ್ಸ್ ಅಪ್ ಮೆಸ್ಸೇಜ್ ಬರುತ್ತದೆ. ಅಲ್ಲಿ ನೀವು ಹಾಯ್ ಅಂತ ಟೈಪ್ ಮಾಡಿ ಸೆಂಡ್ ಮಾಡ್ಬೇಕು. ನಿಮಗೆ ಯಾವ ಭಾಷೆಯಲ್ಲಿ ಮಾಹಿತಿ ನೀಡ್ಬೇಕು ಎಂಬ ಇನ್ನೊಂದು ಸಂದೇಶ ಬರುತ್ತದೆ. ಕನ್ನಡ ಅಥವಾ ಇಂಗ್ಲೀಷ್ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಆ ನಂತ್ರ ಕ್ಯೂಆರ್ ಟಿಕೆಟ್, ಕಾರ್ಡ್ ಮಾಹಿತಿ ಮತ್ತು ರಿಚಾರ್ಜ್ ಮತ್ತು ಮೋರ್ ಆಪ್ಷನ್ ಆಯ್ಕೆ ಬರುತ್ತದೆ. ನೀವು ಟಿಕೆಟ್ ಪಡೆಯುವವರಾಗಿದ್ದರೆ ಕ್ಯೂಆರ್ ಟಿಕೆಟ್ ಮೇಲೆ ಕ್ಲಿಕ್ ಮಾಡಬೇಕು. ನಿಮಗೆ ಬೈ ಟಿಕೆಟ್, ಕ್ಯಾನ್ಸಲ್ ಟಿಕೆಟ್ ಎಂಬ ಇನ್ನೊಂದು ಆಯ್ಕೆ ಕಾಣಿಸುತ್ತದೆ. ನೀವು ಟಿಕೆಟ್ ಖರೀದಿ ಮಾಡುವವರಾಗಿದ್ದರೆ ಅದ್ರ ಮೇಲೆ ಕ್ಲಿಕ್ ಮಾಡಿದ ನಂತ್ರ ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ಹೋಗುತ್ತಿದ್ದೀರಿ, ಎಷ್ಟು ಟಿಕೆಟ್ ಎಂದು ಟೈಪ್ ಮಾಡಬೇಕಾಗುತ್ತದೆ.

ಮದುವೆಯಾದ ಮಹಿಳೆಯರಿಗೆ ಆದಾಯ ತೆರೆಗೆಯಲ್ಲಿ 7 ಲಕ್ಷ ರೂ ವರೆಗೆ ಉಳಿಸಲು ಇಲ್ಲಿದೆ 3 ಸಲಹೆ!

ನಿಮಗೆ ನಮ್ಮ ಮೆಟ್ರೋ ಕಡೆಯಿಂದ ಸೀಟ್ ಬುಕ್ ಜೊತೆ ಎಷ್ಟು ಶುಲ್ಕ ಪಾವತಿ ಮಾಡಬೇಕು ಎಂಬ ಮಾಹಿತಿ ಸಿಗುತ್ತದೆ. ಯುಪಿಐ, ಆನ್ಲೈನ್ ಪೇಮೆಂಟ್ ಆಯ್ಕೆ ಸಿಗಲಿದ್ದು, ನೀವು ಪೇ ಮಾಡಿದ ನಂತ್ರ ನಿಮಗೆ ಟಿಕೆಟ್ ಡೌನ್ಲೋಡ್ ಮಾಹಿತಿ ಬರುತ್ತದೆ. ನೀವು, ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಸ್ಕ್ಯಾನ್ ಮಾಡುತ್ತಿದ್ದ ಸ್ಥಳದಲ್ಲಿ ನಿಮ್ಮ ಮೊಬೈಲ್ ನಲ್ಲಿ ಬಂದ ಟಿಕೆಟ್ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡಬೇಕು. ಆಗ ನಿಮಗೆ ಮೆಟ್ರೋ ಹತ್ತಲು ಅನುಮತಿ ಸಿಗುತ್ತದೆ. ಗಮ್ಯಸ್ಥಾನ ತಲುಪಿದ ನಂತ್ರವೂ ಇದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೊರಗೆ ಬರಬೇಕು.

ಈ 5 'ಮನಿ ಟಿಪ್ಸ್‌' ಫಾಲೋ ಮಾಡಿದ್ರೆ ತಿಂಗಳ ಕೊನೆಗೆ ಇನ್ನೊಬ್ಬರ ಬಳಿ ಕೈಚಾಚುವುದು ತಪ್ಪತ್ತೆ!

ಕ್ಯೂಆರ್ ಕೋಡ್ ಬಳಕೆಯಿಂದ ಆಗುವ ಲಾಭ : ನೀವು, ನಮ್ಮ ಮೆಟ್ರೋದಲ್ಲಿ ಟೋಕನ್ ಗೆ ಕಾಯಬೇಕಾಗಿಲ್ಲ. ಟಿಕೆಟ್ ಟೋಕನ್ ಭದ್ರವಾಗಿಟ್ಟುಕೊಳ್ಳಬೇಕಾಗಿಲ್ಲ. ಅಲ್ಲದೆ ನಿಮಗೆ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಬುಕ್ ಮಾಡಿದ್ರೆ ಟಿಕೆಟ್ ಮೇಲೆ ಶೇಕಡಾ 5ರಷ್ಟು ರಿಯಾಯಿತಿ ಸಿಗುತ್ತದೆ. 

ಇದು ನಮ್ಮ ಮೆಟ್ರೋ ಪ್ರಯಾಣಿಕರ ಕೆಲಸವನ್ನು ಸುಲಭಗೊಳಿಸಿದೆ. 30 ಲಕ್ಷಕ್ಕೂ ಹೆಚ್ಚು ಮಂದಿ ಈ ಕ್ಯೂಆರ್ ಕೋಡ್ ಬಳಕೆ ಮಾಡ್ತಿದ್ದಾರೆ. ನೇರಳೆ ಮಾರ್ಗದ ಮೆಟ್ರೋ ಸಂಚಾರ ಶುರುವಾದ ಮೇಲೆ ಇದಕ್ಕೆ ಮತ್ತಷ್ಟು ಮಹತ್ವ ಬಂದಿದೆ. ಇಲ್ಲಿ ಐಟಿ ಉದ್ಯೋಗಿ (IT Employee) ಗಳ ಸಂಖ್ಯೆ ಹೆಚ್ಚಿದ್ದು, ಅವರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯೂಆರ್ ಕೋಡ್ ಬಳಕೆ ಮಾಡ್ತಿದ್ದಾರೆ ಎಂದು ಮೂಲಗಳು ಹೇಳಿವೆ. 

Latest Videos
Follow Us:
Download App:
  • android
  • ios