ಯಾವ ಶಾಲೆಗೆ ಹೋಗ್ತಾಳೆ ಐಶ್ವರ್ಯಾ ಮಗಳು ಆರಾಧ್ಯಾ? ಫೀಸ್ ಎಷ್ಟು ಗೊತ್ತಾ?

ಸೆಲೆಬ್ರಿಟಿ ಮಕ್ಕಳ ಬಗ್ಗೆ ಕುತೂಹಲವಿರುತ್ತದೆ. ಅವರು ಎಲ್ಲಿ, ಏನು ಓದುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಅಭಿಮಾನಿಗಳಿಗಿರುತ್ತದೆ. ಮಾಜಿ ವಿಶ್ವಸುಂದರಿ ಮಗಳು, ಐಶ್ವರ್ಯ ರೈ ಮುದ್ದಿನ ಆರಾಧ್ಯ ಶಾಲೆ ಬಗ್ಗೆ ನಾವಿಂದು ಡಿಟೇಲ್ ಹೇಳ್ತೇವೆ. 
 

Bollywood actress Aishwarya Rai Daughter Aaradhya Bachchan School Name roo

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡ್ಬೇಕು, ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು, ಮಕ್ಕಳ ಭವಿಷ್ಯವನ್ನು ಬಲಗೊಳಿಸಬೇಕು ಎಂಬುದು ಪ್ರತಿಯೊಬ್ಬ ಪಾಲಕರ ಆಸೆ. ಇದೇ ಕಾರಣಕ್ಕೆ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಹತ್ತಾರು ಶಾಲೆಗಳನ್ನು ವಿಚಾರಿಸಿ, ಯಾವುದು ಮಕ್ಕಳಿಗೆ ಯೋಗ್ಯ ಎಂಬುದನ್ನು ಗಮನಿಸಿ ದಾಖಲು ಮಾಡ್ತಾರೆ. ಇದ್ರಲ್ಲಿ ಬಾಲಿವುಡ್ ಕಲಾವಿದರು ಹೊರತಾಗಿಲ್ಲ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅವರು ಸಾಕಷ್ಟು ಪ್ರಯತ್ನ ನಡೆಸುತ್ತಾರೆ.

ಬಾಲಿವುಡ್ (Bollywood) ಬೆಡಗಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ಮಗಳ ಮೇಲೆ ಒಂದಿಂಚು ಹೆಚ್ಚಿನ ಪ್ರೀತಿ ಹೊಂದಿದ್ದಾರೆ. ಮಗಳು ಆರಾಧ್ಯಾಳಿಗೆ ಆದ್ಯತೆ ನೀಡುವ ಐಶ್ವರ್ಯ ಎಲ್ಲಿಗೆ ಹೋದ್ರೂ ಆರಾಧ್ಯಾಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗ್ತಾರೆ. ಅಷ್ಟೇ ಅಲ್ಲ ಮಗಳ ಶಿಕ್ಷಣಕ್ಕಾಗಿ ಉತ್ತಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾವಿಂದು ಬಚ್ಚನ್ ಕುಟುಂಬದ ಕುಡಿ ಆರಾಧ್ಯಾ  ಯಾವ ಶಾಲೆಗೆ ಹೋಗ್ತಾಳೆ, ಹಾಗೆ ಅವಳ ಶಾಲೆ ಫೀ ಎಷ್ಟು ಎಂಬುದನ್ನು ನಿಮಗಗೆ ಹೇಳ್ತೇವೆ. 

ಬ್ಯಾಂಕ್ ಎಫ್ ಡಿ ಖಾತೆಯನ್ನು ಆನ್ ಲೈನ್ ನಲ್ಲೇ ಸುಲಭವಾಗಿ ಕ್ಲೋಸ್ ಮಾಡ್ಬಹುದು, ಹೇಗೆ? ಇಲ್ಲಿದೆ ಮಾಹಿತಿ

ಐಶ್ವರ್ಯ ರೈ ಬಚ್ಚನ್ ಮಗಳು ಹೋಗೋ ಶಾಲೆ ಇದು : ಆರಾಧ್ಯ, ಮುಂಬೈನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಅಂಬಾನಿ (Ambani) ಶಾಲೆಯಾದ ಧೀರೂಬಾರಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲಿಗೆ ಹೋಗ್ತಾಳೆ. ಆರಾಧ್ಯ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಪೂರ್ವ ಬಾಂದ್ರಾದ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್ ನಲ್ಲಿದೆ. ಇದು ಅಂಬಾನಿ ಪರಿವಾರದ ಒಡೆತನದಲ್ಲಿರುವ ಶಾಲೆಯಾಗಿದೆ. ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ಈ ಶಾಲೆಯ ಅಧ್ಯಕ್ಷರಾಗಿದ್ದಾರೆ. ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆ  CISCE (ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್), CAIE (ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಟರ್ನ್ಯಾಷನಲ್ ಎಜುಕೇಶನ್) ಮತ್ತು IB (ಇಂಟರ್ನ್ಯಾಷನಲ್ ಬ್ಯಾಕಲೌರಿಯೇಟ್) ಬೋರ್ಡ್‌ಗಳ ಸಂಯೋಜಿತವಾಗಿದೆ. 

ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಬಾಲಿವುಡ್ ಸ್ಟಾರ್ಸ್ ಅಚ್ಚುಮೆಚ್ಚಿನ ಶಾಲೆ. ಇಲ್ಲಿ ಬಾಲಿವುಡ್ ಕೆಲ ಸ್ಟಾರ್ಸ್ ಮಕ್ಕಳು ಓದಿದ್ದಾರೆ. ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ರ ಮೂರು ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್ರಾಮ್ ಕೂಡ ಇಲ್ಲಿಯೇ ಓದಿದ್ದಾರೆ. ಅಬ್ರಾಮ್ ಈಗ್ಲೂ ಈ ಶಾಲೆಯಲ್ಲಿ ಓದುತ್ತಿದ್ದಾನೆ. ಇಷ್ಟೇ ಅಲ್ಲ ಅನನ್ಯಾ ಪಾಂಡೆ, ಜಾನ್ಹವಿ ಕಪೂರ್, ಖುಷಿ ಕಪೂರ್ ಕೂಡ ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿಯೇ ವಿದ್ಯಾಭ್ಯಾಸ (Education) ಮುಗಿಸಿದ್ದಾರೆ. 

ಡಿವೋರ್ಸ್ ಅನ್ನೋದು ಕೆಟ್ಟ ಶಬ್ದವಲ್ಲ ಅಂದಿದ್ಯಾಕೆ ರಾಜ್‌ ಶೆಟ್ಟಿ, ಅಂಥದ್ದೇನಾಯ್ತು?

ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಶುಲ್ಕವೆಷ್ಟು ಗೊತ್ತಾ?: ಸದ್ಯ ಆರಾಧ್ಯ ಕೂಡ ಇಲ್ಲಿಯೇ ವಿದ್ಯಾಭ್ಯಾಸ ಮಾಡ್ತಿದ್ದಾಳೆ. ಧೀರೂಬಾಯಿ ಅಂಬಾನಿ ಶಾಲೆ, ವಿಶ್ವದ ದುಬಾರಿ ಶಾಲೆಗಳಲ್ಲಿ ಒಂದು. ಈ ಶಾಲೆ 7 ಮಹಡಿಗಳನ್ನು ಹೊಂದಿದೆ. ಇಲ್ಲಿ ಎಲ್ ಕೆಜಿಯಿಂದ ಹಿಡಿದು 12ನೇ ತರಗತಿಯವರೆಗೆ ಕಲಿಸಲಾಗುತ್ತದೆ. 

ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 11ನೇ ತರಗತಿ ಮತ್ತು 12ನೇ ತರಗತಿ ಕಲಿಯುವ ವಿದ್ಯಾರ್ಥಿಗಳ ಶುಲ್ಕ 9.35 ಲಕ್ಷ  ರೂಪಾಯಿ. 8ನೇ ತರಗತಿಯಿಂದ 10ನೇ ತರಗತಿ ಓದುವ ಸಿಬಿಎಸ್‌ಸಿ ವಿದ್ಯಾರ್ಥಿಗಳ ಶುಲ್ಕ ಒಂದು ಲಕ್ಷದ 85 ಸಾವಿರ ರೂಪಾಯಿ. ಅದೇ 8ರಿಂದ 10ನೇ ತರಗತಿ ಓದುವ ಐಜಿಎಸ್ಸಿಇ ಬೋರ್ಡ್ ವಿದ್ಯಾರ್ಥಿಗಳ ಶುಲ್ಕ ನಾಲ್ಕು ಲಕ್ಷದ 48 ಸಾವಿರ ರೂಪಾಯಿ. ಎಲ್ ಕೆಜಿಯಿಂದ 7ನೇ ತರಗತಿ ಓದುವ ಮಕ್ಕಳ ಶುಲ್ಕ 1 ಲಕ್ಷದ 70 ಸಾವಿರ ರೂಪಾಯಿಯಾಗಿದೆ. ಆದ್ರೆ ಇಲ್ಲಿ ಅಡ್ಮಿಷನ್  ಪಡೆಯೋದು ಸುಲಭವಲ್ಲ. 
 

Latest Videos
Follow Us:
Download App:
  • android
  • ios