ಬಿಟ್‌ ಕಾಯಿನ್‌ ರೀತಿ ಕರೆನ್ಸಿ ಇದ್ದರೆ 10 ವರ್ಷ ಜೈಲು

ಬಿಟ್‌ ಕಾಯಿನ್‌ ಬಳಸಿದರೆ 10 ವರ್ಷ ಜೈಲು| ಕರಡು ಮಸೂದೆ ಸಿದ್ಧ, ಶೀಘ್ರ ಸಂಸತ್‌ನಲ್ಲಿ ಮಂಡನೆ

Bitcoin users may get jail term of 10 years as government plans law to ban cryptocurrency

ನವದೆಹಲಿ[ಜೂ.11]: ಬಿಟ್‌ಕಾಯಿನ್‌ ಹಾಗೂ ಇತರ ಕ್ರಿಪ್ಟೋ ಕರೆನ್ಸಿಗಳ ಸಂಗ್ರಹ, ಮಾರಾಟ ಮತ್ತು ವ್ಯವಹಾರ ಮಾಡಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಯೊಂದನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಕ್ರಿಪ್ಟೋ ಕರೆನ್ಸಿ ನಿಷೇಧ ಹಾಗೂ ಅಧಿಕೃತ ಡಿಜಿಟಲ್‌ ಕರೆನ್ಸಿ ನಿಯಂತ್ರಣ ಮಸೂದೆ 2019ರ ಕರಡು ಪ್ರಸ್ತಾವನೆಯಲ್ಲಿ ಬಿಟ್‌ ಕಾಯಿನ್‌ ಬಳಕೆಗೆ ಜೈಲು ಶಿಕ್ಷೆ ವಿಧಿಸುವ ಅಂಶವಿದೆ. ಬಿಟ್‌ ಕಾಯಿನ್‌ಗಳನ್ನು ಸಂಪೂರ್ಣ ನಿಷೇಧಿಸುವುದರ ಜೊತೆಗೆ, ಕ್ರಿಪ್ಟೋ ಕರೆನ್ಸಿಯನ್ನು ಸಂಗ್ರಹಿಸುವುದು ಸಹ ಶಿಕ್ಷಾರ್ಹ ಅಪರಾಧ ಎನಿಸಿಕೊಳ್ಳಲಿದೆ.

ಶೀಘ್ರದಲ್ಲೇ ಈ ಮಸೂದೆಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸಲಿದೆ. ಬಿಟ್‌ ಕಾಯಿನ್‌ ಎನ್ನುವುದು ಡಿಜಿಟಲ್‌ ಅಥವಾ ವರ್ಚುವಲ್‌ ಕರೆನ್ಸಿ ಆಗಿದ್ದು, ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಒಳಗೊಂಡಿದೆ. ಪರಸ್ಪರ ಹೋಲಿಕೆಯೇ ಇಲ್ಲದ ಕಂಪ್ಯೂಟರ್‌ ನೆಟ್‌ವರ್ಕ್ ಮೂಲಕ ಇವುಗಳನ್ನು ವಿತರಿಸಲಾಗುತ್ತದೆ. ಇವುಗಳ ಮೇಲೆ ಸರ್ಕಾರದ ಯಾವುದೇ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಇವು ದುರ್ಬಳಕೆಯಾಗುವ ಸಂದರ್ಭಗಳೇ ಅಧಿಕವಾಗಿವೆ.

ತೆರಿಗೆ ಇಲಾಖೆ, ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿಗಳು ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆರ್ಥಿಕ ವ್ಯವಹಾರಗಳ ಸಚಿವಾಲಯದಲ್ಲಿ ಕಳೆದ ಕೆಲವು ದಿನಗಳಿಂದ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಕರಡು ಮಸೂದೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್‌ ಚಂದ್ರ ಗರ್ಗ್‌ ಈ ಪ್ರಕ್ರಿಯೆಯ ನೇತೃತ್ವ ವಹಿಸಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios