ವಾಷಂಗ್ಟನ್(ಸೆ.16): ಬಿಲ್ ಆಂಡ್ ಮಿಲಿಂಡಾ ಗೇಟ್ಸ್ ಫೌಂಡೇಷನ್‌ನ ಸಂಸ್ಥಾಪಕ ಬಿಲ್‌ ಗೇಟ್ಸ್‌ ಮತ್ತೊಮ್ಮೆ ಭಾರತದ 'ಆಧಾರ್' ಸಿಸ್ಟಮ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು ಆಧಾರ್ ಹಾಗೂ NPCI ಡಿಜಿಟಲ್ ಆರ್ಥಿಕ ಪ್ರಣಾಳಿಕೆ ಮತ್ತೊಮ್ಮೆ ಲಾಭದಾಯಕ ಎಂದು ಸಾಬೀತಾಗಿದೆ ಎಂದಿದ್ದಾರೆ. ಈ ಹಿಂದೆಯೂ ಒಂದು ಬಾರಿ ಅವರು ಆಧಾರ್ ತಂತ್ರಜ್ಞಾನ ಕುರಿತು ಮಚ್ಚುಗೆ ವ್ಯಕ್ತಪಡಿಸುತ್ತಾ ಇದರಿಂದ ಗೌಪ್ಯತೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು.

ಕೊರೋನಾ ನಿಯಂತ್ರಣ ಮಾಡಲು ಭಾರತದ ನೆರವು ವಿಶ್ವಕ್ಕೆ ಅಗತ್ಯವಿದೆ: ಬಿಲ್ ಗೇಟ್ಸ್!

ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಅವರು ಡಿಜಿಟಲ್ ಮಾಧ್ಯಮದ ಮೂಲಕ ವ್ಯವಹಾರ ನಡೆಸುವುದೇ ಒಂದು ಅದ್ಭುತ. ಭಾರತ ಯಾವ ಮಟ್ಟದಿಂದ ಅಳವಡಿಸಿಕೊಂಡಿದೆಯೋ ಅದು ಇನ್ಯಾವ ರಾಷ್ಟ್ರದಲ್ಲೂ ನೋಡಲು ಸಿಗುವುದಿಲ್ಲ. ಭಾರತ ತನ್ನ ಡಿಜಿಟಲ್ ವ್ಯವಹಾರ ಕ್ಷಮತೆಗಳ ಬಳಸಿಕೊಳ್ಳಲು ಸಶಕ್ತವಾಗಿತ್ತು. ಅಲ್ಲಿ ಆಧಾರ್ ಹಾಗೂ  NPCI ಪಾವತಿ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎದು ಅವರು ತಿಳಿಸಿದ್ದಾರೆ.

ಈ ಸ್ಕೀಂ ಇತರ ದೇಶಗಳೂ ಅಳವಡಿಸಿಕೊಳ್ಳಬೇಕು

ಈ ಹಿಂದೆ 2018 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲೂ ಮಾತನಾಡಿದ್ದ ಬಿಲ್ ಗೇಟ್ಸ್ ಆಧಾರ್ ವ್ಯವಸ್ಥೆ ಕುರಿತು ಶ್ಲಾಘಿಸಿದ್ದರು. ಈ ಆಧಾರ್ ತಂತ್ರಜ್ಞಾನದಲ್ಲಿ ಗೌಪ್ಯತೆ ಇದೆ. ಹೀಗಾಗಿ ಡೇಟಾ ಲೀಕ್ ಆಗುತ್ತದೆ ಎಂಬ ಭಯವಿಲ್ಲ ಎಂದಿದ್ದರು. ಅಲ್ಲದೇ ಈ ಸೌಲಭ್ಯ ಅಳವಡಿಸಿಕೊಳ್ಳಲು ಯೋಗ್ಯವಾದದ್ದು ಹೀಗಾಗಿ ಬಿಲ್ ಆಂಡ್ ಮಿಲಿಂಡಾ ಫೌಂಡೇಷನ್ ಇತರ ದೇಶಗಳಿಗೂ ಈ ಸೌಲಭ್ಯ ಕಲ್ಪಿಸಲು ದೇಣಿಗೆ ನೀಡಿತ್ತು ಎಂದಿದ್ದಾರೆ.

ಸ್ಟೀವ್ ಜಾಬ್ಸ್ ಕಂಡರೆ ಹೊಟ್ಟೆಕಿಚ್ಚಾಗಿತ್ತು: ಬಿಲ್ ಗೇಟ್ಸ್

ಏನಿದು NPCI?

ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಇಂಡಿಯಾ(NPCI), ಭಾರತದ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಣಾಳಿಕೆಯೊಂದಿಗೆ ಭೌತಿಕ ಹಾಗೂ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಗಳಿಗೆ ಮೂಲಸೌಕರ್ಯ ಒದಗಿಸುವುದು ಈ ಕಂಪನಿ ಉದ್ದೇಶವಾಗಿದೆ. ಇದು ಭಾರತೀಯ ರಿಸರ್ವ್‌ ಬ್ಯಾಂಕ್ ಮಾರ್ಗದರ್ಶನದಲ್ಲಿ ಹತ್ತು ಬಹುದೊಡ್ಡ ಭಾರತೀಯ ಬ್ಯಾಂಕ್‌ಗಳಿಂದ ಸ್ಥಾಪಸಲ್ಪಟ್ಟಿದೆ.