ಮಹಾರಾಷ್ಟ್ರದ ಮುಂಬೈಗೆ ಸೋಮವಾರ ಮತದಾನವಾಗಿದೆ. ಬಾಲಿವುಡ್‌ ಹೆಚ್ಚಿನ ಸೆಲೆಬ್ರಿಟಿಗಳು ಮತದಾನ ಮಾಡಿದ್ದಾರೆ. ಈ ವೇಳೆ ಕೋಟ್ಯಧಿಪತಿ ಮುಖೇಶ್‌ ಅಂಬಾನಿ ವೋಟ್‌ ಮಾಡೋಕೆ ಬಂದ ರೀತಿ ಎಲ್ಲರ ಗಮನಸೆಳೆದಿದೆ. 

ಮುಂಬೈ (ಮೇ.21): ಒಂದೆಡೆ ಇಡೀ ದೇಶದ ಚುನಾವಣೆಯಲ್ಲಿ ಅಂಬಾನಿ-ಅದಾನಿ ಹೆಸರು ರಾರಾಜಿಸ್ತಾ ಇದ್ರೆ, ಬಿಲಿಯನೇರ್‌ ಮುಖೇಶ್‌ ಅಂಬಾನಿ ಮಾತ್ರ ಸೋಮವಾರ ಪ್ಲಾಸ್ಟಿಕ್‌ ಕವರ್‌ನಲ್ಲಿ ಆಧಾರ್‌ ಕಾರ್ಡ್‌ನ ಸುತ್ತಿಕೊಂಡು ಬಂದು ವೋಟ್‌ ಮಾಡಿ ಹೋಗಿದ್ದಾರೆ. ಅವರ ಈ ಸಿಂಪ್ಲಿಸಿಟಿ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಚರ್ಚೆ ಆಗುತ್ತಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈಗೆ ಐದನೇ ಹಂತದಲ್ಲಿ ಸೋಮವಾರ ಮತದಾನವಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಚೇರ್ಮನ್‌ ಮುಖೇಶ್‌ ಅಂಬಾನಿ ಅವರ ಪತ್ನಿ ರಿಲಯನ್ಸ್‌ ಫೌಂಡೇಷನ್‌ನ ನೀತಾ ಅಂಬಾನಿ, ಹಿರಿಯ ಪುತ್ರ ಆಕಾಶ್‌ ಅಂಬಾನಿ ಪೂಲಿಂಗ್‌ ಬೂತ್‌ಗೆ ಬಂದು ಪ್ರಜಾಪ್ರಭುತ್ವದ ತಮ್ಮ ಅಧಿಕಾರವನ್ನು ಚಲಾವಣೆ ಮಾಡಿದರು. "ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ತಮ್ಮ ಪುತ್ರನೊಂದಿಗೆ ಮುಂಬೈನ ಮತದಾನ ಕೇಂದ್ರಕ್ಕೆ 2024 ರ ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಆಗಮಿಸಿದ್ದರು' ಎಂದು ಎಎನ್‌ಐ ವರದಿ ಮಾಡಿದೆ.

ಮಲಬಾರ್ ಹಿಲ್ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ನೀತಾ ಅಂಬಾನಿ, “ಭಾರತೀಯ ಪ್ರಜೆಯಾಗಿ ಮತದಾನ ಮಾಡುವುದು ಮುಖ್ಯ. ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿ. ಭಾರತದಲ್ಲಿರುವ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ' ಎಂದು ಹೇಳಿದರು.

ಈ ವೇಳೆ ಕೆಲವು ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಮುಖೇಶ್‌ ಅಂಬಾನಿ ಆಧಾರ್‌ ಕಾರ್ಡ್‌ ಹಿಡಿದುಕೊಂಡು ಬಂದ ರೀತಿಯನ್ನು ಗಮನಸೆಳೆದಿದ್ದಾರೆ. ಬಿಲಿಯನೇರ್‌ ಆಗಿದ್ದರೂ ಮುಖೇಶ್‌ ಅಂಬಾನಿ ಚಿಕ್ಕ ಪಾರದರ್ಶಕ ಪ್ಲಾಸ್ಟಿಕ್‌ ಪೌಚ್‌ನಲ್ಲಿ ಆಧಾರ್‌ ಕಾರ್ಡ್‌ಅನ್ನು ತೆಗೆದುಕೊಂಡು ಬಂದಿದ್ದರು. ಎಲ್ಲಾ ಭಾರತೀಯರಂತೆ ನಮ್ಮ ಮುಖೇಶ್‌ ಅಂಬಾನಿ ಕೂಡ ಆಧಾರ್‌ ಕಾರ್ಡ್‌ಅನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಹಿಡ್ಕೊಂಡು ಬಂದಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. 'ಇದು ಅಂಬಾನಿಗಳ ಸರಳತೆ..' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಕತ್ತಲ್ಲಿ ಚಿನ್ನದ ಸರವಲ್ಲ, ಕೈಯಲ್ಲಿ ಚಿನ್ನದ ಗಡಿಯಾರವಿಲ್ಲ. ಎಷ್ಟು ಸಿಂಪಲ್‌ ಆಗಿ ಅದಾನಿ ಬದುಕುತ್ತಿದ್ದಾರೆ..' ಎಂದು ಮತ್ತೊಬ್ಬರು ಬರೆದಿದ್ದಾರೆ.

ಇದಕ್ಕೂ ಮುನ್ನ ಮುಂಬೈನ ಮತಗಟ್ಟೆಯಲ್ಲಿ ಅನಿಲ್ ಅಂಬಾನಿ ಮತದಾನ ಮಾಡಿದರು. ಸರತಿ ಸಾಲಿನಲ್ಲಿ ನಿಂತು ತಾಳ್ಮೆಯಿಂದ ಬೂತ್‌ನಲ್ಲಿ ಸರದಿಗಾಗಿ ಕಾಯುತ್ತಿರುವುದು ಕಂಡುಬಂತು. ಅವರು ಸರತಿ ಸಾಲಿನಲ್ಲಿ ನಿಂತಿರುವ ವೀಡಿಯೊವನ್ನು ಎಎನ್‌ಐ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಕಾಮತೃಷೆಗಾಗಿ ಗುದದ್ವಾರದಲ್ಲಿ ಸೆಕ್ಸ್‌ ಟಾಯ್‌ ತೂರಿಸಿಕೊಂಡಿದ್ದ 45ರ ವ್ಯಕ್ತಿ, ಸರ್ಜರಿ ಮೂಲಕ ಹೊರತೆಗೆದ ವೈದ್ಯರು!

ನೀಲಿ ಶರ್ಟ್‌ ಧರಿಸಿರುವ ಅನಿಲ್ ಅಂಬಾನಿ ಕಪ್ಪು ಬಣ್ಣದ ಗೇಟ್‌ನ ಹೊರಗೆ ನಿಂತು ಮತದಾನ ಮಾಡುವ ಸರದಿಗಾಗಿ ಕಾಯುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಈವೇಳೆ ಅವರು ತಮ್ಮ ಸನಿಹದದಲ್ಲಿದ್ದ ಇತರ ವ್ಯಕ್ತಿಗಳ ಜೊತೆ ಮಾತನಾಡುತ್ತಿರುವುದು ಸಹ ಕಂಡಿತು. ಮುಂಬೈ ಉತ್ತರ, ಮುಂಬೈ ವಾಯುವ್ಯ, ಮುಂಬೈ ಈಶಾನ್ಯ, ಮುಂಬೈ ನಾರ್ತ್ ಸೆಂಟ್ರಲ್, ಮುಂಬೈ ಸೌತ್ ಮತ್ತು ಮುಂಬೈ ಸೌತ್ ಸೆಂಟ್ರಲ್ ಕ್ಷೇತ್ರಗಳು ಐದನೇ ಹಂತದ ಲೋಕಸಭೆ ಚುನಾವಣೆಗೆ ಮತದಾನವಾಗಿದ್ದು, ಇದು ಮಹಾರಾಷ್ಟ್ರದಲ್ಲಿ ಅಂತಿಮ ಹಂತದ ಮತದಾನವಾಗಿದೆ. ಐದನೇ ಹಂತದ ಭಾಗವಾಗಿರುವ ಮಹಾರಾಷ್ಟ್ರದ ಇತರ ಕ್ಷೇತ್ರಗಳಲ್ಲಿ ಧುಲೆ, ದಿಂಡೋರಿ, ನಾಸಿಕ್, ಕಲ್ಯಾಣ್, ಪಾಲ್ಘರ್, ಭಿವಂಡಿ ಮತ್ತು ಥಾಣೆ ಸೇರಿವೆ.

ಕೈಗಳಲ್ಲಿ ಬಳೆ, ಸೀರೆ, ವಧುವಿನಂತೆ ಮೇಕಪ್‌ ಧರಿಸಿ ಇಂದೋರ್‌ನ 17 ವರ್ಷದ ಹುಡುಗ ಆತ್ಮಹತ್ಯೆ?

Scroll to load tweet…