Sex toy stuck in Man stomach: ದೆಹಲಿಯ ಸಮೀಪದ ಗಾಜಿಯಾಬಾದ್‌ ಆಸ್ಪತ್ರೆಯ ವೈದ್ಯರು ವ್ಯಕ್ತಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ಸೆಕ್ಸ್‌ ಟಾಯ್‌ ಅನ್ನು ಆತನ ಹೊಟ್ಟೆಯಿಂದ ಹೊರತೆಗೆಯಲು ಯಶಸ್ವಿಯಾಗಿದ್ದಾರೆ. 

ನವದೆಹಲಿ (ಮೇ.21): ರಾಷ್ಟ್ರ ರಾಜಧಾನಿ ದೆಹಲಿಗೆ ಸಮೀಪವಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವಿಲಕ್ಷಣ ಪ್ರಕರಣ ವರದಿಯಾಗಿದೆ. ಗಾಜಿಯಾಬಾದ್‌ನ ಕೌಶಂಬಿಯಲ್ಲಿರುವ ಯಶೋದಾ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಇತ್ತೀಚೆಗೆ ಗುಜರಾತ್‌ ಮೂಲಕ ವ್ಯಕ್ತಿಯೊಬ್ಬ ಅತಿಯಾದ ಹೊಟ್ಟೆ ನೋವಿನ ಕಾರಣಕ್ಕಾಗಿ ದಾಖಲಾಗಿದ್ದ. ಬಲೂನಿನಂತೆ ಊದಿಕೊಂಡಿದ್ದ ಆತನ ಹೊಟ್ಟೆಯಲ್ಲಿ ಏನಿದೆ ಅನ್ನೋದನ್ನು ತಿಳಿಯಲು ಎಕ್ಸ್‌ರೇಗೆ ಒಳಪಡಿಸಿದಾಗ ಸ್ವತಃ ವೈದ್ಯರೇ ಅದನ್ನು ನಂಬಲು ಸಾಧ್ಯವಾಗಿರಲಿಲ್ಲ. ಮೊದಲಿಗೆ ಆ ವಸ್ತುವನ್ನು ಕಂಡ ವೈದ್ಯರು ಅದು ಅಲ್ಲಿಗೆ ಹೇಗೆ ಬಂತು ಎಂದು ಕುತೂಹಲಕ್ಕೆ ಒಳಗಾಗಿದ್ದಾರೆ. ಇನ್ನೊಂದು ವಿಚಾರವೆಂದರೆ, ಈ ವಸ್ತು ಹೊಟ್ಟೆಯವರೆಗೂ ತಲುಪಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಎದುರಾಗಿತ್ತು. ಸಾಕಷ್ಟು ತನಿಖೆಯ ಬಳಿಕ ಸತ್ಯ ಗೊತ್ತಾದಾಗ ಸ್ವತಃ ವೈದ್ಯರಿಗೆ ನಗು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ವ್ಯಕ್ತಿಯ ಸಂಕಷ್ಟವನ್ನು ಅರಿತ ವೈದ್ಯರು ತಕ್ಷಣವೇ ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಎಕ್ಸ್ ರೇ ಮಾಡಿದ ಬಳಿಕ ವ್ಯಕ್ತಿಯ ಹೊಟ್ಟೆಯಲ್ಲಿ ರಬ್ಬರ್‌ನ ಸೆಕ್ಸ್‌ ಟಾಯ್‌ ಪತ್ತೆಯಾಗಿದೆ. ಸೆಕ್ಸ್‌ ಟಾಯ್‌ನಂಥ ವಸ್ತು ಮನುಷ್ಯನದ ದೇಹದ ಅತ್ಯಂತ ಒಳಭಾಗವಾದ ಹೊಟ್ಟೆಗೆ ಹೋಗಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಅವರಲ್ಲಿ ಮೂಡಿತ್ತು. ಬಳಿಕ ಒಂದು ಟೀಮ್‌ ವೈದ್ಯರನ್ನು ನಿಯೋಜನೆ ಮಾಡಿದ ಆಸ್ಪತ್ರೆ ಕೊಲೊನೋಸ್ಕೋಪಿ ಮೂಲಕ ಸೆಕ್ಸ್‌ ಟಾಯ್‌ಅನ್ನು ಹೊರತೆಗೆಯುವ ಪ್ರಯತ್ನ ಮಾಡಿತ್ತು. ಕೊನೆಗೆ ಇದೂ ಕೂಡ ಯಶಸ್ವಿಯಾಗದೇ ಇದ್ದಾಗ ಸರ್ಜರಿ ನಡೆಸಿ ಈ ವಸ್ತುವನ್ನು ಹೊರತೆಗೆಯಲಾಗಿದೆ. ಇಡೀ ಪ್ರಕರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವೈದ್ಯರು ವಿವರವಾದ ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದೆ 45 ವರ್ಷದ ವ್ಯಕ್ತಿಯೊಬ್ಬ ಗುಜರಾತ್‌ನಿಂದ ಬಂದು ಆಸ್ಪತ್ರೆಗೆ ದಾಖಲಾಗಿದ್ದ. ಈತನಿಗೆ ಅತಿಯಾದ ಹೊಟ್ಟೆನೋವು ಬಾಧಿಸಿತ್ತು. ಪ್ರತಿದಿನ ಆತನಿಗೆ ಮಲಮೂತ್ರ ವಿಸರ್ಜನೆ ಮಾಡೋದು ಕೂಡ ಸಾಧ್ಯವಾಗುತ್ತಿರಲಿಲ್ಲ. ದಿನದಿಂದ ದಿನಕ್ಕೆ ಆತನ ಹೊಟ್ಟೆ ಬಲೂನಿನಂತೆ ಊದಿಕೊಳ್ಳಲು ಆರಂಭವಾಗಿತ್ತು. ಬಳಿಕ ತಜ್ಞ ವೈದ್ಯರ ತಂಡ ಈತನ ಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದರು. ಎಕ್ಸ್‌ರೇ ಮಾಡಿದಾಗ, ಈತನ ಹೊಟ್ಟೆಯಲ್ಲಿ ಯಾವುದೋ ವಸ್ತು ಸಿಕ್ಕಿಹಾಕಿಕೊಂಡಿದೆ ಅನ್ನೋದು ಖಚಿತವಾಗಿತ್ತು. ಹಾಗೇನಾದರೂ ಈ ವಸ್ತುವನ್ನು ಆತ ತಿಂದಿದ್ದಾದರೂ ಏನು ಅನ್ನೋ ಪ್ರಶ್ನೆ ಎದುರಾಗಿತ್ತು. ಯಾಕೆಂದರೆ, ಕರಗಿ ಹೋಗುವಂಥ ವಸ್ತುವಾಗಿದ್ದಲ್ಲಿ ಅದು ಹೊಟ್ಟೆಯೊಳಗಿನ ಆಸಿಡ್‌ಗೆ ಕರಗಿ ಹೋಗಬೇಕಿತ್ತು. ಕೊನೆಗೆ ವೈದ್ಯರು, ರೋಗಿಯನ್ನೇ ಈ ಕುರಿತಾಗಿ ವಿಚಾರಣೆ ಮಾಡಿದ್ದಾರೆ. ಕಾಮತೃಷೆಗಾಗಿ ಗುದದ್ವಾರದಲ್ಲಿ ಸೆಕ್ಸ್‌ ಟಾಯ್‌ ಇರಿಸಿಕೊಳ್ಳುತ್ತಿದ್ದೆ. ಹೀಗಿರುವಾಗ ಅದು ಒಳಗೆ ಸೇರಿಕೊಂಡುಬಿಟ್ಟಿದೆ ಎಂದು ವೈದ್ಯರಿಗೆ ತಿಳಿಸಿದ್ದರು.

ಕೈಗಳಲ್ಲಿ ಬಳೆ, ಸೀರೆ, ವಧುವಿನಂತೆ ಮೇಕಪ್‌ ಧರಿಸಿ ಇಂದೋರ್‌ನ 17 ವರ್ಷದ ಹುಡುಗ ಆತ್ಮಹತ್ಯೆ?

ನಿಜವಾದ ವಿಚಾರ ತಿಳಿದ ಬಳಿಕ ವೈದ್ಯರು ಕೊಲೊನೋಸ್ಕೋಪಿ ಮೂಲಕ ಸೆಕ್ಸ್‌ ಟಾಯ್‌ಅನ್ನು ಹೊರತೆಗೆಯುವ ಪ್ರಯತ್ನ ಮಾಡಿದದ್ದರು. ಆದರೆ, ರಬ್ಬರ್‌ನಂಥ ವಸ್ತುವಾಗಿದ್ದ ಅದು ಬಹಳ ಸ್ಮೂತ್‌ ಆಗಿತ್ತು ಹಾಗೂ ಜಾರುತ್ತಿತ್ತು. ಬಳಿಕ ತಜ್ಞ ವೈದ್ಯರ ತಂಡ ಸಮಾಲೋಚನೆ ನಡೆಸಿ ಇದನ್ನು ಸರ್ಜರಿ ಮೂಲಕ ತೆಗೆಯುವ ನಿರ್ಧಾರ ಮಾಡಿದ್ದರು. ಇದಾದ ನಂತರ ಆಸ್ಪತ್ರೆಯ ತಜ್ಞ ಶಸ್ತ್ರಚಿಕಿತ್ಸಕ ವಿಜಯ್ ಪಾಂಡೆ ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಕುನಾಲ್ ದಾಸ್ ಅವರು ಸುದೀರ್ಘ ವೈದ್ಯಕೀಯ ಪ್ರಕ್ರಿಯೆಯ ನಂತರ ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ ಹೊಟ್ಟೆಯಲ್ಲಿ ಸಿಲುಕಿಕೊಂಡಿದ್ದ ಸೆಕ್ಸ್ ಟಾಯ್ ಅನ್ನು ಹೊರತೆಗೆದು ಆತನ ಜೀವ ಉಳಿಸಿದ್ದಾರೆ.

ಪಾನ್‌ಕಾರ್ಡ್‌ ಕುರಿತು ಹುಷಾರಾಗಿರಿ..ಗುಜರಾತ್‌ನ ಚಾಯ್‌ವಾಲಾಗೆ ಬಂತು 49 ಕೋಟಿಯ ಐಟಿ ನೋಟಿಸ್‌!

ಸರ್ಜರಿ ನಡೆಸಿದ ವೈದ್ಯರ ಪ್ರಕಾರ ಇಂಥ ಕೇಸ್‌ಗಳು ಆಗುವುದು ಬಹಳ ಅಪರೂಪ. ಡ್ರಗ್ಸ್‌ಗಳನ್ನು ಕಳ್ಳಸಾಗಣೆ ಮಾಡುವ ವೇಳೆ ಕ್ರಿಮಿನಲ್‌ಗಳು ಇಂಥ ಯತ್ನ ಮಾಡುತ್ತಾರೆ. ಅದರ ಹೊರತಾಗಿ ಸಾಮಾನ್ಯ ಜೀವನದಲ್ಲಿ ಇಂಥ ಕೇಸ್‌ಗಳು ಬಹಳ ಅಪರೂಪ ಎಂದು ಹೇಳಿದ್ದಾರೆ. ಯಶಸ್ವಿ ಸರ್ಜರಿಯ ಬಳಿಕ ವ್ಯಕ್ತಿಯನ್ನು ಕೆಲದಿನಗಳ ಕಾಲ ಆಸ್ಪತ್ರೆಯಲ್ಲಿ ಅಬ್ಸರ್ವೇಷನ್‌ನಲ್ಲಿ ಇರಿಸಲಾಗಿತ್ತು. ಇತ್ತೀಚೆಗೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ ಎಂದು ಡಾ. ಕುನಾಲ್‌ ದಾಸ್‌ ಹೇಳಿದ್ದಾರೆ.