ಒಂದು ಕೋಣೆಯೊಂದರಲ್ಲಿ ವಾಸಿಸುತ್ತಿದ್ದವ ಕೋಟ್ಯಾಧಿಪತಿ ಆದ ಯಶೋಗಾಥೆ ಇದು!

ಶ್ರೀಮಂತರಾಗ್ಬೇಕು ಅಂತಾ ಎಲ್ಲರೂ ಕನಸು ಕಾಣ್ತಾರೆ. ಆದ್ರೆ ಕನಸು ನನಸು ಮಾಡಿಕೊಳ್ಳಲು ಏನು ಮಾಡ್ಬೇಕು ಎಂಬ ಜ್ಞಾನ ಇರೋದಿಲ್ಲ. ಕೆಲ ಶ್ರೀಮಂತ ವ್ಯಕ್ತಿಗಳು ಈಗಿನ ಉತ್ಸಾಹಿ ಯುವಕರಿಗೆ ಟಿಪ್ಸ್ ನೀಡ್ತಿರುತ್ತಾರೆ. ಅದನ್ನು ಪಾಲಿಸಿದ್ರೆ ನೀವೂ ಕೋಟ್ಯಾಧಿಪತಿಯಾಗೋದ್ರಲ್ಲಿ ಸಂಶಯವಿಲ್ಲ. 
 

Billionaire Man Shares Secrets To Getting Rich roo

ಚಿಟಿಕೆ ಹೊಡೆಯೋದ್ರಲ್ಲಿ ಯಾವುದೇ ವ್ಯಕ್ತಿ ಶ್ರೀಮಂತನಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿ ಹಿಂದೆ ಕಷ್ಟ, ನೋವು, ಹೋರಾಟವಿರುತ್ತದೆ. ಸಾಕಷ್ಟು ಪರಿಶ್ರಮದ ನಂತ್ರ ಆತ ಆ ಹಂತವನ್ನು ತಲುಪಿರುತ್ತಾನೆ. ಅನೇಕ ಯಶಸ್ವಿ ವ್ಯಕ್ತಿಗಳು ತಾನು ನಡೆದು ಬಂದ ಕಥೆಯನ್ನು ಜನರ ಮುಂದಿಡುತ್ತಿರುತ್ತಾರೆ. ತಮ್ಮ ಯಶಸ್ಸಿಗೆ ತಾವು ಅನುಸರಿಸಿದ ಮಾರ್ಗವೇನು ಎಂಬುದನ್ನು ಹೇಳುವ ಮೂಲಕ ಈಗಿನ ಯುವಕರಿಗೆ ನೆರವಾಗುತ್ತಾರೆ. ಇದ್ರಲ್ಲಿ 86 ವರ್ಷದ ಬಿಲ್ ಕಮ್ಮಿಂಗ್ಸ್ ಕೂಡ ಸೇರಿದ್ದಾರೆ. ಬಿಲ್ ಕಮ್ಮಿಂಗ್ಸ್ ಅಮೆರಿಕಾದಲ್ಲಿ ವಾಸವಾಗಿರುವ ಕೋಟ್ಯಾಧಿಪತಿ. ಅವರು ತಮ್ಮ ಯಶಸ್ಸಿನ ಹಿಂದಿರುವ ಸಿಕ್ರೆಟ್ ತೆರೆದಿಟ್ಟಿದ್ದಾರೆ. ಅವರು 50 ವರ್ಷಗಳ ಹಿಂದೆ ತಮ್ಮ ಬಿಲಿಯನ್ ಡಾಲರ್ ಕಂಪನಿಯನ್ನು ಪ್ರಾರಂಭಿಸಿದ್ದರು. ಈಗ ಕಮ್ಮಿಂಗ್ಸ್, ಬೋಸ್ಟನ್‌ ರಿಯಲ್ ಎಸ್ಟೇಟ್ ರಾಜ.

ತಮ್ಮ 86ನೇ ವಯಸ್ಸಿನಲ್ಲೂ ಬಿಲ್ ಕಮ್ಮಿಂಗ್ಸ್ (Bill Cummings) ಸುಮ್ಮನೆ ಕುಳಿತಿಲ್ಲ. ತಮ್ಮ ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತಲೇ ಇರುವ ಬಿಲ್ ಕಮ್ಮಿಂಗ್ಸ್, ಪುಸ್ತಕ (Book) ವೊಂದನ್ನು ಬರೆದಿದ್ದಾರೆ. ತಮ್ಮ ಯಶಸ್ಸಿಗೆ ಕಾರಣವೇನು ಎಂಬುದು ಈಗಿನ ಯುವಕರಿಗೆ ತಿಳಿಯಲಿ ಹಾಗೂ ಅವರೂ ಅದನ್ನು ಪಾಲಿಸಲಿ ಎನ್ನುವ ಉದ್ದೇಶದಿಂದ ಬಿಲ್ ಕಮ್ಮಿಂಗ್ಸ್ ಪುಸ್ತಕ ಬರೆಯುತ್ತಿದ್ದಾರೆ. 

ಹೆಚ್ಚಿದ ಯುಪಿಐ ಬಳಕೆಯಿಂದ ತಗ್ಗಿದ ಡೆಬಿಟ್ ಕಾರ್ಡ್ ವಹಿವಾಟು; ಆದ್ರೆ ಏರಿಕೆ ಕಂಡ ಕ್ರೆಡಿಟ್ ಕಾರ್ಡ್ ಬಳಕೆ

ಹೇಗಿತ್ತು ಬಿಲ್ ಕಮ್ಮಿಂಗ್ಸ್ ಜೀವನ? : ಬಿಲ್ ಕಮ್ಮಿಂಗ್ಸ್ ಹುಟ್ಟುವಾಗ್ಲೇ ಕೋಟ್ಯಾಧಿಪತಿಯಲ್ಲ. ಅವರ ಜೀವನ ಇಷ್ಟು ಐಷಾರಾಮಿಯಾಗೂ ಇರಲಿಲ್ಲ. ಬಿಲ್ ತಮ್ಮ ಸಹೋದರಿ, ತಂದೆ – ತಾಯಿ ಜೊತೆ ಒಂದು ಕೋಣೆಯುಳ್ಳ ಮನೆಯಲ್ಲಿ ವಾಸವಾಗಿದ್ದರು. ದಶಕಗಳ ಪ್ರಯತ್ನದ ನಂತ್ರ ಅವರು ವ್ಯವಹಾರದಲ್ಲಿ ಯಶಸ್ಸು ಕಂಡರು. ತಮ್ಮ ಕಂಪನಿ ಈಗ ಬಿಲಿಯನ್ ಮಟ್ಟದಲ್ಲಿ ವ್ಯವಹಾರ ನಡೆಸಲು, ತನ್ನ ಯೌವನದಲ್ಲಿ ಸಿಕ್ಕ ಅನುಭವವೇ ಕಾರಣ ಎನ್ನುತ್ತಾರೆ ಬಿಲ್ ಕಮ್ಮಿಂಗ್ಸ್. ಆರಂಭದಲ್ಲಿ ಬಿಲ್ ಕಮ್ಮಿಂಗ್ಸ್ ಸಣ್ಣ ಪುಟ್ಟ ಕೆಲಸಗಳನ್ನು ಮಾಡ್ತಿದ್ದರು. ಈ ಸಂದರ್ಭದಲ್ಲಿಯೇ ಶ್ರೀಮಂತರಾಗುವ ಕನಸು ಹುಟ್ಟಿಕೊಂಡಿತು. 

Watch: ಮೂರು ಕಂಪನಿಗಳ 11 ಕೋಟಿ ಮೌಲ್ಯದ ಷೇರು ಹೊಂದಿದ್ದರೂ, ಸರಳವಾಗಿ ಬದುಕುವ ಕರ್ನಾಟಕದ ಹಿರಿಯ ಜೀವ!

ಹಣ ವ್ಯರ್ಥ ಮಾಡಲ್ಲ ಬಿಲ್ ಕಮ್ಮಿಂಗ್ಸ್ : ಬಿಲ್ ಕಮ್ಮಿಂಗ್ಸ್ ಬಳಿ ಈಗ ಹಣಕ್ಕೆ ಕೊರತೆಯಿಲ್ಲ. ಆದ್ರೂ ಅವರು ಮತ್ತು ಅವರ ಪತ್ನಿ ಐಷಾರಾಮಿ ಜೀವನ ನಡೆಸೋದಿಲ್ಲ. ಖರ್ಚನ್ನು ಕಡಿಮೆ ಮಾಡುವ ಬಗ್ಗೆ ಇಬ್ಬರು ಈಗ್ಲೂ ಆಲೋಚನೆ ಮಾಡ್ತಾರೆ. ಬಾಲ್ಯದಲ್ಲಿಯೇ ಕಡಿಮೆ ಖರ್ಚು ಮಾಡುವಂತೆ ಪಾಲಕರು ಪಾಠ ಮಾಡಿದ್ದರು. ಅದನ್ನು ಬಿಲ್ ಈಗ್ಲೂ ಪಾಲಿಸಿಕೊಂಡು ಬರ್ತಿದ್ದಾರೆ. ನೀವು ಯಶಸ್ವಿಯಾಗ್ಬೇಕೆಂದ್ರೆ ಪ್ರಯತ್ನಪಡಬೇಕು. ಕಷ್ಟಪಟ್ಟು ಕೆಲಸ ಮಾಡಲು ಹಿಂಜರಿಯಬಾರದು ಎನ್ನುತ್ತಾರೆ.  ಕಠಿಣ ಪರಿಶ್ರಮ, ಸಾಧಿಸಬೇಕೆಂಬ ಬಯಕೆ, ದೃಢತೆ ಮತ್ತು ಸಮರ್ಪಣೆಯಷ್ಟು ಮುಖ್ಯವಾದುದು ಯಾವುದೂ ಇಲ್ಲ ಎಂದು ಬಿಲ್ ಕಮ್ಮಿಂಗ್ಸ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. 

ಇವೆಲ್ಲವನ್ನು ನೀವು ಮನೆಯಲ್ಲಿ ಕುಳಿತು ಕೆಲಸ ಮಾಡುವಾಗ ತೋರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಬಿಲ್ ಕಮ್ಮಿಂಗ್ಸ್. ಅವರ ಪ್ರಕಾರ ಕಚೇರಿಯಲ್ಲಿ ಕೆಲಸ ಮಾಡುವುದು ಬಹಳ ಮುಖ್ಯ. 
ಒಂದು ವ್ಯವಹಾರವನ್ನು ನಾಯಕನಾಗಿ ಮುನ್ನಡೆಸಬೇಕೆಂದ್ರೆ ಸಮಸ್ಯೆಯನ್ನು ಬಗೆಹರಿಸುವ ಕಲೆ ಗೊತ್ತಿರಬೇಕು. ದಾರಿಯಲ್ಲಿ ಅನೇಕ ಸಮಸ್ಯೆಗಳು ನಿಮ್ಮನ್ನು ಎದುರು ನೋಡುತ್ತವೆ ಎನ್ನುತ್ತಾರೆ ಬಿಲ್. ನೀವು ಸದಾ ಸಕ್ರಿಯವಾಗಿರುವುದು ಕೂಡ ಮುಖ್ಯ ಎನ್ನುತ್ತಾರೆ ಬಿಲ್ ಕಮ್ಮಿಂಗ್ಸ್. 

ನಮ್ಮ ಹಾಗೂ ಸಹೋದ್ಯೋಗಿಗಳ  ಸಮಸ್ಯೆಗಳನ್ನು ಗುರುತಿಸಲು   ತರಬೇತಿ ಪಡೆಯಬೇಕು, ಆಗ್ಲೇ ನಮಗೆ ಗುಡ್ ಲಕ್ ಸಿಗೋದು ಎನ್ನುತ್ತಾರೆ ಬಿಲ್. ಕಂಪನಿಗೆ ಉದ್ಯೋಗಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಟೀಮ್ ಪ್ಲೇಯರ್ ವ್ಯಕ್ತಿತ್ವ ಹೊಂದಿರುವ ಉದ್ಯೋಗಿಗಳನ್ನು ಬಿಲ್ ನೇಮಿಸಿಕೊಳ್ತಾರೆ. ಕಂಪನಿಯಲ್ಲಿ ಉಳಿದ ಉದ್ಯೋಗಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವುದು ಮುಖ್ಯ ಎನ್ನುತ್ತಾರೆ ಬಿಲ್.  
 

Latest Videos
Follow Us:
Download App:
  • android
  • ios