ಬಾಸ್ ಹೀಗೂ ಇರ್ತಾರಾ?10 ಸಾವಿರ ಉದ್ಯೋಗಿಗಳಿಗೆ ಡಿಸ್ನಿಲ್ಯಾಂಡ್ ಪ್ರವಾಸ ಆಯೋಜಿಸಿದ ಸಿಟಾಡೆಲ್ ಸಿಇಒ!

ಸಿಟಾಡೆಲ್ ಸಿಇಒ ಕೆನ್ ಗ್ರಿಫಿನ್ ತನ್ನ ಸಂಸ್ಥೆಗೆ 20 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ 10, 000 ಉದ್ಯೋಗಿಗಳು ಹಾಗೂ ಅವರ ಕುಟುಂಬಕ್ಕೆ ಡಿಸ್ನಿಲ್ಯಾಂಡ್ ಗೆ ಪ್ರವಾಸ ಆಯೋಜಿಸಿದ್ದರು. ಅದರ ಸಂಪೂರ್ಣ ವೆಚ್ಚವನ್ನು ಕೂಡ ಭರಿಸುವ ಮೂಲಕ ಮಾದರಿ ಬಾಸ್ ಅನ್ನಿಸಿಕೊಂಡಿದ್ದಾರೆ. 

Billionaire CEO arranges for 3 day Disneyland trip for 10000 staff and their families

ನ್ಯೂಯಾರ್ಕ್ (ಡಿ.9): ನೀವು ಕಷ್ಟಪಟ್ಟು ದುಡಿಯುವ ಉದ್ಯೋಗಿಯಾಗಿದ್ರೆ ನೀವು ಕೆಲಸ ಮಾಡುತ್ತಿರುವ ಸಂಸ್ಥೆ ನಿಮಗೆ ಹೆಚ್ಚೆಂದ್ರೆ ಒಂದು 'ಕಾಫಿ ಮಗ್' ಜೊತೆಗೆ 'ವರ್ಷದ ಉದ್ಯೋಗಿ' ಎಂಬ ಪ್ರಮಾಣಪತ್ರ ನೀಡಿ ಗೌರವಿಸಬಹುದು. ಇನ್ನು ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಸ್ಥಾಪನೆಯಾಗಿ 10, 25 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಾಗಿದ್ರೆ ಆ ಸಂದರ್ಭದಲ್ಲಿ ಸವಿನೆನಪಿಗೆ ಒಂದು ಪುಟ್ಟ ಕಾಣಿಕೆಯನ್ನು ನೀಡಬಹುದು ಅಷ್ಟೆ. ಆದರೆ, ಇಲ್ಲೊಬ್ಬ ಬಾಸ್ ತನ್ನ ಸಂಸ್ಥೆ ಸ್ಥಾಪನೆಯಾಗಿ 20 ವರ್ಷಗಳಾದ ಖುಷಿಯಲ್ಲಿ10, 000 ಉದ್ಯೋಗಿಗಳು ಹಾಗೂ ಅವರ ಕುಟುಂಬಕ್ಕೆ ಡಿಸ್ನಿಲ್ಯಾಂಡ್ ಗೆ ಭೇಟಿ ನೀಡುವ ಅವಕಾಶದ ಜೊತೆಗೆ ಅದರ ಸಂಪೂರ್ಣ ವೆಚ್ಚವನ್ನು ಕೂಡ ಭರಿಸಿದ್ದಾರೆ. ಹೌದು, ಸಿಟಾಡೆಲ್ ಸಿಇಒ ಕೆನ್ ಗ್ರಿಫಿನ್  ತನ್ನ ಉದ್ಯೋಗಿಗಳಿಗೆ ಇಂಥದೊಂದು ವಿಭಿನ್ನ ಗಿಫ್ಟ್ ನೀಡುವ ಮೂಲಕ ಮಾದರಿ ಬಾಸ್ ಅನ್ನಿಸಿಕೊಂಡಿದ್ದಾರೆ. ಸಿಟಾಡೆಲ್ ಸಿಇಒ ಕೆನ್ ಗ್ರಿಫಿನ್ ತನ್ನ ಸಿಟಾಡೆಲ್ ಸೆಕ್ಯೂರಿಟೀಸ್ ಪ್ರಾರಂಭವಾಗ 20 ವರ್ಷಗಳಾದ ಹಾಗೂ ಫಡಿಂಗ್ ಸಂಸ್ಥೆಗೆ 32 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ತನ್ನ ಉದ್ಯೋಗಿಗಳಿಗೆ ಮೂರು ದಿನಗಳ ಪಾರ್ಟಿ ಆಯೋಜಿಸಿದ್ದರು. 

ಯಾವುದೇ ಸಂಸ್ಥೆಯ ಏಳ್ಗೆಯಲ್ಲಿ ಉದ್ಯೋಗಿಗಳ ಪಾತ್ರ ಮಹತ್ವದಾಗಿರುತ್ತದೆ. ಇದನ್ನು ಮನಗಂಡಿರುವ ಕೆನ್ ಗ್ರಿಫಿನ್ ಸಂಸ್ಥೆಯ ಪ್ರಗತಿಯಲ್ಲಿ ಶ್ರಮಿಸಿದ ಉದ್ಯೋಗಿಗಳಿಗೆ ಪ್ರತಿಫಲ ನೀಡಬೇಕು ಎಂಬ ಉದ್ದೇಶದಿಂದ ಉದ್ಯೋಗಿಗಳು ಹಾಗೂ ಅವರ ಕುಟುಂಬಕ್ಕೆ ಡಿಸ್ನಿಲ್ಯಾಂಡ್ ಗೆ ಭೇಟಿ ನೀಡುವ ಹಾಗೂ ಕೋಲ್ಡ್ ಪ್ಲೇನಲ್ಲಿ ಆಟಗಳನ್ನು ಆಡುವ ವ್ಯವಸ್ಥೆ ಕಲ್ಪಿಸಿದ್ದರು. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಗ್ರಿಫಿನ್ ಭರಿಸಿದ್ದಾರೆ. ಪ್ಯಾರಿಸ್, ನ್ಯೂಯಾರ್ಕ್, ಹಾಸ್ಟಾನ್ ಮುಂತಾದ ನಗರಗಳಲ್ಲಿ ಹೋಟೆಲ್ (Hotel), ಪಾರ್ಕಿಂಗ್ (Parking), ಊಟ (Meals) , ವಿಮಾನ ಟಿಕೆಟ್ (Flight ticket) ಸೇರಿದಂತೆ ಪ್ರತಿ ವೆಚ್ಚವನ್ನು ಕಂಪನಿಯಿಂದಲೇ ಭರಿಸಲಾಗಿದೆ. ಈ ಬಗ್ಗೆ ಸಿಟಾಡೆಲ್ (Citadel) ವಕ್ತಾರ ಝಿಯಾ ಅಹ್ಮದ್ ಮಾಹಿತಿ ನೀಡಿದ್ದಾರೆ.

ಡಿಜಿಟಲ್ ಪಾವತಿಯಲ್ಲಿ ಬೆಂಗಳೂರು ದೇಶದಲ್ಲೇ ನಂ.1

'ನಾವು ಅತ್ಯುತ್ತಮವಾದ ತಂಡ ಕಟ್ಟಿದ್ದೇವೆ. ಇದು ನಮ್ಮ ಸಂಸ್ಥೆಯ ಇತಿಹಾಸದಲ್ಲಿ ಮಾತ್ರವಲ್ಲ, ಬದಲಿಗೆ ಹಣಕಾಸು ವಲಯದ ಇತಿಹಾಸದಲ್ಲೇ ಮೊದಲು. ಮುಂದೆ ಉತ್ತಮವಾದ ಭವಿಷ್ಯ ನಮಗೆ ಕಾದಿದೆ. ಮುಂದಿನ ಒಳ್ಳೆಯ ದಿನಗಳ ಬಗ್ಗೆ ನಿರೀಕ್ಷೆ ಹೊಂದಿದ್ದೇನೆ' ಎಂದು ಗ್ರಿಫಿನ್ ಹೇಳಿದ್ದಾರೆ.

ಕೆನ್ ಗ್ರಿಫಿನ್ (Ken Griffin) ಫಂಡ್ ಉದ್ಯಮದಲ್ಲಿ 31.7 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿದ್ದಾರೆ. ಫೋರ್ಬ್ಸ್ ಪಟ್ಟಿ (Forbes list) ಪ್ರಕಾರ ಇವರು ವಿಶ್ವದ 40ನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.  ಸಿಟಾಡೆಲ್ ಜಾಗತಿಕ ಸ್ಥಿರ ಆದಾಯ ನಿಧಿ ಶೇ.28.1ರಷ್ಟು ಏರಿಕೆ ಕಂಡಿದೆ. ಇನ್ನು ಸಿಟಾಡೆಲ್ ಟ್ರೇಡಿಂಗ್ ಶೇ.22.4ರಷ್ಟು ಹೆಚ್ಚಳ ದಾಖಲಿಸಿದೆ. ಹಾಗೆಯೇ ಸಿಟಾಡೆಲ್ ಈಕ್ವಿಟಿ ಫಂಡ್ ಶೇ.17.8ರಷ್ಟು ಹೆಚ್ಚಳ ದಾಖಲಿಸಿದೆ. 

ದುಡಿದ ಹಣವನ್ನು ಸಮರ್ಪಕವಾಗಿ ಬಳಸುತ್ತಿದ್ದೀರಾ? ತಿಳಿಯೋದು ಹೇಗೆ? ಇಲ್ಲಿದೆ ಮಾಹಿತಿ

ಪ್ರಸ್ತುತ ವಿಶ್ವದಾದ್ಯಂತ ಟೆಕ್ ಕಂಪನಿಗಳು (Tech companies) ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಹೆಚ್ಚುತ್ತಿರುವ ಹಣದುಬ್ಬರ (Inflation) ಹಾಗೂ ಬಡ್ಡಿದರ (Interest rate) ಬಹುರಾಷ್ಟ್ರೀಯ ಕಂಪನಿಗಳ ಮೇಲಿನ ಹೊರೆ ಹೆಚ್ಚಿಸಿವೆ. ಈ ಹಿನ್ನೆಲೆಯಲ್ಲಿ ಮೆಟಾ (Meta), ಟ್ವಿಟ್ಟರ್ (Twitter), ಅಮೆಜಾನ್ (Amazon) ಸೇರಿದಂತೆ ಅನೇಕ ಪ್ರಸಿದ್ಧ ಕಂಪನಿಗಳು ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿವೆ. ಈ ಬೆಳವಣಿಗೆ ಇನ್ನೂ ಕೆಲವು ಕಾಲ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಜಗತ್ತಿನಾದ್ಯಂತ ಇಂಥ ಸ್ಥಿತಿಯಿರೋವಾಗ ಸಿಟಾಡೆಲ್ ಸಿಇಒ ತನ್ನ ಉದ್ಯೋಗಿಗಳಿಗೆ ಇಂಥದೊಂದು ಉಡುಗೊರೆ ನೀಡಿರೋದು ನಿಜಕ್ಕೂ ವಿಶೇಷ. 

Latest Videos
Follow Us:
Download App:
  • android
  • ios