ಓರ್ವ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬಳು ಓದುತ್ತಿರುವಾಗಲೇ ಟೀ ಸ್ಟಾಲ್‌ವೊಂದನ್ನು ತೆರೆದಿದ್ದು, ಆಕೆ ಚಹಾ ಮಾರುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪಾನಿಪುರಿ ಶಾಪ್ ತೆರೆದು ಬಿಡುವಿನ ಸಮಯದಲ್ಲಿ ಭರ್ಜರಿ ವ್ಯಾಪಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಮಧ್ಯೆ ಈಗ ಓರ್ವ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬಳು ಓದುತ್ತಿರುವಾಗಲೇ ಟೀ ಸ್ಟಾಲ್‌ವೊಂದನ್ನು ತೆರೆದಿದ್ದು, ಆಕೆ ಚಹಾ ಮಾರುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈಕೆಯ ಹೆಸರು ವರ್ತಿಕಾ ಸಿಂಗ್ (Vartika Singh), ಇಂಜಿನಿಯರಿಂಗ್ ಮಾಡಲು ಬಿಹಾರದಿಂದ (Bihar) ಫರಿದಾಬಾದ್‌ಗೆ (Faridabad) ಆಗಮಿಸಿದ ವರ್ತಿಕಾ, ಪ್ರಸ್ತುತ ಫರಿದಾಬಾದ್‌ನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದು, ಜೊತೆ ಜೊತೆಗೆ ಚಹಾ ಬ್ಯುಸಿನೆಸೊಂದನ್ನು ಶುರು ಮಾಡಿದ್ದಾಳೆ. ಈಕೆಗೆ ಮೊದಲಿನಿಂದಲೂ ಸಣ್ಣದೊಂದು ವ್ಯವಹಾರವನ್ನು ಶುರು ಮಾಡಿ ಬ್ಯುಸಿನೆಸ್ ವುಮನ್ ಆಗಬೇಕು ಎಂಬುದು ವರ್ತಿಕಾಳ ಬಹುದಿನದ ಕನಸು ಅದರಂತೆ ಓದುತ್ತಿರುವಾಗಲೇ ಈಕೆ ಟೀ ಸ್ಟಾಲೊಂದನ್ನು ಸ್ಥಾಪಿಸಿದ್ದಾಳೆ.
ಕೆಲಸಕ್ಕಾಗಿ ನಾಲ್ಕು ವರ್ಷ ಓದುತ್ತಾ ಕಾಯುವ ಬದಲು ಓದಿನ ಜೊತೆ ಜೊತೆಗೆ ವಿರಾಮದ ಸಮಯದಲ್ಲಿ ಹೊಸ ಕೆಲಸ ಶುರು ಮಾಡಿದ್ದಾಳೆ ವರ್ತಿಕಾ. ತಾನು ಶುರು ಮಾಡಿರುವ ಹೊಸ ಟೀ ಸ್ಟಾಲ್‌ನಲ್ಲಿ ಚಹಾ ಮಾಡುತ್ತಾ ಗ್ರಾಹಕರೊಂದಿಗೆ ವ್ಯವಹರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಿಟೆಕ್ ಛಾಯ್‌ವಾಲಿ ಎಂಬ ಬೋರ್ಡ್ ಹಾಕಿಕೊಂಡು ಈಕೆ ಫರಿದಾಬಾದ್‌ನ ನಂಬರ್ 4 ಗ್ರೀನ್ ಫೀಲ್ಡ್ ಪ್ರದೇಶದಲ್ಲಿ ಚಹಾ ಸ್ಟಾಲ್ ಆರಂಭಿಸಿದ್ದಾರೆ.
ವಿಡಿಯೋದಲ್ಲಿ ಈಕೆ ಹೇಳಿರುವಂತೆ ಈಕೆ 20 ರೂಪಾಯಿಗೆ ಮಸಾಲ ಟೀ, ಲೆಮನ್ ಟಿ (lemon tea) ಹಾಗೂ 10 ರೂಪಾಯಿಗೆ ಸಾಮಾನ್ಯ ಟೀ ನೀಡುತ್ತಾಳಂತೆ. ಇಲ್ಲಿಗೆ ಬಂದು ಟೀ ಕುಡಿದು ಹೇಗಿದೆ ಎಂದು ಹೇಳುವ ಮೂಲಕ ಸಹಾಯ ಮಾಡುವಂತೆ ಆಕೆ ವಿಡಿಯೋದಲ್ಲಿ ಮನವಿ ಮಾಡಿದ್ದಾಳೆ. ಈ ನನ್ನ ಟೀ ಸ್ಟಾಲ್ ಯಶಸ್ವಿಯಾಗಬೇಕು. ಭಾರತದಾದ್ಯಂತ ಈ ಟೀಸ್ಟಾಲ್ ಶುರು ಆಗಬೇಕು. ಈ ಮೂಲಕ ನಾನು ಸಾಕಷ್ಟು ಜನರಿಗೆ ಉದ್ಯೋಗ ನೀಡಬಹುದು. ಒಂದೇ ಒಂದು ಸಲ ಈ ಸ್ಟಾಲ್ ಬಳಿ ಬಂದು ಟೀ ರುಚಿ ನೋಡಿ ಚೆನ್ನಾಗಿಲ್ಲವೆನಿಸಿದರೆ ನಂತರ ಬರಬೇಡಿ ಒಮ್ಮೆ ಬಂದು ಟೀ ರುಚಿ ನೋಡಿ ಎಂದು ಆಕೆ ವೀಕ್ಷಕರಲ್ಲಿ ಮನವಿ ಮಾಡಿದ್ದಾಳೆ. ಈಕೆಯ ವಿಡಿಯೋವನ್ನು 51 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 4 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯೇ ಆದರ್ಶ: ಮೊಬೈಲ್ ಟೀ ಡಿಸ್ಪೆನ್ಸರ್ ಆವಿಷ್ಕರಿಸಿದ ಹುಬ್ಬಳ್ಳಿಯ ಇಂಜಿನಿಯರ್
ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಈಕೆ ಅನೇಕರಿಗೆ ಮಾದರಿ, ವ್ಯವಹಾರ ಆರಂಭಿಸುವವರಿಗೆ ಈಕೆ ಸ್ಫೂರ್ತಿಯಾಗಿದ್ದಾಳೆ. ಈ ಹುಡುಗಿಯ ಮೇಲೆ ಗೌರವ ಹೆಚ್ಚಾಗಿದೆ. ಕೆಲಸ ಸಣ್ಣದೇ ಇರಲಿ ದೊಡ್ಡದೇ ಇರಲಿ ಕೆಲಸ ಕೆಲಸವೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇಂದು ಉನ್ನತ ಶಿಕ್ಷಣ ಪಡೆದು ಕೆಲ್ಸ ಇಲ್ಲ ಅಂತ ಅಲೆದಾಡ್ತಿರುವ ಸಾವಿರಾರು ಜನರನ್ನು ನಾವು ನೋಡಬಹುದು. ಹಲವು ಕಂಪನಿಗಳಿಗೆ ಸಂದರ್ಶನಕ್ಕೆ ಅಲೆದು ಕೆಲ್ಸ ಇಲ್ಲ ಅಂತ ಬೇಸರಗೊಳ್ಳುವ ಬದಲು ತಮ್ಮದೇ ಒಂದು ಸಣ್ಣದಾದ ವ್ಯವಹಾರ ಆರಂಭಿಸಬಹುದು ಅದು ಯಶಸ್ಸು ನೀಡಿದರೆ ದೊಡ್ಡದಾಗಿ ಹೊಸ ಬ್ಯುಸಿನೆಸ್ ಶುರು ಮಾಡಬಹುದು ಅನ್ನೋರಿಗೆ ಈ ಕಾಲೇಜು ವಿದ್ಯಾರ್ಥಿನಿ ಸ್ಪೂರ್ತಿಯಾಗಿದ್ದಾಳೆ ಎಂದರೆ ತಪ್ಪಾಗಲಾರದು. ಅಲ್ಲದೇ ಇತ್ತೀಚೆಗೆ ಉನ್ನತ ಶಿಕ್ಷಣ ಪಡೆದವರು ದೊಡ್ಡ ದೊಡ್ಡ ಉದ್ಯೋಗದಲ್ಲಿರುವವರು ಕೂಡ ತಮ್ಮ ಕೆಲಸವನ್ನು ತೊರೆದು ಚಹಾ ಸೇರಿದಂತೆ ಹಲವು ಸಣ್ಣಪುಟ್ಟ ಉದ್ಯಮ ಆರಂಭಿಸಿ ಸಾಕಷ್ಟು ಯಶಸ್ವಿ ಕಂಡ ಸಾಕಷ್ಟು ಉದಾಹರಣೆಗಳಿವೆ.