ನವದೆಹಲಿ (ಫೆ. 18) ಸಿಟಿ ಬ್ಯಾಂಕ್ ಅತಿದೊಡ್ಡ ಬ್ಯಾಂಕಿಂಗ್ ಪ್ರಮಾದ ಒಂದನ್ನು ಮಾಡಿಕೊಂಡು ಪರಿತಪಿಸುತ್ತಿದೆ.  ಕಾಸ್ಮೆಟಿಕ್ ಕಂಪನಿ ರೆವ್ಲೋನ್ ನ ಸಾಲಗಾರನ ಏಜೆಂಟಾಗಿ ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ ಸಿಕ್ಕಾಪಟ್ಟೆ ಹಣ ಟ್ರಾನ್ಸ್ ಫರ್ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಕಂಪನಿಯ ವರ್ತಕರಿಗೆ ವ್ಯವಹಾರಕ್ಕೆ ಸಂಬಂಧಿಸಿ ಸಿಟಿ ಬ್ಯಾಂಕ್ 900 ಮಿಲಿಯನ್ ಡಾಲರ್(6654 ಕೋಟಿ ರೂ.) ಟ್ರಾನ್ಸ್ ಫರ್ ಮಾಡಿದೆ.  8  ಮಿಲಿಯನ್ ಡಾಲರ್ ನೀಡಬೇಕಾದ ಜಾಗದಲ್ಲಿ  ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿ ಮಾಡಿದೆ.

ಪ್ರಮಾದ ಗೊತ್ತಾದ ಮೇಲೆ ಸಿಟಿ ಬ್ಯಾಂಕ್ ನ್ಯಾಯಾಲಯದ ಮೊರೆ  ಹೋಗಿದೆ. ಆದರೆ ಇನ್ನುವರೆಗೆ 500  ಮಿಲಿಯನ್ ಡಾಲರ್  ಗಿಂತ ಹೆಚ್ಚಿನ ಹಣ ಮರುಪಾವತಿಯಾಗಿಲ್ಲ.  ಕಾರ್ಪೋರೇಟ್ ವಿಚಾರಕ್ಕೆ ಸಂಬಂಧಿಸಿ ಇದೊಂದು ವಿಚಿತ್ರ ಪ್ರಕರಣ. ಬ್ಯಾಂಕ್ ತನ್ನ  ಹಣ ಮರಳಿ ಪಡೆಯಲು ಹರಸಾಹಸ ಪಡಬೇಕಾದೀತು ಎಂದು ಯುಎಸ್ ಕೋರ್ಟ್ ನ   ನ್ಯಾಯಾಧೀಶರೊಬ್ಬರು ಹೇಳಿದ್ದಾರೆ. ಹಲವಾರು ಪ್ರಶ್ನೆಗಳು ಈ ಸುದ್ದಿಯೊಂದಿಗೆ ಹುಟ್ಟಿಕೊಂಡಿವೆ.

ಮೋದಿ ಸರ್ಕಾರದಲ್ಲಿ ಏನು ಹೊಸ ಬ್ಯಾಂಕಿಂಗ್ ವ್ಯವಸ್ಥೆ?

ನಿಜಕ್ಕೂ ಇಷ್ಟೊಂದು  ಮೊತ್ತದ ಹಣ ವರ್ಗಾವಣೆಯಾಗಿದೆಯಾ? : ಸಾಮಾನ್ಯವಾಗಿ ಇಂಥ ದೊಡ್ಡ ತಪ್ಪು ಆಗಲು ಸಾಧ್ಯವಿಲ್ಲ. ಹಣ ಕೇಳಿದವರ ವಿವರವನ್ನು ಯಾವುದೇ ಬ್ಯಾಂಕ್ ಎರಡೆರಡು ಸಾರಿ ಪರಿಶೀಲನೆ ಮಾಡುತ್ತದೆ. ಹಣ ವರ್ಗಾವಣೆಯಾದ ತಕ್ಷ ರಿಸೀಟ್ ಅನ್ನು ಖಾತರಿ ಮಾಡಿಕೊಳ್ಳಲಾಗುತ್ತದೆ. ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಎಲ್ಲವೂ ದಾಖಲೆಯಾಗಿರುತ್ತದೆ.  ಹಣ ವರ್ಗಾವಣೆಯಾದ ಖಾತೆಗೂ ದಾಖಲೆ ಸಲ್ಲಿಕೆಯಾಗಿರುತ್ತದೆ.

ಹಾಗಾದರೆ ಬ್ಯಾಂಕ್ ತಪ್ಪು ವರ್ಗಾವಣೆ ಮಾಡಿತೆ? 
ಬ್ಯಾಂಕಿಂಗ್ ವ್ಯವಸ್ಥೆ ಹೇಳುವಂತೆ ಇಂಥ ವರ್ಗಾವಣೆಯಾದ ತಕ್ಷಣ ಬ್ಯಾಂಕ್ ಎಸ್‌ಒಪಿ(ಸ್ಟಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್) ಶುರು ಮಾಡುತ್ತದೆ.  ಹಣ ಹೆಚ್ಚುವರಿಯಾಗಿ ಯಾರಿಗೆ ಹೋಗಿದೆ ಅವರ ಬಳಿ ಮಾತನಾಡಿ  ಸರಿ  ಮಾಡಲು ಕೇಳುತ್ತದೆ.  ಅವರು ಒಪ್ಪಿಕೊಳ್ಳದೆ ಇದ್ದರೆ ಕಾನೂನು ಸಲಹೆ ಪಡೆದುಕೊಂಡು ಆಗ್ಗಿಂದಾಗ್ಗೆ ಮುಂದಿನ ಕ್ರಮ ಜರುಗಿಸುತ್ತದೆ.

ಗ್ರಾಹಕನಿಂಲೇ ಮಿಸ್ಟೇಕ್ ಆಗಿದ್ದರೆ? 
ಗ್ರಾಹಕರು ಒಂದೊಂದು ಸಂದರ್ಭದಲ್ಲಿ ಇಂಥ ಪ್ರಮಾದ ಮಾಡಿರುವ ಸಾಧ್ಯತೆಯೂ ಇರುತ್ತದೆ.   ಗ್ರಾಹಕ ಬರೆದುಕೊಟ್ಟ ಮಾಹಿತಿ ಆಧರಿಸಿಯೇ ಬ್ಯಾಂಕ್ ಹಣ ವರ್ಗಾವಣೆ ಮಾಡಿರುತ್ತದೆ. ಪ್ರಮಾದ ಆದರೆ ಗ್ರಾಹಕ ಮೊದಲು ಬ್ಯಾಂಕ್ ಸಂಪರ್ಕ ಮಾಡಿ ನಂತರ ಕಾನೂನು ನೆರವು ಪಡೆದುಕೊಳ್ಳಬೇಕಾಗುತ್ತದೆ.

ನಿಮ್ಮ ಖಾತೆಗೆ ಹೆಚ್ಚುವರಿ ಹಣ ಬಂದರೆ? 
ನಿಮ್ಮ ಖಾತೆಗೆ ಹೆಚ್ಚಿನ ಹಣ ಬಂದಿದೆ ಎಂದು ಇಟ್ಟುಕೊಳ್ಳಿ.. ನಿಮಗೂ ಹಣಕ್ಕೂ ಸಂಬಂಧ ಇಲ್ಲ ಎಂತಾದರೆ ಮೊದಲು ಇದನ್ನು ಸಂಬಂಧಿಸಿದ ಬ್ಯಾಂಕ್ ಗಮನಕ್ಕೆ ತರಬೇಕು.  ಸಿಟಿಬ್ಯಾಂಕ್  ಪ್ರಕರಣದಲ್ಲಿ ಹೇಳುವುದಾದರೆ ಗಮನಕ್ಕೆ ತರುವ ಯಾವ ಕೆಲಸವೂ ಆಗಿಲ್ಲ.

ಭಾರತದಲ್ಲಿ ಇಂಥ ಘಟನೆ ನಡೆದ ದಾಖಲೆ ಇದೆಯಾ?
ಹಿಂದೆಯೂ ಇಂಥ ಪ್ರಮಾದಗಳು ಆದ ಉದಾಹರಣೆಗಳು ಇವೆ.  2013 ರಲ್ಲಿ  ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಒಂದು ತನ್ನ ಅನೇಕ ಗ್ರಾಹಕರಿಗೆ ತಪ್ಪಾಗಿ  ಹೆಚ್ಚುವರಿ ಬಡ್ಡಿಯನ್ನು ನೀಡಿತ್ತು. ಸಂಜೆ ಈ ತಪ್ಪಾಗಿದ್ದರಿಂತ ಬೆಳಗ್ಗೆ ಗೊತ್ತಾಗುವುದರೊಳಗೆ ಬ್ಯಾಂಕ್ ಸರು ಸರಿ ಮಾಡಿಕೊಂಡಿತ್ತು.