ಬಿಗ್ ಬಜಾರ್ ಮಹಾ ಉಳಿತಾಯ ಮೇಳ : ಭರ್ಜರಿ ಕೊಡುಗೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 10:54 AM IST
Big Bazaar Mahabachat sale to begin tomorrow
Highlights

ಬಿಗ್ ಬಜಾರ್ ಆ. 11ರಿಂದ  15ರ ವರೆಗೆ ಐದು ದಿನಗಳ ಕಾಲ ಮಹಾಬಚತ್ ಉಳಿತಾಯ ಮೇಳವನ್ನು ಹಮ್ಮಿಕೊಂಡಿದೆ. ಕಡಿಮೆ ಬೆಲೆಗಳಲ್ಲಿ ಮತ್ತು ಹೆಚ್ಚು ರಿಯಾಯ್ತಿ ಮತ್ತು ದೊಡ್ಡ ಮಟ್ಟದ ಮಹಾಬಚತ್ ಉಳಿತಾಯವನ್ನು ಈ ಐದು ದಿನಗಳಲ್ಲಿ ಗ್ರಾಹಕರಿಗೆ ನೀಡುತ್ತಿದೆ. 

ಬೆಂಗಳೂರು : ಬಿಗ್ ಬಜಾರ್ ಆ. 11ರಿಂದ  15ರ ವರೆಗೆ ಐದು ದಿನಗಳ ಕಾಲ ಮಹಾಬಚತ್ ಉಳಿತಾಯ ಮೇಳವನ್ನು ಹಮ್ಮಿಕೊಂಡಿದೆ. ಪ್ಯೂಚರ್ ಗ್ರೂಪ್‌ನ ಬಿಗ್ ಬಜಾರ್ ರಾಷ್ಟ್ರಾದ್ಯಂತ ತನ್ನ ಮಳಿಗೆಗಳಲ್ಲಿ ಕಡಿಮೆ ಬೆಲೆಗಳಲ್ಲಿ ಮತ್ತು ಹೆಚ್ಚು ರಿಯಾಯ್ತಿ ಮತ್ತು ದೊಡ್ಡ ಮಟ್ಟದ ಮಹಾಬಚತ್ ಉಳಿತಾಯವನ್ನು ಈ ಐದು ದಿನಗಳಲ್ಲಿ ಗ್ರಾಹಕರಿಗೆ ನೀಡುತ್ತಿದೆ. 

ಮಹಾ ಉಳಿತಾಯ ಮೇಳದಲ್ಲಿ ಗ್ರಾಹಕರು 3 ಸಾವಿರಕ್ಕೂ ಹೆಚ್ಚಿನ ಮೊತ್ತದ ವಸ್ತುಗಳನ್ನು ಖರೀದಿ ಮಾಡಿ ಪ್ಯೂಚರ್ ವ್ಯಾಲೇಟ್ ಅಥವಾ ಪೇಟಿಎಂ ಮೂಲಕ ಬಿಲ್ ಹಣವನ್ನು ಪಾವತಿ ಮಾಡಿದಲ್ಲಿ 1,200 ರವರೆಗೆ ಗ್ರಾಹಕರಿಗೆ ಕ್ಯಾಷ್‌ಬ್ಯಾಕ್ ಸಿಗಲಿದೆ. ಇದೇ ಮೊದಲ ಬಾರಿಗೆ ಬ್ರ್ಯಾಂಗ್ ಫ್ಯಾಕ್ಟರಿ, ಸೆಂಟ್ರಲ್, ನೀಲಗಿರೀಸ್, ಹೆರಿಟೇಚ್ ಫ್ರೆಶ್ ಮತ್ತು ಫುಡ್ ವರ್ಲ್ಡ್ ಮಹಾಬಚತ್‌ನಲ್ಲಿ ಭಾಗವಹಿಸಲಿವೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎಣ್ಣೆ,  ಟೂಟ್‌ಪೇಸ್ಟ್‌ನಿಂದ ತವಾ ವರೆಗೆ, ಮಹಿಳೆಯರಿಂದ ಮಕ್ಕಳವರೆಗೆ ಫ್ಯಾಷನ್‌ವೇರ್. ಹೋಂ ವೇರ್, ಲಗ್ಗೇಜ್, ಎಲೆಕ್ಟ್ರಾನಿಕ್ ಸೇರಿದಂತೆ ದೊಡ್ಡ ಸರಕುಗಳ ಮೇಲೆಯೂ ಬಾರೀ ರಿಯಾಯಿತಿ ನೀಡಲಾಗುತ್ತಿದೆ. ಆಹಾರ ಮತ್ತು ದಿನಸಿ ಪದಾರ್ಥಗಳ ಮೇಲೆ ಕಡಿಮೆ ದರದಲ್ಲಿ ನಿಮ್ಮ ಕೈ ಸೇರಲಿವೆ.

loader