ಭೀಮ್ ಆ್ಯಪ್ ಬಳಕೆದಾರರಿಗೆ ಭರ್ಜರಿ ಆಫರ್; 750ರೂ. ಕ್ಯಾಶ್ ಬ್ಯಾಕ್ ಸೌಲಭ್ಯ, ಪಡೆಯಲು ಹೀಗೆ ಮಾಡಿ
ಗ್ರಾಹಕರನ್ನು ಸೆಳೆಯಲು ಭೀಮ್ ಆ್ಯಪ್ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡುತ್ತಿದೆ. ಒಟ್ಟು 750 ರೂ. ಕ್ಯಾಶ್ ಬ್ಯಾಕ್ ಆಫರ್ ಪಡೆಯಲು ಭೀಮ್ ಆ್ಯಪ್ ಗ್ರಾಹಕರಿಗೆ ಅವಕಾಶವಿದೆ.
ನವದೆಹಲಿ (ಫೆ.9): ಪೇಮೆಂಟ್ ಆ್ಯಪ್ ಪೇಟಿಎಂ ವಿರುದ್ಧ ಆರ್ ಬಿಐ ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಅನೇಕರು ಬೇರೆ ಪಾವತಿ ಆಪ್ ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಈ ನಡುವೆ ಭೀಮ್ ಆ್ಯಪ್ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡುತ್ತಿದ್ದು, ಇದನ್ನು ಬಳಸಿಕೊಳ್ಳಲು ಕೆಲವೇ ವಾರಗಳ ಕಾಲಾವಕಾಶ ನೀಡಿದೆ. ಭೀಮ್ ಆ್ಯಪ್ ಪ್ರಸ್ತುತ 750 ರೂ. ರಿವಾರ್ಡ್ಸ್ ನೀಡುತ್ತಿದೆ. ಈ ಕ್ಯಾಶ್ ಬ್ಯಾಕ್ ಆಫರ್ ಇನ್ನಷ್ಟು ಗ್ರಾಹಕರನ್ನು ಭೀಮ್ ಆ್ಯಪ್ ನತ್ತ ಸೆಳೆಯುವ ನಿರೀಕ್ಷೆಯಿದೆ. ಗೂಗಲ್ ಪೇ ಮಾದರಿಯಲ್ಲೇ ಬಳಕೆದಾರರ ಸಂಖ್ಯೆಯನ್ನು ವಿಸ್ತರಿಸಿಕೊಳ್ಳುವ ಹಾದಿಯಲ್ಲಿ ಭೀಮ್ ಆ್ಯಪ್ ಕೂಡ ಇದೆ ಎಂದು ಹೇಳಬಹುದು. ಭೀಮ್ ಪೇ ಎರಡು ವಿಭಿನ್ನ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ನೀಡುತ್ತಿದ್ದು, ಇವೆರಡನ್ನು ಒಟ್ಟುಗೂಡಿಸಿದ್ರೆ ಮಾತ್ರ 750ರೂ. ಕ್ಯಾಶ್ ಬ್ಯಾಕ್ ಸಿಗುತ್ತದೆ. ಹಾಗೆಯೇ ಶೇ.1ರಷ್ಟು ಹೆಚ್ಚುವರಿ ಕ್ಯಾಶ್ ಬ್ಯಾಕ್ ಕೂಡ ಸಿಗುತ್ತದೆ. ಹಾಗಾದ್ರೆ ಈ ಆಫರ್ ಗಳನ್ನು ಕ್ಲೇಮ್ ಮಾಡೋದು ಹೇಗೆ?
600ರೂ. +150 ರೂ. ಕ್ಯಾಶ್ ಬ್ಯಾಕ್ ಕ್ಲೇಮ್ ಮಾಡೋದು ಹೇಗೆ?
ಹೊರಗಡೆ ರೆಸ್ಟೋರೆಂಟ್ ಗಳಲ್ಲಿ ಆಹಾರ ಸವಿಯಲು ಇಷ್ಟಪಡೋರು ಹಾಗೂ ಆಗಾಗ ಪ್ರವಾಸಕ್ಕೆ ತೆರಳಲು ಆಸಕ್ತಿ ಹೊಂದಿರೋರು ಭೀಮ್ ಆ್ಯಪ್ 150ರೂ. ಕ್ಯಾಶ್ ಬ್ಯಾಕ್ ಪ್ರಯೋಜನ ಪಡೆಯಬಹುದು. ಊಟದ ಬಿಲ್ ಹಾಗೂ ಪ್ರಯಾಣದ ವೆಚ್ಚಗಳನ್ನು ಈ ಆ್ಯಪ್ ಮೂಲಕ ಪಾವತಿಸಿದರೆ 100ರೂ. ಮೀರಿದ ವಹಿವಾಟಿಗೆ 30ರೂ. ರಿಯಾಯಿತಿ ಸಿಗಲಿದೆ. ಮರ್ಚೆಂಟ್ ಯುಪಿಐ ಕ್ಯುಆರ್ ಕೋಡ್ ಬಳಸಿಕೊಂಡು ಮಾಡಿದ ರೈಲ್ವೆ ಟೆಕೆಟ್ ಬುಕ್ಕಿಂಗ್ಸ್, ಕ್ಯಾಬ್ ಟ್ರಿಪ್ಸ್ ಹಾಗೂ ರೆಸ್ಟೋರೆಂಟ್ ಬಿಲ್ ಗಳನ್ನು ಈ ಆಫರ್ ಅಡಿಯಲ್ಲಿ ಕವರ್ ಮಾಡಬಹುದು. ಗರಿಷ್ಠ 150ರೂ. ಕ್ಯಾಶ್ ಬ್ಯಾಕ್ ಸಿಗಲಿದೆ. ಈ ನಿರ್ದಿಷ್ಟ ಮೊತ್ತವನ್ನು ಪಡೆಯಲು ಗ್ರಾಹಕರು ಕನಿಷ್ಠ 5 ಬಾರಿ ಈ ಆಫರ್ ಕ್ಲೇಮ್ ಮಾಡೋದು ಅಗತ್ಯ.
ಪೇಟಿಎಂಗೆ ವ್ಯಾಪಾರಿಗಳ ಗುಡ್ ಬೈ;ಬೇರೆ ಪೇಮೆಂಟ್ ಆ್ಯಪ್ ಬಳಸಲಾರಂಭಿಸಿದ ಶೇ.42ರಷ್ಟು ಕಿರಾಣಿ ಅಂಗಡಿಗಳು!
ಇನ್ನು ಭೀಮ್ ಆ್ಯಪ್ ಗೆ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿರುವ ಗ್ರಾಹಕರಿಗೆ ಈ ಆಫರ್ ಜೊತೆಗೆ 600ರೂ. ಕ್ಯಾಶ್ ಬ್ಯಾಕ್ ಕೂಡ ಸಿಗಲಿದೆ. ಎಲ್ಲ ಮರ್ಚೆಂಟ್ ಯುಪಿಐ ಪಾವತಿಗಳ ಮೇಲೆ ಗ್ರಾಹಕರು 600ರೂ. ಕ್ಯಾಶ್ ಬ್ಯಾಕ್ ಪಡೆಯಬಹುದು. 100ರೂ. ಮೇಲ್ಪಟ್ಟ ಮೊದಲ ಮೂರು ವಹಿವಾಟುಗಳ ಮೇಲೆ 100ರೂ. ಕ್ಯಾಶ್ ಬ್ಯಾಕ್ ಸಿಗಲಿದೆ. ಇದರ ಜೊತೆಗೆ ಪ್ರತಿ ತಿಂಗಳು 200ರೂ. ಮೇಲ್ಪಟ್ಟ 10 ವಹಿವಾಟುಗಳ ಮೇಲೆ 30ರೂ. ಹೆಚ್ಚುವರಿ ಕ್ಯಾಶ್ ಬ್ಯಾಕ್ ಸಿಗಲಿದೆ. ಹೀಗೆ ಒಟ್ಟು ನಿಮಗೆ 600ರೂ. ಕ್ಯಾಶ್ ಬ್ಯಾಕ್ ಸಿಗಲಿದೆ.
ಹೆಚ್ಚುವರಿ 1% ಪಡೆಯೋದು ಹೇಗೆ?
ಈ ಮೇಲೆ ವಿವರಿಸಿದ ಆಫರ್ ಗಳ ಹೊರತಾಗಿ ಭೀಮ್ ಆ್ಯಪ್ ಉರ್ಜಾ ಶೇ.1 ಕಾರ್ಯಕ್ರಮ ಹೊಂದಿದೆ. ಇದನ್ನು ಬಳಸಿಕೊಂಡ ಗ್ರಾಹಕರಿಗೆ ಸಿಎನ್ ಜಿ, ಡೀಸೆಲ್ ಹಾಗೂ ಪೆಟ್ರೋಲ್ ಖರೀದಿ ಮೇಲೆ ಫ್ಲ್ಯಾಟ್ ಶೇ.1ರಷ್ಟು ಪೇಬ್ಯಾಕ್ ಸಿಗಲಿದೆ. ಒಂದು ವೇಳೆ ವಹಿವಾಟಿನ ಮೌಲ್ಯ 100ರೂ. ಅಥವಾ ಅದಕ್ಕಿಂತ ಹೆಚ್ಚಿಸದ್ದರೆ ಈ ಪ್ರಯೋಜನವನ್ನು ಗ್ಯಾಸ್, ನೀರು ಹಾಗೂ ವಿದ್ಯುತ್ ಬಿಲ್ ಗಳ ಪಾವತಿಗೆ ಕೂಡ ಬಳಸಬಹುದು. ಇನ್ನು ಕ್ಯಾಶ್ ಬ್ಯಾಕ್ ಅನ್ನು ಭೀಮ್ ಆ್ಯಪ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಪೇಟಿಯಂ ವ್ಯಾಲೆಟ್ ಖರೀದಿಸಲಿದ್ದಾರಾ ಮುಖೇಶ್ ಅಂಬಾನಿ? ಜಿಯೋ ಫೈನಾನ್ಸ್, HDFC ಬ್ಯಾಂಕ್ ರೇಸ್‌ನಲ್ಲಿ
ವ್ಯಾಲಿಡಿಟಿ ಎಷ್ಟು ದಿನ ?
ಈ ಕ್ಯಾಶ್ ಬ್ಯಾಕ್ 2024ರ ಮಾರ್ಚ್ 31ರ ತನಕ ಲಭ್ಯವಿದೆ. ಅಂದರೆ ಬಳಕೆದಾರರು ಈ ಆಫರ್ ಬಳಸಿಕೊಳ್ಳಲು ಏಳು ವಾರಗಳ ಕಾಲಾವಕಾಶವಿದೆ.