ಸ್ಟಾಕ್‌ ಸ್ಪ್ಲಿಟ್‌, 8.85 ರೂಪಾಯಿ ಮಧ್ಯಂತರ ಡಿವಿಡೆಂಡ್‌ ಘೋಷಣೆ ಮಾಡಿದ ಸರ್ಕಾರಿ ಕಂಪನಿ, ಈ ಷೇರು ನಿಮ್ಮಲ್ಲಿದ್ಯಾ?

bharat dynamics ltd share stock split update ಪಬ್ಲಿಕ್‌ ಸೆಕ್ಟರ್‌ ಯುನಿಟ್‌ಗಳ ಪರ್ವಕಾಲ ಆರಂಭವಾಗಿದೆ. ಷೇರು ಮಾರುಕಟ್ಟೆಯಲ್ಲಿ ಪಿಎಸ್‌ಯು ಕಂಪನಿಗಳ ಅಬ್ಬರದ ನಡುವೆ ಪ್ರಮುಖ ಪಿಎಸ್‌ಯು ಗುರುವಾರ ಭರ್ಜರಿ ಡಿವಿಡೆಂಡ್‌ ಹಾಗೂ ಸ್ಟಾಕ್‌ ಸ್ಪ್ಲಿಟ್‌ ಘೋಷಣೆ ಮಾಡಿದೆ.

Bharat Dynamics PSU Dividend company to pay 8 85 to shareholders split stock san

ಮುಂಬೈ (ಮಾ.21):  ಸರ್ಕಾರಿ ಸ್ವಾಮ್ಯದ ರಕ್ಷಣಾ ಸಾಧನ ತಯಾರಕ ಕಂಪನಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಗುರುವಾರ 2023-24 ರ ಹಣಕಾಸು ವರ್ಷದಲ್ಲಿ ಪ್ರತಿ ಈಕ್ವಿಟಿ ಷೇರಿಗೆ ₹8.85 ರ ಮಧ್ಯಂತರ ಲಾಭಾಂಶವನ್ನು ಘೋಷಣೆ ಮಾಡಿದೆ. 2024ರ ಏಪ್ರಿಲ್‌ 2ರ ಒಳಗಾಗಿ ಷೇರುಗಳನ್ನು ಹೊಂದಿರುವ ಷೇರುದಾರರಿಗೆ ಡಿವಿಡೆಂಡ್‌ ನೀಡೋದಾಗಿ ತಿಳಿಸಿದೆ. ಇನ್ನು 2024ರ ಏಪ್ರಿಲ್‌ 18ರಂದು ಅಥವಾ ಅದಕ್ಕೂ ಮುನ್ನವೇ ಮಧ್ಯಂತರ ಡಿವಿಡೆಂಡ್‌ ಪಾವತಿಯು ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತ್‌ ಡನಾಮಿಕ್ಸ್‌  ಲಿಮಿಟೆಡ್‌ ಪ್ರತಿ ಷೇರಿಗೆ 1.2 ರೂಪಾಯಿಯಂತೆ ಡಿವಿಡೆಂಡ್‌ ನೀಡಿತ್ತು. ಅದಕ್ಕೂ ಮುನ್ನ 2023ರ ಫೆಬ್ರವರಿಯಲ್ಲಿ ಪ್ರತಿ ಷೇರಿಗೆ 8.15 ರೂಪಾಯಿಯಂತೆ ಡಿವಿಡೆಂಡ್‌ ನೀಡಿತ್ತು. ಇದಲ್ಲದೆ, ಕಂಪನಿಯು 1: 2 ಸ್ಟಾಕ್ ವಿಭಜನೆಯನ್ನು ಸಹ ಘೋಷಿಸಿದೆ. ಇದರರ್ಥ ₹10 ಮುಖಬೆಲೆಯ ಒಂದು ಈಕ್ವಿಟಿ ಷೇರನ್ನು ₹5 ಮುಖಬೆಲೆಯ ಎರಡು ಈಕ್ವಿಟಿ ಷೇರುಗಳಾಗಿ ವಿಭಜನೆಯಾಗಲಿದೆ.  ಕಂಪನಿಯ ಷೇರುದಾರರಿಂದ ಪ್ರಸ್ತಾವನೆಯನ್ನು ಅನುಮೋದಿಸಿದ ನಂತರ ಸ್ಟಾಕ್ ವಿಭಜನೆಯ ದಾಖಲೆ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಷೇರುದಾರರ ಅನುಮೋದನೆ ಸಿಕ್ಕ ಬಳಿಕ 2-3 ತಿಂಗಳೊಳಗೆ ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

ಬಂಡವಾಳ ಪುನರ್‌ರಚನೆ, ಸಣ್ಣ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಮಾರುಕಟ್ಟೆಯಲ್ಲಿ ಕಂಪನಿಯ ಈಕ್ವಿಟಿ ಷೇರುಗಳ ಲಿಕ್ವಿಡಿಟಿಯನ್ನು ಹೆಚ್ಚಿಸಲು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಮಾರ್ಗಸೂಚಿಗಳನ್ನು ಅನುಸರಿಸುವ ಕಾರಣಕ್ಕಾಗಿ ಭಾರತ್ ಡೈನಾಮಿಕ್ಸ್ ಷೇರು ವಿಭಜನೆ ಮಾಡಲಾಗುತ್ತಿದೆ.

ಭಾರತ್ ಡೈನಾಮಿಕ್ಸ್ ಅವರು ಜಿ.ಗಾಯತ್ರಿ ಪ್ರಸಾದ್ ಅವರನ್ನು 2024ರ ಮಾರ್ಚ್ 21ರಿಂದ ಕಂಪನಿಯ ಹೊಸ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಿಸಿದ್ದಾರೆ. ಪ್ರಸಾದ್ ಪ್ರಸ್ತುತ ಭಾರತ್ ಡೈನಾಮಿಕ್ಸ್‌ನಲ್ಲಿ ಜನರಲ್ ಮ್ಯಾನೇಜರ್ (ಹಣಕಾಸು) ಆಗಿದ್ದಾರೆ. ಎನ್ ಶ್ರೀನಿವಾಸುಲು ಅವರು 2024ರ ಜನವರಿ 31ರಿಂದ ಕಂಪನಿಯ ನಿರ್ದೇಶಕ (ಹಣಕಾಸು) ಮತ್ತು ಸಿಎಫ್‌ಒ ಸ್ಥಾನದಿಂದ ಹಿಂದೆ ಸರಿದ ಬಳಿಕ ಈ ನಿರ್ಧಾರ ಬಂದಿದೆ.

Union Budget 2024: ಪಿಎಂ ಗತಿ ಶಕ್ತಿಗೆ ಇನ್ನಷ್ಟು ಪವರ್‌, ಮೂರು ಪ್ರಮುಖ ರೈಲ್ವೆ ಕಾರಿಡಾರ್‌!

ಭಾರತ್‌ ಡೈನಾಮಿಕ್ಸ್‌ನ ಘೋಷಣೆಯ ಬೆನ್ನಲ್ಲಿಯೇ ಗುರುವಾರ ಷೇರು ಮಾರುಕಟ್ಟೆಯಲ್ಲಿ ಇದರ ಷೇರುಗಳು ಶೇ. 2.50ರಷ್ಟು ಏರಿಕೆ ಕಂಡಿದ್ದು, 1660 ರೂಪಾಯಿಯಲ್ಲಿ ಮುಕ್ತಾಯ ಕಂಡಿದೆ. ಈ ವರ್ಷ ಈ ಕಂಪನಿ ಷೇರಿನ ಬೆಲೆಯಲ್ಲಿ ಶೇ. 4ರಷ್ಟು ಇಳಿಕೆಯಾಗಿದೆ.

ವಿಶ್ವದ ಐವರು ಶ್ರೀಮಂತರು ದಿನಕ್ಕೆ 8 ಕೋಟಿ ಖರ್ಚು ಮಾಡಿದರೆ ದಿವಾಳಿಯಾಗಲು 476 ವರ್ಷ ಬೇಕಂತೆ!

Latest Videos
Follow Us:
Download App:
  • android
  • ios