ವಿಶ್ವದ ಐವರು ಶ್ರೀಮಂತರು ದಿನಕ್ಕೆ 8 ಕೋಟಿ ಖರ್ಚು ಮಾಡಿದರೆ ದಿವಾಳಿಯಾಗಲು 476 ವರ್ಷ ಬೇಕಂತೆ!
ಜಗತ್ತಿನ ಐವರು ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಟೆಸ್ಲಾ ಚೀಫ್ ಎಲಾನ್ ಮಸ್ಕ್ ಹಾಗೂ ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅಸಾಧ್ಯವಾದ ಸಂಪತ್ತನ್ನು ಹೊಂದಿದ್ದಾರೆ.
ನವದೆಹಲಿ (ಜ.16): ಆಕ್ಸ್‌ಫ್ಯಾಮ್ ಗ್ರೂಪ್ ಬಿಡುಗಡೆ ಮಾಡಿದ ವರದಿಯ ಪ್ರಕಾರ ಹಾಲಿ ವಿಶ್ವದ ಶ್ರೀಮಂತ 5 ವ್ಯಕ್ತಿಗಳು ಪ್ರತಿ ದಿನ 1 ಮಿಲಿಯನ್ ಡಾಲರ್ ಎಂದರೆ 8.31 ಕೋಟಿ ರೂಪಾಯಿಯನ್ನು ಖರ್ಚಿ ಮಾಡಲು ನಿರ್ಧರಿಸಿದರೆ, ಅವರ ಈಗಿರುವ ಸಂಪತ್ತನ್ನು ಖಾಲಿ ಮಾಡಲು 476 ವರ್ಷಗಳು ಬೇಕಾಗುತ್ತದೆ ಎಂದು ಹೇಳಿದೆ. 'ಇನ್‌ಈಕ್ವಾಲಿಟಿ ಇಂಕ್' ಎನ್ನುವ ಶೀರ್ಷಿಕೆಯಲ್ಲಿ ಆಕ್ಸ್‌ಫ್ಯಾಮ್ ಈ ವರದಿಯನ್ನು ಪ್ರಕಟಿಸಿದ್ದು, ವಿಶ್ವದ ಅತ್ಯಂತ ಶ್ರೀಮಂತ ಮತ್ತು ಬಡ ಜನರ ನಡುವೆ ಬೆಳೆಯುತ್ತಿರುವ ಸಂಪತ್ತಿನ ವಿಭಜನೆಯನ್ನು ಎತ್ತಿ ತೋರಿಸಿದೆ. ಜಗತ್ತಿನ ಐವರು ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಟೆಸ್ಲಾ ಚೀಫ್ ಎಲಾನ್ ಮಸ್ಕ್ ಹಾಗೂ ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ತಮ್ಮ ಸಂಪತ್ತನ್ನು ಅಂದಾಜು ಡಬಲ್ ಮಾಡಿಕೊಂಡಿದ್ದಾರೆ. ಇವರಿಬ್ಬರ ಸಂಪತ್ತು 405 ಬಿಲಿಯನ್ ಯುಎಸ್ ಡಾಲರ್‌ಗಳಿಂದ 869 ಬಿಲಿಯನ್ ಯುಎಸ್ ಡಾಲರ್‌ಗೆ ಏರಿದೆ. ಇಬ್ಬರ ಸಂಪತ್ತಿನಲ್ಲೂ ಶೇ. 114ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. ವಿಶ್ವದ ಐವರು ಶ್ರೀಮಂತರ ಆದಾಯವನ್ನು ಒಟ್ಟುಗೂಡಿಸಿ, ಪ್ರತಿದಿನ ಅವರು 1 ಮಿಲಿಯನ್ ಯುಎಸ್ ಡಾಲರ್ ಎಂದರೆ, 8 ಕೋಟಿ ರೂಪಾಯಿ ಖರ್ಚು ಮಾಡಲು ತೀರ್ಮಾನ ಮಾಡಿದರೆ, ಅವರು ಸಂಪತ್ತು ಬರಿದಾಗಿ ದಿವಾಳಿಯಾಗಲು 476 ವರ್ಷಗಳು ಬೇಕು ಎಂದು ತಿಳಿಸಲಾಗಿದೆ. ಇದು ಜಗತ್ತಿನಲ್ಲಿ ಶ್ರೀಮಂತಿಕೆಯ ವ್ಯತ್ಯಾಸಗಳು ದೊಡ್ಡಮಟ್ಟದಲ್ಲಿ ಗೋಚರವಾಗುತ್ತಿದೆ ಎನ್ನುವುದನ್ನು ತೋರಿಸಿದೆ.
ವರದಿಯಲ್ಲಿ ಹೈಲೈಟ್ ಮಾಡಲಾದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ವಿಶ್ವದ ಶ್ರೀಮಂತ ಶೇಕಡಾ 1 ರಷ್ಟು ಎಲ್ಲಾ ಜಾಗತಿಕ ಹಣಕಾಸು ಆಸ್ತಿಗಳಲ್ಲಿ 43 ಶೇಕಡಾವನ್ನು ಹೊಂದಿದ್ದಾರೆ. ಹಾಗಂತ ವಿಶ್ವದ ಶ್ರೀಮಂತರ ಸಂಪತ್ತು ಎರಿಕೆಯಾಗಿರುವುದರಲ್ಲಿ ಯಾವುದೇ ರಹಸ್ಯಗಳಿಲ್ಲ. ಅದರಲ್ಲೂ ಪ್ರಮುಖವಾಗಿ ಎಲಾನ್ ಮಸ್ಕ್ 2020ರಿಂದ ದೊಡ್ಡ ಪ್ರಮಾಣದ ಜಿಗಿತವನ್ನು ಕಂಡಿದ್ದಾರೆ. ಅವರ ಟೆಸ್ಲಾ ಷೇರುಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದವು. ಇಂದು ಅವರ ನೆಟ್‌ವರ್ತ್ 206 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಆಕ್ಸ್‌ಫಾಮ್ ತನ್ನ ವರದಿಯಲ್ಲಿ ಈ ಎಲ್ಲರ ಸಂಪತ್ತುಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದೆ.
ಜಗತ್ತಿನ ಬಿಕ್ಕಟ್ಟಿನ ಸಮಯದಲ್ಲೂ ಪ್ರಪಂಚದ ಶ್ರೀಮಂತ ಜನರು ಬಿಗ್ ವಿನ್ನರ್‌ಗಳಾಗಿದ್ದಾರೆ. 2020ರ ಆರಂಭದಲ್ಲಿ ಇದ್ದಿದ್ದಕ್ಕಿಂತ 2023ರಲ್ಲಿ ಈ ಶ್ರೀಮಂತರ ಸಂಪತ್ತಿನಲ್ಲಿ ಶೇ. 34ರಷ್ಟು ಅಂದರೆ 3.3 ಟ್ರಿಲಿಯನ್ ಯುಎಸ್ ಡಾಲರ್‌ನಷ್ಟು ಏರಿಕೆಯಾಗಿದೆ. ಪ್ರಸ್ತುತ ಮತ್ತು 2027 ರ ನಡುವೆ ಮಿಲಿಯನೇರ್‌ಗಳ ಸಂಖ್ಯೆಯು ಶೇಕಡಾ 44 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ಆದರೆ $ 50 ಮಿಲಿಯನ್ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಜನರ ಸಂಖ್ಯೆಯು ಶೇಕಡಾ 50 ರಷ್ಟು ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.
ಐದು ಶ್ರೀಮಂತ ಶತಕೋಟ್ಯಾಧಿಪತಿಗಳ ಸಂಪತ್ತು ಕಳೆದ ಐದು ವರ್ಷಗಳಲ್ಲಿ ಏರಿಕೆಯಾದ ರೀತಿಯಲ್ಲೇ ಮುಂದೆ ಏರಿಕೆ ಆದಲ್ಲಿ ನಾವು 10 ವರ್ಷಗಳಲ್ಲಿ ಮೊದಲ ಟ್ರಿಲಿಯನೇರ್ ಅನ್ನು ನೋಡುತ್ತೇವೆ ಎಂದು ಆಕ್ಸ್‌ಫ್ಯಾಮ್ ಅಂದಾಜಿಸಿದೆ. ಆದಾಗ್ಯೂ, ನಾವು 230 ವರ್ಷಗಳವರೆಗೆ ಬಡತನವನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಬೆಡ್‌ರೂಮ್, ಕಿಸ್ಸಿಂಗ್ ಸೀನ್‌ಗಳಲ್ಲಿ ನಟಿಸುವಾಗ ನನ್ನಲ್ಲಿ ಈ ಪ್ರಶ್ನೆ ಇದ್ದೇ ಇರುತ್ತೆ ಎಂದ ರಣವಿಕ್ರಮ ನಟಿ ಅಂಜಲಿ!
ಪ್ರಪಂಚದ ಅತ್ಯಂತ ಶ್ರೀಮಂತರು ತಮ್ಮ ಸಂಪತ್ತಿನ ವೇಗವನ್ನು ಕಂಡಿದ್ದರೂ, ವಿಶ್ವದ ಬಡವರು ತಮ್ಮ ಸಂಪತ್ತನ್ನು ಏರಿಸುವ ಯಾವುದೇ ಅವಕಾಶ ದೊರೆತಿಲ್ಲ. ಅವರಿಗೆ ಹಣದುಬ್ಬರದ ಏರಿಕೆಯ ಮಟ್ಟಗಳು, ಹವಾಮಾನ ಬದಲಾವಣೆಯ ಆರ್ಥಿಕ ಪರಿಣಾಮ ಮತ್ತು ಭೌಗೋಳಿಕ ರಾಜಕೀಯ ಘರ್ಷಣೆಗಳು ಜೀವನವನ್ನು ಇನ್ನಷ್ಟು ಕಠಿಣ ಮಾಡಿದೆ. ಅದೇ ಅವಧಿಯಲ್ಲಿ ಜಗತ್ತಿನಾದ್ಯಂತ ಸುಮಾರು ಐದು ಶತಕೋಟಿ ಜನರು ಬಡವಾಗಿದ್ದಾರೆ ಎಂದು ವರದಿ ತಿಳಿಸಿದೆ. "ಕಷ್ಟ ಮತ್ತು ಹಸಿವು ಪ್ರಪಂಚದಾದ್ಯಂತ ಅನೇಕ ಜನರಿಗೆ ದೈನಂದಿನ ವಾಸ್ತವವಾಗಿದೆ. ಪ್ರಸ್ತುತ ದರದಲ್ಲಿ, ಬಡತನವನ್ನು ಕೊನೆಗೊಳಿಸಲು 230 ವರ್ಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ನಾವು 10 ವರ್ಷಗಳಲ್ಲಿ ನಮ್ಮ ಮೊದಲ ಟ್ರಿಲಿಯನೇರ್ ಅನ್ನು ಹೊಂದಬಹುದು ಎಂದು ವರದಿ ಹೇಳಿದೆ.
ದಿವ್ಯಾ ದುರೈಸಾಮಿ ಪ್ರತಿ ಫೋಟೋಗೂ 'ಟೆಸ್ಲಾ' ಕಾಮೆಂಟ್ ಮಾಡೋದ್ಯಾಕೆ ಪಡ್ಡೆ ಹುಡುಗ್ರು!