Asianet Suvarna News Asianet Suvarna News

New Investment : ಮಹಿಳೆಯರಿಗೆ ಲಾಭಕಾರಿ ಈ ಹೂಡಿಕೆ ಯೋಜನೆ

ಹಣ ಹೂಡಿಕೆ ಮಾಡುವ ವೇಳೆ ಅದ್ರ ಲಾಭ, ನಷ್ಟಗಳ ಬಗ್ಗೆ ತಿಳಿದಿರಬೇಕು. ಯಾವ ಹೂಡಿಕೆಯಲ್ಲಿ ಎಷ್ಟು ಬಡ್ಡಿ ಸಿಗುತ್ತೆ ಎಂಬ ಅರಿವಿರಬೇಕು. ಕೇಂದ್ರ ಸರ್ಕಾರ ಈಗ ಮಹಿಳೆಯರಿಗಾಗಿಯೇ ಕೆಲ ಯೋಜನೆ ಶುರು ಮಾಡಿದೆ. ಇದ್ರಲ್ಲಿ ಉತ್ತಮ ಬಡ್ಡಿ ಜೊತೆ ಹಣ ಸುರಕ್ಷಿತವಾಗಿರುತ್ತದೆ. 
 

Best Investment Options For Women In India
Author
First Published Feb 4, 2023, 2:04 PM IST

ಗಳಿಕೆ ಜೊತೆ ಉಳಿತಾಯ ಮಾಡುವುದು ಅನಿವಾರ್ಯವಾಗಿದೆ. ತುರ್ತು ಸಂದರ್ಭದಲ್ಲಿ ಉಳಿತಾಯ ನಮ್ಮ ಕೆಲಸಕ್ಕೆ ಬರುತ್ತದೆ. ಕೊರೊನಾ ಸಂದರ್ಭದಲ್ಲಿ ಜನರು ಉಳಿತಾಯದ ಮಹತ್ವವನ್ನು ಅರಿತಿದ್ದಾರೆ. ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ಗಳಿಸಿದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಬೇಕಿದೆ. ಭವಿಷ್ಯಕ್ಕೆ ಇದು ನೆರವಾಗಲಿದೆ. ನಿವೃತ್ತಿ ಸಮಯದಲ್ಲಿ ಈ ಹಣ ಪ್ರಯೋಜನಕ್ಕೆ ಬರುತ್ತದೆ. ಸರ್ಕಾರ (Govt), ಬ್ಯಾಂಕ್ ಸೇರಿದಂತೆ ಅನೇಕ ಹಣಕಾಸು (Finance) ಸಂಸ್ಥೆಗಳು ಉಳಿತಾಯಕ್ಕೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಫೆಬ್ರವರಿ ಒಂದರನ್ನು ಕೇಂದ್ರ (Center) ಸರ್ಕಾರ ಮಂಡನೆ ಮಾಡಿದ ಬಜೆಟ್ (Budget) ನಲ್ಲಿ ಕೂಡ ಮಹಿಳೆಯರಿಗೆ ಅನುಕೂಲವಾಗುವ ಹೂಡಿಕೆ ಯೋಜನೆಯನ್ನು ಘೋಷಿಸಿದೆ. ನಾವಿಂದು ಮಹಿಳೆಯರು ಯಾವಯಾವ ಯೋಜನೆಯಲ್ಲಿ ಹೂಡಿಕೆ ಮಾಡ್ಬಹುದು ಎಂಬ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ. 

ಮಹಿಳಾ ಸಮ್ಮಾನ್ (Mahila Samman) ಉಳಿತಾಯ ಪತ್ರ ಯೋಜನೆ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈ ಬಾರಿ ಸರ್ಕಾರ ಮಹಿಳಾ ಸಮ್ಮಾನ್ ಬಚತ್ ಪತ್ರ ಯೋಜನೆ ತಂದಿದೆ. ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳ (Saving Account) ಜೊತೆಗೆ ಮಹಿಳೆಯರು ಈ ಯೋಜನೆಯಡಿ ಉಳಿತಾಯ ಮಾಡಬಹುದು. ಈ ಯೋಜನೆಯಡಿ ಮಹಿಳೆಯರು ತಮ್ಮ ಅಥವಾ ತಮ್ಮ ಮಗಳ ಹೆಸರಿನಲ್ಲಿ ಹಣವನ್ನು ಉಳಿಸಬಹುದು ಮತ್ತು ಉತ್ತಮ ಬಡ್ಡಿಯ ಲಾಭವನ್ನು ಪಡೆಯಬಹುದು. ಈ ಹೂಡಿಕೆ ಯೋಜನೆಯಲ್ಲಿ ನೀವು 2 ವರ್ಷಗಳವರೆಗೆ 2 ಲಕ್ಷ ರೂಪಾಯಿವರೆಗೆ ಠೇವಣಿ ಮಾಡಬಹುದು. ಅದರ ನಂತರ ನೀವು ಶೇಕಡಾ 7.5ರ ದರದಲ್ಲಿ ಬಡ್ಡಿ ಹಣವನ್ನು ಪಡೆಯುತ್ತೀರಿ.

ಮಾರ್ಚ್ 2025 ರವರೆಗೆ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು. ಯಾವುದೇ ವಯಸ್ಸಿನ ಮಹಿಳೆಯರು ಈ ಯೋಜನೆಯ ಹಣ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ  ಮಹಿಳೆಯರು ಭಾಗಶಃ ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಪಡೆಯುತ್ತಾರೆ. ಅವಧಿ ಪೂರ್ಣಗೊಳ್ಳುವ ಮೊದಲೇ ನೀವು ಸ್ವಲ್ಪ ಹಣವನ್ನು ಹಿಂಪಡೆಯಬಹುದು. ಮೆಚ್ಯುರಿಟಿ ನಂತ್ರ ಹೂಡಿದ ಹಣದ ಜೊತೆ ಉತ್ತಮ ಬಡ್ಡಿ ನಿಮಗೆ ಸಿಗುತ್ತದೆ. ಈ ಯೋಜನೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡ್ಬೇಕೆಂದು ಇನ್ನೂ ಸರ್ಕಾರ ಸ್ಪಷ್ಟಪಡಿಸಿಲ್ಲ. ಕನಿಷ್ಠ ಸಾವಿರ ರೂಪಾಯಿಯಿಂದ ಹೂಡಿಕೆ ಶುರು ಮಾಡಬಹುದು ಎನ್ನಲಾಗಿದೆ. ಇದ್ರಲ್ಲಿ ಮಹಿಳೆಯರಿಗೆ ಬೇಗ ಹೂಡಿಕೆ ಹಣ ವಾಪಸ್ ಸಿಗಲಿದೆ. ಹಾಗೆಯೇ ತ್ರೈಮಾಸಿಕದಲ್ಲಿ ಬಡ್ಡಿ ದರದಲ್ಲಿ ಏರುಪೇರಾಗುವುದಿಲ್ಲ. ಎರಡು ವರ್ಷದವರೆಗೆ ಬಡ್ಡಿ ದರ ಶೇಕಡಾ 7.5ರಷ್ಟೇ ಇರಲಿದೆ. 

ಪಾನ್ ಶಾಪ್ ಶುರು ಮಾಡಲು ಬೇಡ ದೊಡ್ಡ ಮೊತ್ತ, ತರುತ್ತೆ ಹೆಚ್ಚಿನ ಆದಾಯ!

ಎನ್ ಬಿಎಫ್ ಸಿಯಲ್ಲಿ (NBFC) ಹೂಡಿಕೆ : ಎನ್ ಬಿಎಫ್ ಸಿ (NBFC) ಎಂದರೆ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು. ಬ್ಯಾಂಕ್‌ಗಳಲ್ಲಿ ಉಳಿತಾಯ ಮಾಡುವುದರಿಂದ ನೀವು ಯಾವುದೇ ವಿಶೇಷ ಪ್ರಯೋಜನವನ್ನು ಪಡೆಯದಿರಬಹುದು, ಆದರೆ ನೀವು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಸಿಗುತ್ತದೆ. ಸರ್ಕಾರಿ ಬ್ಯಾಂಕ್ ನಷ್ಟು ಇದು ಸುರಕ್ಷಿತವಲ್ಲ. ಆದ್ರೆ ಉತ್ತಮ ಲಾಭ ಪಡೆಯುತ್ತಿರುವ ಹಾಗೂ ಅಸಲಿ ಕಂಪನಿಯನ್ನು ಪರೀಕ್ಷಿಸಿ ಹಣ ಹೂಡಿಕೆ ಮಾಡಬೇಕಾಗುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್,ಮುತ್ತೂಟ್ ಫೈನಾನ್ಸ್ ಲಿಮಿಟೆಡ್, ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್, ಐಎಫ್ ಸಿಐ ಲಿಮಿಟೆಡ್ ಸೇರಿದಂತೆ ಕೆಲ ಸುರಕ್ಷಿತ ಕಂಪನಿಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಪಡೆಯಬಹುದು. 

ಅಟಲ್ ಪಿಂಚಣಿ ಯೋಜನೆಗೆ 5 ಕೋಟಿ ಜನರು ಸೇರ್ಪಡೆ; ಮಹಿಳೆಯರ ಪ್ರಮಾಣದಲ್ಲಿಏರಿಕೆ

ಪಿಪಿಎಫ್ (PPF) ಖಾತೆಯಲ್ಲಿ ಹಣ ಹೂಡಿಕೆ : ಇದಲ್ಲದೆ ಮಹಿಳೆಯರು  ಪಿಪಿಎಫ್ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಸಣ್ಣ ಮೊತ್ತದ ಹಣವನ್ನು ನೀವು ಇಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿದ ಹಣ ಸುರಕ್ಷಿತವಾಗಿರುತ್ತದೆ. ಈ ಖಾತೆಯಲ್ಲಿ ಮಹಿಳೆಯರಿಗೆ ಉತ್ತಮ ಬಡ್ಡಿ ಸಿಗುತ್ತದೆ. ಕಡಿಮೆ ಹಣ ಹೂಡಿ ಹೆಚ್ಚು ಬಡ್ಡಿ ಪಡೆಯುವ ಯೋಜನೆ ಇದಾಗಿದೆ. 
 

Follow Us:
Download App:
  • android
  • ios