Asianet Suvarna News Asianet Suvarna News

ಹೋಟೆಲ್ ತಿಂಡಿಗಳ ಹೊಸ ದರ, ಇಂದು ಸಂಜೆ ಮಹತ್ವದ ನಿರ್ಧಾರ

ಬೆಲೆ ಏರಿಕೆಯ ಕುರಿತು ಹೋಟೆಲ್ ಅಸೋಸಿಯೇಷನ್ ಪ್ರಮುಖ ಸಭೆ ನಡೆಸುತ್ತಿದ್ದು, ಹೋಟೆಲ್ ತಿಂಡಿಗಳ ಹೊಸ ದರದ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ ಆಗಲಿದೆ.

bengaluru hotels association meeting about meal price hike gow
Author
First Published Jul 25, 2023, 12:33 PM IST

ಬೆಲೆ ಏರಿಕೆಯ ಕುರಿತು ಹೋಟೆಲ್ ಅಸೋಸಿಯೇಷನ್ ಪ್ರಮುಖ ಸಭೆ ನಡೆಸುತ್ತಿದ್ದು, ಹೋಟೆಲ್ ತಿಂಡಿಗಳ ಹೊಸ ದರದ ಬಗ್ಗೆ ಇಂದಿನ ಸಭೆಯಲ್ಲೇ ನಿರ್ಧಾರವಾಗಲಿದ್ಯಾ ಎಂಬ ಬಗ್ಗೆ ಪ್ರಶ್ನೆ ಮೂಡಿದೆ. ಹೊಸ ದರ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಂಜೆ 6 ಗಂಟೆಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ನೇತೃತ್ವದಲ್ಲಿ  ಹೋಟೆಲ್ ಅಸೋಸಿಯೇಷನ್ ಸಭೆ ಸೇರಲು ನಿರ್ಧರಿಸಿದೆ. ಈಗಾಗಲೇ ಶೇ.10 ರಷ್ಟು ಬೆಲೆಯನ್ನ ಏರಿಕೆ ಮಾಡುವ ಕುರಿತು ಚರ್ಚೆ ನಡೆದಿದೆ. ಆದ್ರೆ  ಶೇ.20  ರಷ್ಟು ಏರಿಕೆ ಮಾಡುವ ಕೆಲ ಹೋಟೆಲ್ ಮಾಲೀಕರು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹೀಗಾಗಿ ಹೋಟೆಲ್ ಮಾಲೀಕರನ್ನು ಒಂದೆಡೆ ಸೇರಿಸಿ ಇಂದು ಸಭೆ ನಡೆಯುತ್ತಿದೆ.

IIT, IIM ಶಿಕ್ಷಣವಿಲ್ಲದೆ ಯಶಸ್ವಿಯಾದ ಭಾರತೀಯ ಉದ್ಯಮಿಗಳಿವರು

ಈ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಸದ್ಯ ಕಾಫಿ ಪೌಡರ್ ಕೆಜಿಗೆ 380 ರೂ ಆಗಿದೆ. ಹಾಲಿನ ದರ ಕೂಡ ಏರಿಕೆಯಾಗಿದೆ. ಹೀಗಾಗಿ ಕಾಫಿ ಹಾಗೂ ಟೀ ಬೆಲೆ 2ರಿಂದ 5ರೂ, ತಿಂಡಿ ತಿನಿಸುಗಳ ದರವನ್ನ 5 ರಿಂದ 10 ರೂ  ಮತ್ತು ಊಟದ ದರ 10ರೂ ರೂಪಾಯಿ ಹೆಚ್ಚಳಕ್ಕೆ ಚಿಂತನೆ ನಡೆದಿದೆ.

ಒಂದು ವೇಳೆ ಇಂದಿನ ಸಭೆಯಲ್ಲಿ ಒಮ್ಮತದ ಒಪ್ಪಿಗೆ ಸಿಕ್ಕರೆ ಆಗಸ್ಟ್ 1ರಿಂದಲೇ ಪರಿಷ್ಕೃತ ದರ ಜಾರಿಗೆ ಬರುವುದು ಬಹುತೇಕ ಖಚಿತವಾಗಿದೆ. ಈ ಎಲ್ಲ ನಿರ್ಧಾರದ ಬಗ್ಗೆ ಸಭೆ ಬಳಿಕ  ಹೋಟೆಲ್ ಅಸೋಸಿಯೇಷನ್  ಸ್ಪಷ್ಟನೆ ನೀಡಲಿದೆ.

ತರಕಾರಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಹುಡುಗನೀಗ 8200 ಕೋಟಿ ರೂ ಆಸ್ತಿಗೆ ಒಡೆಯ!

ಸಭೆಯಲ್ಲಿ ನಗರದ ಎಲ್ಲಾ ಹೋಟೆಲ್ ಮಾಲೀಕರು ಭಾಗಿಯಾಗಲಿದ್ದು, ಎಲ್ಲಾ ಹೋಟೆಲ್ ಮಾಲಿಕರಿಂದ ಶೇ.10 ದರ ಏರಿಕೆಗೆ ಒಮ್ಮತದ ಒಪ್ಪಿಗೆ ನೀಡಿವೆ. ಹೀಗಾಗಿ ಇನ್ನೊಂದು ಸುತ್ತಿನ ಸಭೆ ಬಳಿಕ ಇಂದು ಸಂಜೆ ಅಧಿಕೃತ ಘೋಷಣೆ ಹೊರಬೀಳಲಿದೆ.

Follow Us:
Download App:
  • android
  • ios