BUSINESS
ದೇಶದ ಅತ್ಯಂತ ಯಶಸ್ವಿ ಶಿಕ್ಷಣ ತಂತ್ರಜ್ಞಾನದ ಉದ್ಯಮ ಸೃಷ್ಟಿಸಿದ ವ್ಯಕ್ತಿ ಕೇರಳದ ಕಣ್ಣೂರಿನ ರವೀಂದ್ರನ್. BYJU ಅಪ್ಲಿಕೇಶನ್‌ಗೆ ಮೂಲ ಕಂಪನಿ ಥಿಂಕ್ ಅಂಡ್ ಲರ್ನ್ ಅನ್ನು ಸ್ಥಾಪಿಸಿದರು. ಇವರ ನೆಟ್‌ವರ್ತ್ 25,000 ಕೋಟಿ.
ಭಾರತದಲ್ಲಿ ಕೃಷಿ ಮಾಡುವ ವಿಧಾನವನ್ನು ಬದಲಾಯಿಸಲು ಬಯಸುವ ವ್ಯಕ್ತಿ ಶ್ರೀ ಅಮಿತ್ ಅಗರ್ವಾಲ್, 2016 ರಲ್ಲಿ ಇವರು AgriBazaar.com ನ ಸ್ಥಾಪಿಸಿದರು. ಇವರ ಕಂಪೆನಿ ವರ್ಷಕ್ಕೆ 9,000 ಕೋಟಿ ವ್ಯವಹಾರ ನಡೆಸುತ್ತದೆ.
ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬರನ್ನು ತಲುಪುವ PayTm ನ ಸಂಸ್ಥಾಪಕ. 2010ರಲ್ಲಿ ಪೇಟಿಎಂ ಸ್ಥಾಪಿಸಿದರು. ಅದಕ್ಕೂ ಮುನ್ನ One97 ಕಮ್ಯುನಿಕೇಷನ್ಸ್ ಅನ್ನು 1997 ರಲ್ಲಿ ಸ್ಥಾಪಿಸಿದರು. ಇವರ ಆಸ್ತಿ ಮೌಲ್ಯ 9000 ಕೋಟಿ
ಭಾರತದ ವಾಣಿಜ್ಯೋದ್ಯಮಿಯಾಗಿದ್ದು, OYO ರೂಮ್‌ಗಳ ಸಂಸ್ಥಾಪಕ .ಒಡಿಶಾದ ಬಿಸ್ಸಾಮ್ ಕಟಕ್‌ನ ದೂರದ ಪಟ್ಟಣದ ಹುಡುಗ ಕೇವಲ 18 ನೇ ವಯಸ್ಸಿನಲ್ಲಿOYO ರೂಮ್ಸ್ ಅನ್ನು ಪ್ರಾರಂಭಿಸಿದರು, ನೆಟ್‌ವರ್ತ್ 7253 ಕೋಟಿ.
ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಇದು ಬುಕ್‌ಮೈ ಶೋ ವನ್ನು ಕಾರ್ಯ ನಿರ್ವಹಿಸುತ್ತದೆ. 1999ರಲ್ಲಿ ಬುಕ್‌ಮೈ ಶೋ ಬೆಳಕಿಗೆ ಬಂತು. ಇವರ ನೆಟ್‌ವರ್ತ್ 3000 ಕೋಟಿ.
ಶಶಾಂಕ್ ಎನ್‌ಡಿ ಪ್ರಾಕ್ಟೊ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕ. practo.com ಭಾರತದ ಪ್ರಮುಖ ಇಂಟಿಗ್ರೇಟೆಡ್ ಹೆಲ್ತ್‌ಕೇರ್ ಕಂಪನಿಯಾಗಿದೆ. ಇವರ ನೆಟ್ ವರ್ತ್ 90 ಮಿಲಿಯ್ ಡಾಲರ್
ಕುನಾಲ್ ಶಾ CRED ಸಂಸ್ಥಾಪಕರು. ಇದು ಬೆಂಗಳೂರಿನಲ್ಲಿರುವ ಭಾರತೀಯ ಫಿನ್‌ಟೆಕ್ ಕಂಪನಿಯಾಗಿದೆ. ಇದು ಕ್ರೆಡಿಟ್ ಕಾರ್ಡ್ ಪೇಮೆಂಟ್ ಆ್ಯಪ್ ಆಗಿದೆ. ಇದರ ನೆಟ್‌ವರ್ತ್ 160 ಮಿಲಿಯನ್ ಆಗಿದ್ದು, 393 ಕೋಟಿ ಆದಾಯ ಬರುತ್ತದೆ.