ಬಾಕಿ ಉಳಿದಿರುವ ವಿದ್ಯುತ್ ಬಿಲ್ ಪಾವತಿಗೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಮೋದಿ ಕಿವಿಮಾತು
ತೆಲಂಗಾಣದಲ್ಲಿ ಸ್ಥಾಪನೆಯಾದ ತೇಲುವ ಸೌರ ಸ್ಥಾವರವನ್ನು ಪ್ರಧಾನಿ ಮೋದಿ ಆನ್‌ಲೈನ್ ಮೂಲಕ ಉದ್ಘಾಟಿಸಿದರು. ಈ ವೇಳೆ ಡಿಸ್ಕಾಮ್‌ಗಳಿಗೆ ಹಾಗೂ ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ನೀಡಬೇಕಾದ ಬಾಕಿಯನ್ನು ತೀರಿಸುವಂತೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಪ್ರೋತ್ಸಾಹಿಸಿದರು.
ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಮ್‌ಗಳು) (Discoms) ಮತ್ತು ಉತ್ಪಾದನಾ ಸಂಸ್ಥೆಗಳಿಗೆ (ಜೆನ್‌ಕೋಸ್) (Gencos) ನೀಡಬೇಕಾದ ಪಾವತಿಗಳನ್ನು ಬೇಗನೆ ಮಾಡಲು ರಾಜ್ಯ ಸರ್ಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ವಿದ್ಯುತ್ ಸಚಿವಾಲಯದ ಮಾಹಿತಿಯ ಪ್ರಕಾರ, ಮಾರ್ಚ್ 2022 ರಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (UTs) ಒಟ್ಟಾಗಿ ಸೇರಿ ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ 1 ಟ್ರಿಲಿಯನ್ ಅಂದರೆ 1 ಲಕ್ಷ ಕೋಟಿ ರೂ. ಗೂ ಅಧಿಕ ಬಾಕಿ ಪಾವತಿ ಮಾಡಬೇಕಿದೆ. ಅಲ್ಲದೆ, ಡಿಸ್ಕಾಮ್‌ಗಳಿಗೆ 1.3 ಟ್ರಿಲಿಯನ್ ಅಂದರೆ 1 ಲಕ್ಷ 30 ಸಾವಿರ ಕೋಟಿಗೂ ಅಧಿಕ ಹಣ ಬಾಕಿ ನೀಡಬೇಕಿದೆ ಎಂದೂ ತಿಳಿದುಬಂದಿದೆ. ಪಾವತಿ ವಿಳಂಬದ ಪರಿಣಾಮವಾಗಿ ವಿದ್ಯುತ್ ಕಂಪನಿಗಳು ಹಣವನ್ನು ಕಳೆದುಕೊಳ್ಳುತ್ತವೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.
ಹೆಚ್ಚು ಬಾಕಿ ಉಳಿಸಿಕೊಂಡಿರುವ ರಾಜ್ಯಗಳ ವಿವರ..
ವಿದ್ಯುತ್ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರವು ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ ಗರಿಷ್ಠ ಅಂದರೆ 21,500 ಕೋಟಿ ರೂ. ಬಾಕಿ ನೀಡಬೇಕಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕುಖ್ಯಾತಿ ಹೊಂದಿದೆ. ಅಲ್ಲದೆ, ತಮಿಳುನಾಡು 20,990 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ 10,109 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಮೂರನೇ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ.
ಆಗಸ್ಟ್ 2 ರಿಂದ 15ರವರೆಗೆ ತಿರಂಗ ಬಾವುಟವನ್ನು ನಿಮ್ಮ ಪ್ರೊಫೈಲ್ ಫೋಟೋ ಮಾಡಿಕೊಳ್ಳಬಹುದು: ಮೋದಿ
ಇನ್ನೊಂದೆಡೆ, ಡಿಸ್ಕಾಮ್‌ಗಳಿಗೆ ನೀಡಬೇಕಾದ ಹಣದ ಪೈಕಿ ತೆಲಂಗಾಣ ಹೆಚ್ಚು ಬಾಕಿ ಉಳಿಸಿಕೊಂಡಿದ್ದು, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ತೆಲಂಗಾಣವು ಒಟ್ಟು 11,935 ಕೋಟಿ ರೂ. ನೀಡಬೇಕಿದ್ದರೆ, ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರವು 9,131 ಕೋಟಿ ರೂಪಾಯಿ ಬಾಕಿ ನೀಡಬೇಕಿದೆ. ಅಲ್ಲದೆ, ಆಂಧ್ರಪ್ರದೇಶವು 9,116 ಕೋಟಿ ರೂಪಾಯಿಗಳ ಡಿಸ್ಕಾಮ್ ಬಾಕಿ ನೀಡಬೇಕಿದೆ ಎಂದೂ ವರದಿಗಳು ಹೇಳುತ್ತವೆ.
ತೇಲುವ ಸೌರ ಸ್ಥಾವರ ಉದ್ಘಾಟಿಸಿದ್ದ ಮೋದಿ
ಈ ಮಧ್ಯೆ, ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್‌ನ (ಎನ್‌ಟಿಪಿಸಿ) ರಾಜೀವ್ ಗಾಂಧಿ ಕಂಬೈನ್ಡ್ ಸೈಕಲ್ ಪವರ್ ಪ್ರಾಜೆಕ್ಟ್‌ನ 92 ಮೆಗಾವ್ಯಾಟ್ ಸಾಮರ್ಥ್ಯದ ತೇಲುವ ಸೌರ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದ್ದರು.
ಈ ಯೋಜನೆಯ ಅನುಷ್ಠಾನಕ್ಕೆ 465 ಕೋಟಿ ರೂ. ಖರ್ಚಾಗಿದ್ದು, ತೇಲುವ ರಚನೆಗಳ ಮೇಲೆ ಒಟ್ಟು 2.16 ಲಕ್ಷ ಸೌರ ಫಲಕಗಳನ್ನು ಇರಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಇದು NTPC ಯಿಂದ ಸ್ಥಾಪಿಸಲಾದ ಎರಡನೇ ಅತಿ ದೊಡ್ಡ ತೇಲುವ ಸೌರ ವಿದ್ಯುತ್ ಉತ್ಪಾದನಾ ಘಟಕವಾಗಿದ್ದು ಮತ್ತು ತೆಲಂಗಾಣ ರಾಜ್ಯದ ಅತಿ ದೊಡ್ಡ ಘಟಕವಾಗಿದೆ. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್‌ನ (ಎನ್‌ಟಿಪಿಸಿ) ಕಾಯಂಕುಲಂ ಘಟಕದಲ್ಲಿ ಸ್ಥಾಪಿಸಲಾದ 92-ಮೆಗಾವ್ಯಾಟ್ ತೇಲುವ ಸೌರ ವಿದ್ಯುತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರದ ವಿರುದ್ಧ ಆಗಸ್ಟ್ 5ಕ್ಕೆ ಕಾಂಗ್ರೆಸ್ ದೇಶಾದ್ಯಂತ ಬೃಹತ್ ಪ್ರತಿಭಟನೆ!
'ಆಜಾದಿ ಕಾ ಅಮೃತ ಮಹೋತ್ಸವ'ದ ಭಾಗವಾಗಿ ಕಳೆದ 8 ವರ್ಷಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿನ ಸಾಧನೆಗಳನ್ನು ಪ್ರದರ್ಶಿಸಲು ಆಯೋಜಿಸಲಾದ 'ಉಜ್ವಲ್ ಭಾರತ್ ಉಜ್ವಲ್ ಭವಿಷ್ಯ - ಪವರ್ @2047' ಕಾರ್ಯಕ್ರಮದ ಪರಾಕಾಷ್ಠೆಯನ್ನು ಗುರುತಿಸುವ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ಪ್ರಾರಂಭಿಸಿದರು.