Asianet Suvarna News Asianet Suvarna News

2024-25ನೇ ಸಾಲಿನ ಬಿಬಿಎಂಪಿ ಬಜೆಟ್ ಗಾತ್ರ 12,369 ಕೋಟಿ ರೂ.; ಬೆಂಗಳೂರಿಗೆ ಮತ್ತೆ ಬರಲಿದೆ ಜಾಹೀರಾತು ಹಾವಳಿ

ರಾಜ್ಯದ ಅತ್ಯಂದ ದೊಡ್ಡ ಸ್ಥಳೀಯ ಆಡಳಿತ ಸಂಸ್ಥೆಯಾದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 2024-25ನೇ ಸಾಲಿನ ಬಜೆಟ್‌ ಗಾತ್ರ 12,369 ಕೋಟಿ ರೂ. ಆಗಿದೆ.

BBMP budget 2024 25 size is  Rs 12369 crore and Implementation of new advertising rules sat
Author
First Published Feb 29, 2024, 11:27 AM IST

ಬೆಂಗಳೂರು (ಫೆ.29): ರಾಜ್ಯದ ಅತಿದೊಡ್ಡ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2024-25ನೇ ಸಾಲಿನಲ್ಲಿ ಬರೋಬ್ಬರಿ 12,369 ಕೋಟಿ ರೂ. ಗಾತ್ರದ  ಬಜೆಟ್ ಮಂಡನೆಯನ್ನು ಮಾಡಿದೆ. ಇದರೊಂದಿಗೆ ಹೊಸ ಆದಾಯ ಮೂಲಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಅಳವಡಿಕೆ ನಿಯಮ-2024 ಜಾರಿಗೆ ತರಲು ಮುಂದಾಗಿದೆ.

ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿಯಲ್ಲಿ 243 ವಾರ್ಡ್‌ಗಳಿವೆ. ಆದರೆ, ಇಷ್ಟು ವಾರ್ಡ್‌ಗಳಲ್ಲಿ ಸಾರ್ವಜನಿಕರ ಕಷ್ಟ ಕೇಳಲು ಕಳೆದ 4 ವರ್ಷಗಳಿಂದ ಒಬ್ಬನೇ ಒಬ್ಬ ಕಾರ್ಪೋರೇಟರ್ ಕೂಡ ಇಲ್ಲ. ಆದರೆ, ನಾಲ್ಕು ವರ್ಷಗಳಿಂದ ಐಎಎಸ್‌ ಅಧಿಕಾರಿಗಳು ಕುಳಿತುಕೊಂಡು ಆಡಳಿತ ಮಾಡುತ್ತಿದ್ದು, ಈ ಬಾರಿ ಬೆಂಗಳೂರಿನ ಅಭಿವೃದ್ಧಿಗೆ 12,369 ಕೋಟಿ ರೂ. ಮೊತ್ತದ ಬೃಹತ್ ಬಜೆಟ್‌ ಅನ್ನು ಮಂಡಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಇಟ್ಟಿರುವ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆ ತರುವಂತಹ ಬಿಬಿಎಂಪಿ ಹೊಸ ಜಾಹೀರಾತು ನಿಯಮ-2024 ಜಾರಿಗೆ ತರಲು ಮುಂದಾಗಿದೆ. ಈ ಮೂಲಕ 500 ಕೋಟಿ ರೂ. ಆದಾಯ ಗಳಿಸಲು ತೀರ್ಮಾನಿಸಿದೆ.

ಬೆಂಗಳೂರಲ್ಲಿ ವಾಣಿಜ್ಯೋದ್ಯಮಗಳ ಮೇಲೆ ಶೇ.60 ಕನ್ನಡ ಭಾಷೆಯುಳ್ಳ ನಾಮಫಲಕ ಅಳವಡಿಕೆಗೆ 2 ವಾರ ಗಡುವು ವಿಸ್ತರಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಸರ್. ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ಗುರುವಾರ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಅಧ್ಯಕ್ಷತೆ ಹಾಗೂ  ಮುಖ್ಯ ಆಯುಕ್ತ ತುಷಾರ್ ಗಿರಿನಾಥ್  ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ  ಶಿವಾನಂದ ಕಲಕೇರಿ ಮಂಡನೆ ಮಾಡಿದರು. ಬಿಬಿಎಂಪಿ 2024-25ನೇ ಸಾಲಿನಲ್ಲಿ 12369.46 ಕೋಟಿ ಮೊತ್ತದ ಬೃಹತ್ ಬಜೆಟ್ ಮಂಡನೆ ಮಾಡಲಾಗಿದೆ. ಎಲ್ಲ ಮೂಲಗಳಿಂದ 12,369.50 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಸಾರ್ವಜನಿಕ ಅಭಿವೃದ್ಧಿ ಕಾಮಾಗಾರಿಗಳಿಗೆ ಅತೀಹೆಚ್ಚು ಹಣ ಮೀಸಲು ಇಡಲಾಗಿದೆ.

ಸಾರ್ವಜನಿಕ ಅಭಿವೃದ್ಧಿ ಕಾಮಾಗಾರಿಗಳಿಗೆ ಬರೋಬ್ಬರಿ 6,661 ಕೋಟಿ ರೂ. ಹಣವನ್ನು ಮೀಸಲು ಇಡಲಾಗಿದೆ.

  • ಬಿಬಿಎಂಪಿ ಕಾರ್ಯಚಾರಣೆ ಹಾಗೂ ನಿರ್ವಾಹಣೆ ವೆಚ್ಚಕ್ಕೆ - 2,271 ಕೋಟಿ ರೂ. ಮೀಸಲಿಡಲಾಗಿದೆ. 
  • ಬಿಬಿಎಂಪಿ ಸಿಬ್ಬಂದಿ ವೆಚ್ಚಕ್ಕಾಗಿ 1,607 ಕೋಟಿ ರೂ. 
  • ಬಿಬಿಎಂಪಿ ಆಡಳಿತ ವೆಚ್ಚಕ್ಕಾಗಿ - 389 ಕೋಟಿ ರೂ. 
  • ಠೇವಣಿ ಮತ್ತು ಕರ ಮತು ಪಾವತಿ/ವೆಚ್ಚ- 527 ಕೋಟಿ ರೂ. ಮೀಸಲು ಇಡಲಾಗಿದೆ.

ಪಶು ಚಿಕಿತ್ಸಾಲಯಕ್ಕೆ ಸೇರಿದ 2 ಎಕರೆ ಜಾಗ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ನೀಡಿದ ರಾಜ್ಯ ಸರ್ಕಾರ!

ಇನ್ನು ಆದಾಯ ನಿರೀಕ್ಷೆಯ ಸಿಂಹಪಾಲು ಆಸ್ತಿ ತೆರಿಗೆಯಿಂದ ವಸೂಲಿ ಮಾಡಲು ನಿರ್ಧರಿಸಲಾಗಿದೆ.
ಆಸ್ತಿ ತೆರಿಗೆಯಿಂದ ಆದಾಯ ನಿರೀಕ್ಷೆ-  4,470 ಕೋಟಿ ರೂ.
ತೆರೆಗೇತರ ಆದಾಯ ನಿರೀಕ್ಷೆ-  3097.91 ಕೋಟಿ ರೂ.
ರಾಜ್ಯ ಸರ್ಕಾರದಿಂದ ನಿರೀಕ್ಷೆ- 3589.58 ಕೋಟಿ ರೂ.
ಕೇಂದ್ರ ಸರ್ಕಾರದಿಂದ ನಿರೀಕ್ಷೆ- 488 ಕೋಟಿ ರೂ‌.
ಅಸಧಾರಣ ಆದಾಯ ನಿರೀಕ್ಷೆ- 724 ಕೋಟಿ  ರೂ. ಎಂದು ನಿರೀಕ್ಷಿಸಲಾಗಿದೆ.

Follow Us:
Download App:
  • android
  • ios