Asianet Suvarna News Asianet Suvarna News

ಜಿಎಸ್‌ಟಿ ಸ್ತರ, ದರ ಬದಲಿಗೆ ಒಮ್ಮತವಿಲ್ಲ: ಬೊಮ್ಮಾಯಿ ನೇತೃತ್ವದಲ್ಲಿ ಹಣಕಾಸು ಸಚಿವರ ಸಭೆ ವಿಫಲ

*   ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ಸ್ತರ ಬದಲಾವಣೆಯ ಕುರಿತು ಚರ್ಚೆ
*  ಮಂಡಳಿ ಸಭೆ ಜೂ.28,29ರಂದು ಶ್ರೀನಗರದಲ್ಲಿ ನಡೆಯಲಿದೆ
*  ಸಮಿತಿಯ ಕೆಲವು ಸದಸ್ಯರಿಂದ ತೆರಿಗೆ ಸ್ಲಾಬ್‌ ಮತ್ತು ದರ ಬದಲಾಯಿಸುವುದಕ್ಕೆ ವಿರೋಧ 
 

Basavaraj Bommai Led Finance Minister Meeting Failed about GST grg
Author
Bengaluru, First Published Jun 18, 2022, 12:00 AM IST

ನವದೆಹಲಿ(ಜೂ.18):   ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಹಣಕಾಸು ಸಚಿವರ ತಂಡವು ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ಸ್ತರ ಬದಲಾವಣೆಯ ಕುರಿತು ಚರ್ಚಿಸಲು ನಿನ್ನೆ(ಶುಕ್ರವಾರ) ನಡೆಸಿದ ಸಭೆ ಒಮ್ಮತಕ್ಕೆ ಬರಲು ವಿಫಲವಾಗಿದೆ. ಈ ಸಮಿತಿಯ ಕೆಲವು ಸದಸ್ಯರು ತೆರಿಗೆ ಸ್ಲಾಬ್‌ ಮತ್ತು ದರವನ್ನು ಬದಲಾಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಕಳೆದ ನ.20ರಂದು ನಡೆದ ಸಭೆಯಲ್ಲಿ ಒಮ್ಮತಕ್ಕೆ ಬರಲಾದ ವಿಷಯಗಳ ಕುರಿತ ಯಥಾಸ್ಥಿತಿಯ ವರದಿಯನ್ನು ಕೇಂದ್ರೀಯ ಜಿಎಸ್ಟಿ ಮಂಡಳಿಗೆ ಸಲ್ಲಿಸಲು ನಿರ್ಧರಿಸಲಾಗಿದೆ. ಮಂಡಳಿ ಸಭೆ ಜೂ.28,29ರಂದು ಶ್ರೀನಗರದಲ್ಲಿ ನಡೆಯಲಿದೆ.

ಮೇನಲ್ಲಿ ಭರ್ಜರಿ 1.41 ಲಕ್ಷ ಕೋಟಿ ರು. ಜಿಎಸ್‌ಟಿ ಆದಾಯ!

ಹಾಲಿ ಶೇ.5, ಶೇ.12, ಶೇ,18 ಮತ್ತು ಶೇ.28ರಷ್ಟಿರುವ ತೆರಿಗೆ ಸ್ತರವನ್ನು ಶೇ.8, ಶೇ.18, ಮತ್ತು ಶೇ.28ಕ್ಕೆ ಬದಲಾಯಿಸುವ ಪ್ರಸ್ತಾಪ ಸಮಿತಿ ಮುಂದಿತ್ತು. ಜೊತೆಗೆ ಹಾಲಿ ತೆರಿಗೆ ಪಟ್ಟಿಯಲ್ಲಿ ಇರದ ಕೆಲ ವಸ್ತುಗಳನ್ನು ತೆರಿಗೆ ಪಟ್ಟಿಗೆ ಸೇರಿಸುವ, ಕೆಲ ವಸ್ತುಗಳನ್ನು ಮೇಲಿನ ತೆರಿಗೆ ಸ್ತರಕ್ಕೆ ಏರಿಸುವ ಪ್ರಸ್ತಾಪವೂ ಮುಂದಿತ್ತು.
 

Follow Us:
Download App:
  • android
  • ios