ರಾಜ್ಯದಲ್ಲಿ ಬ್ಯಾಂಕುಗಳ ಕೆಲಸದ ಅವಧಿಯನ್ನು ಕಡಿತಗೊಳಿಸಲಾಗಿದೆ. ಕೊರೋನಾ ಮಹಾಮಾರಿ ಅಟ್ಟಹಾಸ ಹಿನ್ನೆಲೆಯಲ್ಲಿ ಕೆಲಸದ ಅವಧಿಯಲ್ಲಿ ಕಡಿಮೆ ಮಾಡಲಾಗಿದೆ.  ಈ ಆದೇಶ ಏ.22ರಿಂದ ಮೇ 31ರ ವರೆಗೆ ಅನ್ವಯವಾಗಲಿದೆ. 

ಬೆಂಗಳೂರು (ಏ.24): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವುದರಿಂದ ಎಲ್ಲಾ ಬ್ಯಾಂಕುಗಳ ವ್ಯವಹಾರಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಆದೇಶ ಏ.22ರಿಂದ ಮೇ 31ರ ವರೆಗೆ ಅನ್ವಯವಾಗಲಿದೆ. ಇಲ್ಲಿಯವರೆಗೂ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ವ್ಯಾವಹಾರಿಕ ಮತ್ತು ಮಧ್ಯಾಹ್ನ 2ರಿಂದ ಸಂಜೆ 4ರ ವರೆಗೆ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿದ್ದವು.

ಮಂಡ್ಯ ಗ್ರಾಹಕರೇ ಗಮನಿಸಿ : ಬ್ಯಾಂಕಿಂಗ್ ಸೇವೆ ಸಮಯ ಬದಲು

ಆದರೆ, ಕೊರೋನಾ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿ ಹಾಜರಾತಿಯನ್ನು ಶೇ.50ಕ್ಕೆ ಇಳಿಸಿರುವುದರಿಂದ ತಾತ್ಕಾಲಿಕವಾಗಿ ಆದೇಶ ಹೊರಡಿಸಲಾಗಿದೆ. ಬ್ಯಾಂಕ್‌ ನೌಕರರ ಆರೋಗ್ಯದ ದೃಷ್ಟಿಯಿಂದ ವ್ಯವಹಾರದ ಸಮಯವನ್ನು ಎರಡು ಗಂಟೆ ಕಡಿತಗೊಳಿಸಲಾಗಿದೆ ಎಂದು ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ತಿಳಿಸಿದೆ.