Bank Holidays: ಫೆಬ್ರವರಿಯಲ್ಲಿ 12 ದಿನ ಬ್ಯಾಂಕ್ ಕ್ಲೋಸ್; ಹೀಗಿದೆ ನೋಡಿ ರಜಾಪಟ್ಟಿ
*ಆರ್ ಬಿಐ ಪಟ್ಟಿಯಲ್ಲಿರೋ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ.
*ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ವ್ಯತ್ಯಯವಿಲ್ಲ
*ಆರ್ ಬಿಐ ಬ್ಯಾಂಕುಗಳಿಗೆ ಸಂಬಂಧಿಸಿ ರಜಾಪಟ್ಟಿ ಪ್ರಕಟಿಸುತ್ತದೆ
Businss Desk:ಬ್ಯಾಂಕಿಗೆ (Bank) ಪ್ರತಿ ತಿಂಗಳು ಕೆಲವು ದಿನಗಳ ರಜೆಯಿರುತ್ತದೆ (Holidays).ಇನ್ನೇನೂ ಫೆಬ್ರವರಿ (February) ತಿಂಗಳಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಫೆಬ್ರವರಿಯಲ್ಲಿ ಯಾವೆಲ್ಲ ದಿನಗಳು ಬ್ಯಾಂಕಿಗೆ ರಜೆಯಿರುತ್ತದೆ ಎಂಬ ಮಾಹಿತಿ ಹೊಂದಿರೋದು ಉತ್ತಮ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರೋ ರಜಾದಿನಗಳ ಪಟ್ಟಿಯಲ್ಲಿ (Holiday List) ಫೆಬ್ರವರಿ ತಿಂಗಳಲ್ಲಿ ಬ್ಯಾಂಕುಗಳು (Banks) 12 ದಿನಗಳ ಕಾಲ ಮುಚ್ಚಿರಲಿವೆ.
ಆರ್ ಬಿಐ (RBI) ಪಟ್ಟಿಯಲ್ಲಿರೋ ಎಲ್ಲ ರಜೆಗಳು (Holidays) ಎಲ್ಲ ರಾಜ್ಯಗಳಿಗೂ (States) ಅನ್ವಯಿಸೋದಿಲ್ಲ. ಹೀಗಾಗಿ ಆಯಾ ರಾಜ್ಯಕ್ಕೆ ಅನ್ವಯಿಸೋ ರಜೆಗಳನ್ನು ಮಾತ್ರ ಪರಿಗಣಿಸಬೇಕಾಗುತ್ತದೆ. ಸಾರ್ವಜನಿಕ ಹಾಗೂ ಗೆಜೆಟೆಡ್ ರಜಾ ದಿನಗಳು ಮಾತ್ರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಫೆಬ್ರವರಿಯಲ್ಲಿ ಒಟ್ಟು 6 ದಿನಗಳ ರಜೆಯಿದೆ. ಇನ್ನು ಎಲ್ಲ ಭಾನುವಾರ (Sunday)ಬ್ಯಾಂಕುಗಳಿಗೆ ರಜೆಯಿರುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ (Saturday)ಕೂಡ ಬ್ಯಾಂಕ್ ಗಳು ಕಾರ್ಯನಿರ್ವಹಿಸೋದಿಲ್ಲ. ಹೀಗಾಗಿ ಭಾನುವಾರಗಳು, ಎರಡನೇ ಹಾಗೂ ನಾಲ್ಕನೇ ಶನಿವಾರಗಳನ್ನು ಸೇರಿಸಿದ್ರೆ ಮುಂದಿನ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಆದ್ರೆ ಎಟಿಎಂ (ATM),ಇಂಟರ್ನೆಟ್ ಬ್ಯಾಂಕಿಂಗ್ (Internet Banking), ನೆಟ್ ಬ್ಯಾಂಕಿಂಗ್ (Net banking) ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗೋದಿಲ್ಲ.
Bank Rules : ಮೃತ ವ್ಯಕ್ತಿ ಬ್ಯಾಂಕ್ ಖಾತೆಯಲ್ಲಿರುವ ಹಣ ಪಡೆಯೋದು ಹೇಗೆ?
ರಜೆಗಳ ಪಟ್ಟಿ
ಫೆಬ್ರವರಿ 2: ಸೋನಮ್ ಲೊಚ್ಚರ್ (ಗ್ಯಾಂಗ್ಟಾಕ್ ನಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ)
ಫೆಬ್ರವರಿ 5: ಸರಸ್ವತಿ ಪೂಜಾ/ಶ್ರೀಪಂಚಮಿ/ಬಸಂತ್ ಪಂಚಮಿ (ಅಗರ್ತಲಾ, ಭುವನೇಶ್ವರ್, ಕೋಲ್ಕತ್ತ)
ಫೆಬ್ರವರಿ 6: ಭಾನುವಾರ
ಫೆಬ್ರವರಿ 12: ಎರಡನೇ ಶನಿವಾರ
ಫೆಬ್ರವರಿ 13: ಭಾನುವಾರ
ಫೆಬ್ರವರಿ 15: ಮೊಹಮ್ಮದ್ ಹಜರತ್ ಅಲಿ ಜನ್ಮದಿನ /ಲೂಯಿಸ್ ನಗೈ ನೀ (ಇಂಫಾಲ್, ಕಾನ್ಪುರ, ಲಖ್ನೋಗಳಲ್ಲಿ ಬ್ಯಾಂಕುಗಳಿಗೆ ರಜೆ)
ಫೆಬ್ರವರಿ 16: ಗುರು ರವಿದಾಸ್ ಜಯಂತಿ (ಛಂಡೀಗಢದಲ್ಲಿ ಬ್ಯಾಂಕಿಗೆ ರಜೆ)
ಫೆಬ್ರವರಿ18: ಡೋಲ್ಜತ್ರ (ಕೋಲ್ಕತ್ತದಲ್ಲಿ ಬ್ಯಾಂಕುಗಳಿಗೆ ರಜೆ)
ಫೆಬ್ರವರಿ19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೆಲಾಪುರ, ಮುಂಬೈ ಹಾಗೂ ನಾಗ್ಪುರದಲ್ಲಿ ಬ್ಯಾಂಕುಗಳಿಗೆ ರಜೆ)
ಫೆಬ್ರವರಿ 20: ಭಾನುವಾರ
ಫೆಬ್ರವರಿ 26: ನಾಲ್ಕನೇ ಶನಿವಾರ
ಫೆಬ್ರವರಿ 27: ಭಾನುವಾರ
ಆರ್ ಬಿಐ ಬ್ಯಾಂಕುಗಳಿಗೆ ಸಂಬಂಧಿಸಿ ರಜಾಪಟ್ಟಿಯನ್ನು ಪ್ರಕಟಿಸುತ್ತದೆ. ಆರ್ ಬಿಐ ರಜಾದಿನಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.
1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ
2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು
3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು
Grocery Delivery 1800 ನಗರಗಳಿಗೆ ಸೇವೆ ವಿಸ್ತರಿಸಿದ ಫ್ಲಿಪ್‌ಕಾರ್ಟ್ ಗ್ರಾಸರಿ!
ಫೆ. 23 ಮತ್ತು 24 ಬ್ಯಾಂಕ್ ನೌಕರರ ಮುಷ್ಕರ!
ಕೇಂದ್ರ ಸರ್ಕಾರದ ನೌಕರ ವಿರೋಧಿ ನೀತಿಗಳನ್ನು ಖಂಡಿಸಿ ಬ್ಯಾಂಕ್ ನೌಕರರ ಸಂಘಟನೆಗಳು ಫೆಬ್ರವರಿ 23 ಮತ್ತು 24ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಅಖಿಲಾ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (AIBEA)ಕೇಂದ್ರೀಯ ಸಮಿತಿ ಕೂಡ ಮುಷ್ಕರದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದೆ. ಹೀಗಾಗಿ ಫೆ.23 ಹಾಗೂ 24ರಂದು ಕೂಡ ಬ್ಯಾಂಕುಗಳು ಕಾರ್ಯನಿರ್ವಹಿಸೋದು ಅನುಮಾನ. ಹೀಗಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಬ್ಯಾಂಕುಗಳು ನಾಲ್ಕು ದಿನಗಳ ಕಾಲ ಮುಚ್ಚಿರಲಿವೆ. ಫೆ.23 ಹಾಗೂ 24ರಂದು ಮುಷ್ಕರ, ಫೆ. 26 ಹಾಗೂ 27ರಂದು ಶನಿವಾರ ಹಾಗೂ ಭಾನುವಾರದ ಹಿನ್ನೆಲೆಯಲ್ಲಿ ರಜೆಯಿರುತ್ತದೆ. ಫೆಬ್ರವರಿ ತಿಂಗಳಲ್ಲಿ ಬ್ಯಾಂಕು ಕೆಲಸಗಳನ್ನಿಟ್ಟುಕೊಂಡಿದ್ರೆ ರಜಾಪಟ್ಟಿಯನ್ನು ಗಮನಿಸಿಕೊಳ್ಳಿ. ಇಲ್ಲವಾದ್ರೆ ಬ್ಯಾಂಕಿಗೆ ಹೋಗಿ ಸುಮ್ಮನೆ ಹಿಂತಿರುಗಬೇಕಾಗುತ್ತದೆ.