ಈ ತಿಂಗಳಲ್ಲಿ ಉಳಿದಿರೋದೆ 12 ದಿನ, ಅದರಲ್ಲಿ 10 ದಿನ ಬ್ಯಾಂಕುಗಳಿಗೆ ರಜೆ!

ಅಕ್ಟೋಬರ್ ಅಂದ್ರೇನೆ ಸಾಲು ಸಾಲು ಹಬ್ಬಗಳು. ಹೀಗಾಗಿ ಈ ತಿಂಗಳು ರಜೆ ಕೂಡ ಜಾಸ್ತಿ. ಅದರಲ್ಲೂ ಬ್ಯಾಂಕ್ ಗಳಿಗೆ ಒಟ್ಟು 16 ದಿನಗಳ ರಜೆಯಿದೆ.ಇನ್ನು ಈ ತಿಂಗಳಲ್ಲಿ ಉಳಿದಿರೋ 12 ದಿನಗಳಲ್ಲಿ 10 ದಿನ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. 

Banks To Remain Closed For 10 Days In Remaining 13 Days Of October 2023 anu

ನವದೆಹಲಿ (ಅ.19): ಅಕ್ಟೋಬರ್ ತಿಂಗಳು ಮುಗಿಯಲು ಇನ್ನು ಬರೀ 12 ದಿನಗಳಷ್ಟೇ ಬಾಕಿ ಉಳಿದಿವೆ. ನವರಾತ್ರಿ ಸಂಭ್ರಮ ಈಗಾಗಲೇ ಪ್ರಾರಂಭವಾಗಿದೆ. ಈ ನಡುವೆ ನೀವು ಈ ತಿಂಗಳೊಳಗೆ ಮಾಡಿ ಮುಗಿಸಲೇಬೇಕಾದ ಯಾವುದಾದರೂ ಬ್ಯಾಂಕ್ ಸಂಬಂಧಿ ಕೆಲಸಗಳನ್ನು ಹೊಂದಿದ್ದರೆ, ಒಂದು ವಿಚಾರವನ್ನು ನೀವು ಗಮನಿಸೋದು ಅಗತ್ಯ. ಅದೇ ಬ್ಯಾಂಕ್ ರಜೆ. ಉಳಿದ 12 ದಿನಗಳಲ್ಲಿ 8 ದಿನಗಳ ಕಾಲ ಬ್ಯಾಂಕಿಗೆ ರಜೆಯಿರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿ ತಿಂಗಳಿಗೆ ಸಂಬಂಧಿಸಿ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಅಕ್ಟೋಬರ್ ತಿಂಗಳಲ್ಲಿ ಇನ್ನೂ 10 ರಜೆಗಳು ಬಾಕಿ ಉಳಿದಿವೆ. ದುರ್ಗಾ ಪೂಜೆ, ದಸರಾ ಹಾಗೂ ಇತರ ಹಬ್ಬಗಳು ಹಾಗೂ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬ್ಯಾಂಕಿಗೆ ರಜೆಯಿದೆ. ಇನ್ನು ಆರ್ ಬಿಐ ರಜಾಪಟ್ಟಿಯಲ್ಲಿರುವ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಆಯಾ ಪ್ರದೇಶದ ಆಚರಣೆಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. 
ಇನ್ನು ಬ್ಯಾಂಕಿಗೆ ರಜೆಯಿದ್ದರೂ ಎಟಿಎಂ ಹಾಗೂ ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮಾಡಲೇಬೇಕಾದ ಕೆಲಸಗಳಿದ್ರೆ ಮುಂದೂಡುವುದು ಉತ್ತಮ. 

ಮುಂದಿರುವ ಬ್ಯಾಂಕ್ ರಜೆಗಳು ಹೀಗಿವೆ:
1. ಅಕ್ಟೋಬರ್ 21: ದುರ್ಗಾ ಪೂಜೆ (ಮಹಾ ಸಪ್ತಮಿ) ತ್ರಿಪುರಾ, ಅಸ್ಸಾಂ, ಮಣಿಪುರ ಹಾಗೂ ಬೆಂಗಾಲ್ ನಲ್ಲಿ ಬ್ಯಾಂಕಿಗೆ ರಜೆ.
2.ಅಕ್ಟೋಬರ್ 22: ಭಾನುವಾರ 
3. ಅಕ್ಟೋಬರ್ 23: ಮಹಾನವಮಿ, ಆಯುಧ ಪೂಜೆ, ದುರ್ಗಾ ಪೂಜೆ, ವಿಜಯ ದಶಮಿ (ತ್ರಿಪುರಾ, ಕರ್ನಾಟಕ, ಒಡಿಶಾ, ತಮಿಳುನಾಡು, ಅಸ್ಸಾಂ, ಆಂಧ್ರ ಪ್ರದೇಶ, ಕಾನ್ಪುರ, ಕೇರಳ, ಜಾರ್ಖಂಡ್ ಹಾಗೂ ಬಿಹಾರದಲ್ಲಿ ರಜೆ)
4.ಅಕ್ಟೋಬರ್ 24: ದಸರಾ (ವಿಜಯದಶಮಿ), ದುರ್ಗಾ ಪೂಜೆ (ಆಂಧ್ರ ಪ್ರದೇಶ ಹಾಗೂ ಮಣಿಪುರ ಹೊರತುಪಡಿಸಿ ಇತರ ಎಲ್ಲ ರಾಜ್ಯಗಳಲ್ಲೂ ಬ್ಯಾಂಕ್ ಕ್ಲೋಸ್ ಆಗಿರುತ್ತದೆ).
5.ಅಕ್ಟೋಬರ್ 25: ದುರ್ಗಾ ಪೂಜೆ (ಸಿಕ್ಕಿಂನಲ್ಲಿ ರಜೆ)
6. ಅಕ್ಟೋಬರ್ 26: ದುರ್ಗಾ ಪೂಜೆ (ಸಿಕ್ಕಿಂ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ಗಳು ಕ್ಲೋಸ್ )
7.ಅಕ್ಟೋಬರ್ 27: ದುರ್ಗಾ ಪೂಜೆ (ಸಿಕ್ಕಿಂನಲ್ಲಿ ಬ್ಯಾಂಕಿಗೆ ರಜೆ)
8. ಅಕ್ಟೋಬರ್ 28: ಲಕ್ಷ್ಮೀ ಪೂಜೆ, ಎರಡನೇ ಶನಿವಾರ (ಪಶ್ಚಿಮ ಬಂಗಾಳದಲ್ಲಿ ಬ್ಯಾಂಕಿಗೆ ರಜೆ. ಉಳಿದೆಡೆ ಕೂಡ ರಜೆ)
9.ಅಕ್ಟೋಬರ್ 29: ಭಾನುವಾರ
10.ಅಕ್ಟೋಬರ್ 31: ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮದಿನ (ಗುಜರಾತ್ ನಲ್ಲಿ ಬ್ಯಾಂಕಿಗೆ ರಜೆ)

ಸ್ವಿಸ್‌ ಬ್ಯಾಂಕ್‌ ಕಪ್ಪು ಕುಳಗಳ 5ನೇ ಪಟ್ಟಿ ಭಾರತಕ್ಕೆ ಹಸ್ತಾಂತರ

ವಾರಂತ್ಯದ ರಜೆಗಳು ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳು ಕಾರ್ಯನಿರ್ವಹಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. 

ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಂದ ಹಣದುಬ್ಬರ ಹತ್ತಿಕ್ಕಲು ಬಾಂಡ್‌

ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು (Accounts Closing Holidays). ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks), ಕೋಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regional banks) ಅನ್ವಯಿಸಲಿವೆ.
 

Latest Videos
Follow Us:
Download App:
  • android
  • ios