Asianet Suvarna News Asianet Suvarna News

ಗ್ರಾಹಕರಿಗೆ ಗುಡ್‌ ನ್ಯೂಸ್: ATMನಲ್ಲಿ ಹಣ ಇಲ್ಲದಿದ್ರೆ ಬ್ಯಾಂಕ್‌ಗಳಿಗೆ ದಂಡ!

ಎಟಿಎಂನಲ್ಲಿ ಹಣ ಇಲ್ಲದಿದ್ರೆ ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡ!| ಎಟಿಎಂಗೆ ಹಣ ಹಾಕಲು ಉದಾಸೀನತೆ ತೋರುವ ಬ್ಯಾಂಕ್‌ಗೆ ಬಿಸಿ

Banks to pay penalty if ATMs run out of cash for more than 3 hours
Author
Bangalore, First Published Jun 15, 2019, 11:11 AM IST

ನವದೆಹಲಿ[ಜೂ.15]: ಕನಿಷ್ಠ ಬ್ಯಾಲೆನ್ಸ್‌ ಇಡದಿದ್ದರೆ ಗ್ರಾಹಕರ ಮೇಲೆ ಬ್ಯಾಂಕ್‌ಗಳು ದಂಡ ವಿಧಿಸುತ್ತಿರುವ ಹೊತ್ತಿನಲ್ಲೇ, 3 ಗಂಟೆಗಳಿಗಿಂತಲೂ ಹೆಚ್ಚು ಹೊತ್ತು ಎಟಿಎಂಗಳಲ್ಲಿ ಹಣವಿಲ್ಲದೆ ಹೋದರೆ, ಇದಕ್ಕೆ ಬ್ಯಾಂಕ್‌ಗಳನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ. ಅಲ್ಲದೆ, ಬ್ಯಾಂಕ್‌ಗಳ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ ಎನ್ನಲಾಗಿದೆ.

ಮಕ್ಕಳ ಭವಿಷ್ಯಕ್ಕೆ ಸೇವಿಂಗ್ಸ್ ಮಾಡ್ಲಿಕ್ಕೆ ಇವೆ ನೂರಾರು ದಾರಿ...

ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳ ಎಟಿಎಂಗಳಲ್ಲಿ ಹಣ ಇಲ್ಲದೆಯೇ ಜನರು ಪರದಾಡುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರ್‌ಬಿಐ, ಜನರಿಗೆ ತೊಂದರೆಯಾಗದಂತೆ ಎಟಿಎಂಗಳು ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಆದರೆ, ಹಣ ಹಾಕದೆ ಉದಾಸೀನತೆ ಮೆರೆಯುವ ಬ್ಯಾಂಕ್‌ಗಳ ಮೇಲೆ ಎಷ್ಟುಪ್ರಮಾಣದ ದಂಡ ವಿಧಿಸಲಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿಲ್ಲ.

ಕಾರ್ಮಿಕ ವರ್ಗಕ್ಕೆ ಕೇಂದ್ರದ ಭರ್ಜರಿ ಆಫರ್‌

ಎಟಿಎಂಗಳಲ್ಲಿ ಇನ್ನೂ ಎಷ್ಟುಪ್ರಮಾಣದ ಉಳಿದಿದೆ ಎಂಬ ಮಾಹಿತಿಯನ್ನು ಆಯಾ ಎಟಿಎಂಗಳಿಗೆ ಸೇರಿದ ಬ್ಯಾಂಕ್‌ಗಳಿಗೆ ನೀಡುವ ಸೆನ್ಸಾರ್‌ಗಳನ್ನು ಎಟಿಎಂಗಳಲ್ಲಿ ಅಳವಡಿಸಲಾಗಿರುತ್ತದೆ. ಆದರೆ, ಕೆಲವೊಮ್ಮೆ ಬ್ಯಾಂಕ್‌ಗಳ ಉದಾಸೀನತೆಯಿಂದಾಗಿ ಎಟಿಎಂಗಳು ಹೆಚ್ಚು ಹೊತ್ತು ಹಣವಿಲ್ಲದೆ ಉಳಿದುಬಿಡುತ್ತವೆ. ಇಂಥ ಸಂದರ್ಭದಲ್ಲಿ ಗ್ರಾಮೀಣ ಜನರು ಬ್ಯಾಂಕ್‌ ಉದ್ಯೋಗಿಗಳ ಹತ್ತಿರ ಹೋಗಿ ಹೆಚ್ಚುವರಿ ಹಣವನ್ನು ನೀಡಿ ತಮ್ಮ ವಹಿವಾಟು ಪೂರ್ಣಗೊಳಿಸುವ ಅನಿವಾರ್ಯತೆಗೆ ಸಿಲುಕುತ್ತಾರೆ.

Follow Us:
Download App:
  • android
  • ios