ಬೆಂಗಳೂರು(ಸೆ.20):  ಬ್ಯಾಂಕ್‌ ಮುಷ್ಕರ ಹಾಗೂ ಸಾಲು ಸಾಲು ರಜೆಯ ಪರಿಣಾಮ,  ಬ್ಯಾಂಕ್’ಗಳಿಗೆ ರಜೆ ಇರುವುದರಿಂದ ಬ್ಯಾಂಕಿಂಗ್ ವ್ಯವಹಾಸರಗಳಿಗೆ ಅಡಚಣೆಯುಂಟಾಗುವ ಸಾಧ್ಯತೆ ಇದೆ.

ಪ್ರಮುಖವಾಗಿ ಚೆಕ್‌ ಕ್ಲಿಯರೆನ್ಸ್‌, ನಗದು-ಜಮೆ ಸೇರಿದಂತೆ  ಇತರ ಬ್ಯಾಂಕಿಂಗ್‌ ವ್ಯವಹಾರಗಳಿಗೆ ಬ್ರೇಕ್ ಬೀಳಲಿದ್ದು, ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೂ ತೊಡಕುಂಟಾಗುವ ಸಾಧ್ಯತೆ ಇದೆ.

ಸೆಪ್ಟೆಂಬರ್‌ 26, 27 ರಂದು ಬ್ಯಾಂಕ್‌ ಮುಷ್ಕರ ಇರಲಿದ್ದು, ಸೆ. 28, 29 ಕ್ರಮವಾಗಿ ನಾಲ್ಕನೇ ಶನಿವಾರ ಹಾಗೂ ಭಾನುವಾರ ಬರಲಿದೆ.

ಅಲ್ಲದೇ ಸೆ. 30 ಬ್ಯಾಂಕ್‌ ವ್ಯವಹಾರದ ಅರ್ಧ ವಾರ್ಷಿಕ ದಿನವಾಗಿರುವುದರಿಂದ . ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಿದರೂ ಗ್ರಾಹಕರಿಗೆ ಯಾವುದೇ ಸೇವೆ ಲಭ್ಯವಿರುವುದಿಲ್ಲ.


ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ

ಸೆ.26, 27: ಬ್ಯಾಂಕ್‌ ಮುಷ್ಕರ

ಸೆ.28: ನಾಲ್ಕನೇ ಶನಿವಾರ

ಸೆ. 29: ಭಾನುವಾರ

ಸೆ.30: ಬ್ಯಾಂಕ್‌ ಅರ್ಧ ವಾರ್ಷಿಕ ದಿನ