Asianet Suvarna News Asianet Suvarna News

ಸಾಲದ ಬಡ್ಡಿದರ ಏರಿಕೆ ಮಾಡಿದ ಬ್ಯಾಂಕುಗಳು; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಇತ್ತೀಚೆಗೆ ಹೆಚ್ಚಳ ಮಾಡಿದೆ. ಇದರ ಬೆನ್ನಲ್ಲೇ ಎಸ್ ಬಿಐ, ಐಸಿಐಸಿಐ, ಇಂಡಿಯನ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡಿವೆ. ಈ ಬ್ಯಾಂಕುಗಳು ಎಷ್ಟು ಬಡ್ಡಿದರ ಏರಿಕೆ ಮಾಡಿವೆ? ಬಡ್ಡಿದರ ಹೆಚ್ಚಳದ ಹೊರೆಯನ್ನು ಸಾಲಗಾರರು ತಗ್ಗಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ.

 

Banks hike lending rates in response to RBI move
Author
First Published Oct 5, 2022, 4:15 PM IST

ಮುಂಬೈ (ಅ.5): ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಹೆಚ್ಚಳ ಮಾಡಿದ ಬೆನ್ನಲ್ಲೇ ಅನೇಕ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಇತ್ತೀಚೆಗಷ್ಟೇ ಆರ್ ಬಿಐ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಿತ್ತು. ಇದ್ರಿಂದ ರೆಪೋ ಆಧಾರಿತ ಬೆಂಚ್ ಮಾರ್ಕ್ ಕೋವಿಡ್ ಪೂರ್ವ ಮಟ್ಟವನ್ನು ಮೀರಿದೆ. ಇನ್ನು ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್ ಆರ್) ಕೋವಿಡ್ ಪೂರ್ವ ಮಟ್ಟಕ್ಕಿಂತ ಕಡಿಮೆ ಇದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ಈ ವರ್ಷದ ಪ್ರಾರಂಭದಿಂದ ಈ ತನಕ ನಾಲ್ಕು ಬಾರಿ ರೆಪೋ ದರ ಹೆಚ್ಚಳ ಮಾಡಿದೆ. ಮೇನಿಂದ ಈ ತನಕ ಆರ್ ಬಿಐ ರೆಪೋ ದರವನ್ನು ಶೇ.1.40ರಷ್ಟು ಹೆಚ್ಚಳ ಮಾಡಿದೆ. ಶೇ.4ರಷ್ಟಿದ್ದ ರೆಪೋ ದರ ಶೇ.5.9ಕ್ಕೆ ಹೆಚ್ಚಳಗೊಂಡಿದೆ. ರೆಪೋ ದರವೆಂದ್ರೆ ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆಯುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಬ್ಯಾಂಕುಗಳು ಕೂಡ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತವೆ.

ಯಾವೆಲ್ಲ ಬ್ಯಾಂಕುಗಳು ಬಡ್ಡಿದರ ಹೆಚ್ಚಳ ಮಾಡಿವೆ?
ಭಾರತದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್ ಬಡ್ಡಿದರ ಹೆಚ್ಚಳ ಮಾಡಿವೆ.

ಭಾರತದ 2ನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾದ Russia: 5ನೇ ಸ್ಥಾನಕ್ಕೆ ಕುಸಿದ ಅಮೆರಿಕ

ಎಸ್ ಬಿಐ (SBI) ಎಕ್ಸ್ ಟರ್ನಲ್ ಬೆಂಚ್ ಮಾರ್ಕ್ ಲಿಂಕ್ಡ್ ಲೆಂಡಿಂಗ್ ದರವನ್ನು ಶೇ.8.55ರಷ್ಟು ಹೆಚ್ಚಳ ಮಾಡಿದೆ. ಇನ್ನು ರೆಪೋ ಲಿಂಕ್ಡ್ ಲೆಂಡಿಂಗ್ ದರವನ್ನು ಶೇ.8.15ಕ್ಕೆ ಏರಿಕೆ ಮಾಡಿದೆ. ಹೊಸ ಸಾಲಗಳನ್ನು ಎಸ್ ಬಿಐ ಬೆಂಚ್ ಮಾರ್ಕ್ ದರದಲ್ಲೇ ನೀಡುತ್ತಿದೆ.ಇದರಿಂದ ಹೊಸ ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಸಾಲ ನೀಡಲು ಸಾಧ್ಯವಾಗುತ್ತದೆ ಎಂಬುದು ಬ್ಯಾಂಕ್ ಲೆಕ್ಕಾಚಾರವಾಗಿದೆ. ಆದರೆ, ಈಗಾಗಲೇ ಸಾಲ ಪಡೆದಿರುವ ಗ್ರಾಹಕರಿಗೆ ಬಡ್ಡಿ ಹೊರೆ ಹಾಗೂ ಇಎಂಐ (EMI) ಹೆಚ್ಚಳವಾಗಲಿದೆ.

ಐಸಿಐಸಿಐ ಬ್ಯಾಂಕ್ (ICICI) ಎಕ್ಸ್ ಟರ್ನಲ್ ಬೆಂಚ್ ಮಾರ್ಕ್ ಲೆಂಡಿಂಗ್ ದರವನ್ನು ಸೆಪ್ಟೆಂಬರ್ 30ರಿಂದ ಜಾರಿಗೆ ಬರುವಂತೆ ಶೇ.9.25ಕ್ಕೆ ಹೆಚ್ಚಳ ಮಾಡಿದೆ.ಐಸಿಐಸಿಐ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಗೃಹ ಸಾಲದ (Home loan) ಮೇಲಿನ ಬಡ್ಡಿದರ (Interest rate) ಶೇ.8.6ರಿಂದ ಪ್ರಾರಂಭವಾಗುತ್ತದೆ. ಇನ್ನು ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅನ್ನು ಕೂಡ ಐಸಿಐಸಿಐ ಬ್ಯಾಂಕ್ ಏರಿಕೆ ಮಾಡಿದೆ.

ಎಚ್ ಡಿಎಫ್ ಸಿ (HDFC) ಹೊಸ ಗೃಹ ಸಾಲ ಕೂಡ ಶೇ.8.6ರಿಂದ ಪ್ರಾರಂಭವಾಗುತ್ತದೆ.ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ (Bank of India) ಹಾಗೂ ಇಂಡಿಯನ್ ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರವನ್ನು (ಎಂಸಿಎಲ್ ಆರ್) ಪರಿಷ್ಕರಿಸಿದೆ.

ಹೆಂಡತಿಗೆ ನಿಮ್ಮ ಸಂಬಳದ ಬಗ್ಗೆ ಹೇಳಲ್ವಾ..? RTI ಮೂಲಕ ಗಂಡನ ಆದಾಯ ವಿವರ ಪಡೆದ ಪತ್ನಿ..!

ಬಡ್ಡಿದರ (Interest rate) ಹೆಚ್ಚಳದಿಂದ ಗೃಹ, ವೈಯಕ್ತಿಕ, ವಾಹನ ಸಾಲಗಳ ಇಎಂಐ ಕೂಡ ಹೆಚ್ಚಲಿದೆ. ಈಗಾಗಲೇ ಮೂರು ಬಾರಿ ಬಡ್ಡಿದರ ಹೆಚ್ಚಳದಿಂದ ಕಂಗಲಾಗಿದ್ದ ಸಾಲಗಾರರಿಗೆ ಈಗ ಇನ್ನೊಮ್ಮೆ ಬಡ್ಡಿದರ ಹೆಚ್ಚಳದ ಬಿಸಿ ತಾಗಲಿದೆ. ಬಡ್ಡಿದರ ಹೆಚ್ಚಳವಾದಾಗ ಸಾಲಗಾರರು ಇಎಂಐ ಮೊತ್ತ ಹೆಚ್ಚಳ ಮಾಡಬಹುದು ಇಲ್ಲವೇ ಸಾಲದ ಅವಧಿ ಹೆಚ್ಚಿಸಿಕೊಳ್ಳಬಹುದು. ಹೊಸ ಸಾಲ ಪಡೆಯೋರಿಗೆ ಕೂಡ ಬಡ್ಡಿದರ ಹೆಚ್ಚಳದ ಬಿಸಿ ಸ್ವಲ್ಪ ಮಟ್ಟಿಗೆ ತಾಗಲಿದೆ.

 

 

Follow Us:
Download App:
  • android
  • ios