Asianet Suvarna News Asianet Suvarna News

ಮುಂದಿನ ವಾರ 5 ದಿನ ಬ್ಯಾಂಕ್‌ ಬಂದ್‌..!

*  ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ 
*  ಎಐಬಿಇಎ, ಎಐಬಿಒಎ, ಬಿಇಎಫ್‌ಇ, ಐಎನ್‌ಬಿಇಎಸ್‌ ಸಂಘಟನೆಗಳೂ ಸಹ ಮುಷ್ಕರಕ್ಕೆ ಬೆಂಬಲ 
*  ಮುಂದಿನ ವಾರ ಬ್ಯಾಂಕಿಂಗ್ ಸೇವೆ ಸೇವೆಯಲ್ಲಿ ವ್ಯತ್ಯಯ

Banking Services Impacted Next Week 6 Days in India grg
Author
Bengaluru, First Published Mar 27, 2022, 6:19 AM IST

ನವದೆಹಲಿ(ಮಾ:27): ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಸೋಮವಾರ(ಮಾ.28) ಹಾಗೂ ಮಂಗಳವಾರ(ಮಾ.29) ರಂದು ಮುಷ್ಕರ ನಡೆಸಲಿದ್ದಾರೆ. ಮಾ.30 ಮತ್ತು 31ರಂದು ಮಾತ್ರ ಕಾರ್ಯನಿರ್ವಹಿಸಲಿದೆ. ಏ.1ರಂದು ಹಣಕಾಸು ವರ್ಷದ ಅರಂಭವಾದ್ದರಿಂದ ಬ್ಯಾಂಕ್‌ ತೆರೆದಿದ್ದರೂ ಸೇವೆ ಇರುವುದಿಲ್ಲ. ಏ.2 ಯುಗಾದಿ ಹಬ್ಬದ ಪ್ರಯುಕ್ತ ಬ್ಯಾಂಕ್‌ಗೆ ರಜೆ ಇರಲಿದೆ. ಏ.3 ಮತ್ತೆ ಭಾನುವಾರ. ಹೀಗೆ ಮುಂದಿನ 7 ದಿನಗಳಲ್ಲಿ 6 ದಿನಗಳು ರಜೆ ಇರಲಿದ್ದು, ಗ್ರಾಹಕರ ಸೇವೆಗೆ ಲಭ್ಯವಿರುವುದಿಲ್ಲ.

ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧಿಸಿ ಬ್ಯಾಂಕ್‌ ನೌಕರರು 2 ದಿಗಳ ಮುಷ್ಕರಕ್ಕೆ ಕರೆ ನೀಡಿದ್ದಾರೆ. 11 ಬ್ಯಾಂಕಿಂಗ್‌ ಒಕ್ಕೂಟಗಳ ಪೈಕಿ ಸಿಪಿಐ ಮತ್ತು ಸಿಪಿಐಎಂ ಬೆಂಬಲಿತೆ ಒಕ್ಕೂಟಗಳು ಮುಷ್ಕರ ನಡೆಸಲಿವೆ. ಇದರೊಂದಿಗೆ ಎಐಬಿಇಎ, ಎಐಬಿಒಎ, ಬಿಇಎಫ್‌ಇ, ಐಎನ್‌ಬಿಇಎಸ್‌ ಸಂಘಟನೆಗಳೂ ಸಹ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಹಾಗಾಗಿ ಬ್ಯಾಂಕಿಂಗ್‌ ಕಾರ್ಯಚಟುವಟಿಕೆಗಳು ಮುಂದಿನ ವಾರ ವ್ಯತ್ಯಯವಾಗಲಿದೆ.

DCC Bank Scam: 15 ದಿನದಲ್ಲಿ ತನಿಖೆ ಪೂರ್ಣ: ಸಚಿವ ಸೋಮಶೇಖರ್‌

ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಹಿವಾಟು ಕರ್ನಾಟಕದಲ್ಲಿ 2 ಲಕ್ಷ ಕೋಟಿ ರು. ದಾಟಿದೆ. ಇದರಿಂದಾಗಿ ಒಟ್ಟಾರೆ ವಹಿವಾಟಿನಲ್ಲಿ ಕರ್ನಾಟಕದ ಖಾಸಗಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನಂ.1 ಬ್ಯಾಂಕ್‌ ಆಗಿ ಎಚ್‌ಡಿಎಫ್‌ಸಿ ಹೊರಹೊಮ್ಮಿದೆ ಎಂದು ಬಾಂಕ್‌ ಮಂಗಳವಾರ ಹೇಳಿದೆ.

ಚಿಲ್ಲರೆ ವ್ಯಾಪಾರಿಗಳು, ಕಾರ್ಪೊರೇಟ್‌ ಕಂಪನಿಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಸೇರಿದಂತೆ 2021ರ ಸೆ.30ರವರೆಗೆ ಬ್ಯಾಂಕ್‌ 73.65 ಸಾವಿರ ಕೋಟಿ ಸಾಲ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಸಾಲ ನೀಡಿಕೆಯಲ್ಲಿ ಶೇ.9ರಷ್ಟುಪಾಲನ್ನು ಹೊಂದಿದೆ. ‘ನಮ್ಮ ಬ್ಯಾಂಕ್‌ನ ಆಯಕಟ್ಟಿನ ವಹಿವಾಟಿನ ಪ್ರಮುಖ ಮಾರುಕಟ್ಟೆಯಾಗಿ ಕರ್ನಾಟಕ ಮುಂದುವರೆದಿದೆ. ಇದು ನಮ್ಮ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಿದೆ. ಸಾಂಕ್ರಾಮಿಕದ ಸಮಯದಲ್ಲೂ ನಾವೂ ಸ್ಥಳೀಯ ವ್ಯವಹಾರಗಳನ್ನು ಪ್ರೋತ್ಸಾಹಿಸಿದ್ದೇವೆ ಎಂದು ಬ್ಯಾಂಕ್‌ನ ಕರ್ನಾಟಕ ವಿಭಾಗದ ಮುಖ್ಯಸ್ಥ ಅಹ್ಮದ್‌ ಹೇಳಿದ್ದಾರೆ.

ಖಾಸಗೀಕರಣ ವಿರುದ್ಧ ಮೋದಿಗೆ ಸಿದ್ದು ಪತ್ರ

ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಬಂಡವಾಳ ಹಿಂಪಡೆಯುತ್ತಿರುವುದು ಹಾಗೂ ಖಾಸಗೀಕರಣದಿಂದ(Privatization) ಆಗುವ ಅನಾಹುತಗಳ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಆತಂಕ ವ್ಯಕ್ತಪಡಿಸಿದ್ದು, ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಗೆ(Narendra Modi) ಪತ್ರ ಬರೆದು ಬ್ಯಾಂಕ್‌ಗಳಿಂದ ಹೂಡಿಕೆ ಹಿಂತೆಗೆದುಕೊಳ್ಳುವುದು ಆತಂಕಕಾರಿ ಹಾಗೂ ಅನಾಹುತಕಾರಿ ಎಂದು ಕಿಡಿಕಾರಿದ್ದರು. 

ಆರ್ಥಿಕತೆ ಚೇತರಿಕೆ ಹೆಸರಿನಲ್ಲಿ ಬ್ಯಾಂಕ್‌ಗಳಿಂದ(Bank) ಹೂಡಿಕೆ ಹಿಂತೆಗೆದುಕೊಳ್ಳಲು ಸರ್ಕಾರ ತರಾತುರಿ ಮಾಡುತ್ತಿದೆ. ಇದು ಆಧಾರರಹಿತ ಆರ್ಥಿಕ ವಿಧಾನವಾಗಿದ್ದು ಆರ್ಥಿಕ ತಜ್ಞರು, ಬ್ಯಾಂಕಿಂಗ್‌ ವಲಯದ(Banking Sector) ತಜ್ಞರು ಇದೊಂದು ಅನಾಹುತಕಾರಿ ತೀರ್ಮಾನ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ(Central Government) ಈ ತೀರ್ಮಾನದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದರು.

Hijab Row: ಬುರ್ಖಾಧಾರಿ ಮಹಿಳೆಗೆ ಬ್ಯಾಂಕ್‌ ವಹಿವಾಟಿಗೆ ಅವಕಾಶ ನಿರಾಕರಣೆ

ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು(Economy) ಹಾಳುಗೆಡವಿದೆ. ಆದಾಯ ಹೆಚ್ಚಿಸುವಲ್ಲಿ ವಿಫಲವಾಗಿ ಬಂಡವಾಳ ಹಿಂತೆಗೆತದ ಯೋಜನೆಗೆ ಬ್ಯಾಂಕಿಂಗ್‌ ವಲಯವನ್ನು ಗುರಿ ಮಾಡುತ್ತಿದೆ. ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಘೋಷಣೆಯಿಂದ ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಬ್ಯಾಂಕ್‌ ಉದ್ಯೋಗಿಗಳು ಹಾಗೂ ಠೇವಣಿದಾರರು ಮತ್ತು ಜನಸಾಮಾನ್ಯರೂ ಆತಂಕಗೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದರು.

ಖಾಸಗಿ ಹಣಕಾಸು ಸಂಸ್ಥೆಗಳ ದುರಾಸೆ ಮತ್ತು ದೌರ್ಜನ್ಯದಿಂದ ಜನಸಾಮಾನ್ಯರನ್ನು ರಕ್ಷಿಸುವಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ಪರಿಣಾಮಕಾರಿಯಾಗಿದೆ. ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ, ಉದ್ಯಮಗಳಿಗೆ ಸಾಲ ಸೌಲಭ್ಯವನ್ನು ಒದಗಿಸುವುದು ಮತ್ತು ಕೃಷಿಕರ ಮನೆ ಬಾಗಿಲಿಗೂ ಸಾಲ ಸೌಲಭ್ಯಗಳನ್ನು ತಲುಪಿಸುವುದು ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದ ಸಾಧ್ಯವಾಗಿತ್ತು. 1992ರ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ದೇಶದ ಮೂಲೆ ಮೂಲೆಗೂ ವ್ಯಾಪಿಸಿ 65 ಸಾವಿರ ಶಾಖೆಗಳನ್ನು ತೆರೆದಿದ್ದವು. ಆದರೆ ಕಳೆದ 10 ವರ್ಷದಲ್ಲಿ 10 ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ಘೋಷಿಸಲಾಗಿದೆ. ಕನ್ನಡಿಗರ ಪಾಲಿನ ಸಾವಿರಾರು ಉದ್ಯೋಗ ಕಳೆಯಲಾಗಿದೆ. ಇದೀಗ ವಿಲೀನ ಪ್ರಕ್ರಿಯೆ ಮೂಲಕ ಅರ್ಧ ಮುಗಿಸಿ, ಉಳಿದರ್ಧವನ್ನು ಖಾಸಗೀಕರಿಸಲು ಹೊರಟಿದ್ದೀರಿ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದರು.
 

Follow Us:
Download App:
  • android
  • ios