Asianet Suvarna News Asianet Suvarna News

DCC Bank Scam: 15 ದಿನದಲ್ಲಿ ತನಿಖೆ ಪೂರ್ಣ: ಸಚಿವ ಸೋಮಶೇಖರ್‌

*  ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ 
*  ಬ್ಯಾಂಕ್‌ಗಳಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ: ನಾರಾಯಣಸ್ವಾಮಿ
*  ಅವ್ಯವಹಾರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು 

DCC Bank Scam Probe Will Be Complete in 15 Days Says Minister ST Somashekhar grg
Author
Bengaluru, First Published Feb 23, 2022, 12:51 PM IST

ಬೆಂಗಳೂರು(ಫೆ.23): ಕೋಲಾರ ಮತ್ತು ಚಿಕ್ಕಬಳ್ಳಾಪುರ(Kolar-Chikkaballapur) ಡಿಸಿಸಿ ಬ್ಯಾಂಕ್‌ನಲ್ಲಿ(DCC Bank) ನಡೆದಿರುವ ಅವ್ಯವಹಾರಗಳ ತನಿಖೆ ನಡೆಯುತ್ತಿದ್ದು, 10-15 ದಿನದಲ್ಲಿ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌(ST Somashekhar) ತಿಳಿಸಿದ್ದಾರೆ.

ಬಿಜೆಪಿಯ(BJP) ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರದ(Bank Fraud) ಬಗ್ಗೆ ಕಲಂ 64ರ ಅಡಿಯಲ್ಲಿ ವಿಚಾರಣೆ ಮಾಡಲಾಗಿದೆ. ಇದಲ್ಲದೇ ಸದರಿ ಡಿಸಿಸಿ ಬ್ಯಾಂಕ್‌ ಹಾಗೂ ಈ ಬ್ಯಾಂಕ್‌ ಅಡಿ ಬರುವ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಳೆದ 5 ವರ್ಷಗಳಲ್ಲಿ (2016-17 ರಿಂದ 2020-21) ವರೆಗೆ ಸ್ವಸಹಾಯ ಗುಂಪುಗಳ ಸಾಲದ(Loan) ವಿವರಗಳನ್ನು ಪರಿಶೀಲಿಸಿ ನೀಡಿರುವ ಸಾಲ ಹಾಗೂ ನಿಗದಿತ ಅವಧಿಯಲ್ಲಿ ಸಾಲ ವಸೂಲಿ ಆಗಿರುವ ಬಗ್ಗೆ ಹಾಗೂ ನಿಗದಿತ ಬಡ್ಡಿ ದರದಲ್ಲಿ ಸಹಾಯಧನ ಕ್ಲೇಂ ಮಾಡಲಾಗಿದೆಯೇ ಅಥವಾ ಹೆಚ್ಚುವರಿ ಬಡ್ಡಿ ಕ್ಲೇಂ ಮಾಡಲಾಗಿದೆಯೇ? ಸರ್ಕಾರದಿಂದ ಬಿಡುಗಡೆಯಾದ ಬಡ್ಡಿ ಸಹಾಯಧನ ಸಂಬಂಧಪಟ್ಟವರಿಗೆ ತಲುಪಿದೆಯೇ ಅಥವಾ ದುರುಪಯೋಗ ಆಗಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ವಿವರಿಸಿದರು.

APMC ತಿದ್ದುಪಡಿ ವಾಪಸ್‌ ಪ್ರಶ್ನೆಯೇ ಇಲ್ಲ: ಸಚಿವ ಸೋಮಶೇಖರ್

ಇದಕ್ಕೂ ಮುನ್ನ ಮಾತನಾಡಿದ ನಾರಾಯಣಸ್ವಾಮಿ, ಬ್ಯಾಂಕ್‌ಗಳಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ. ಬ್ಯಾಂಕ್‌ ನೀಡಿದ ನೂರಾರು ಕೋಟಿ ರು. ಸಾಲವನ್ನು ತಮ್ಮ ಸ್ವಂತ ಕೈಯಿಂದ ಕೊಟ್ಟ ರೀತಿಯಲ್ಲಿ ಸಾರ್ವಜನಿಕವಾಗಿ ವಿತರಣೆ ಮಾಡಲಾಗಿದೆ. ಹೀಗಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕ್ಷ ರಾಮಕೃಷ್ಣ ಬಂಧನ

ಬೆಂಗಳೂರು: ಬೆಂಗಳೂರಿನ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ(Shri Guru Raghavendra Bank) ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಅಧ್ಯಕ್ಷ ಕೆ.ರಾಮಕೃಷ್ಣ(K Ramakrishna) ಅವರನ್ನು ಜಾರಿ ನಿರ್ದೇಶನಾಲಯ(ED) ಫೆ.15 ರಂದು ಬಂಧಿಸಿತ್ತು. ಬೆನ್ನಲ್ಲೇ ವಿಶೇಷ ನ್ಯಾಯಾಲಯವು ಮೂರು ದಿನಗಳ ಕಾಲ ಅವರನ್ನು ಇ.ಡಿ. ವಶಕ್ಕೆ ನೀಡಿದೆ.

ಪ್ರಕರಣ ಸಂಬಂಧ ಮಂಗಳವಾರ ಇ.ಡಿ. ಅಧಿಕಾರಿಗಳು ರಾಮಕೃಷ್ಣ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ(Court) ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮಾಡಿದ ಮನವಿ ಮೇರೆಗೆ ನ್ಯಾಯಾಲಯವು ಶುಕ್ರವಾರದವರೆಗೆ ಇ.ಡಿ. ವಶಕ್ಕೆ ನೀಡಿದೆ. ನ್ಯಾಯಾಲಯದಲ್ಲಿ ಇ.ಡಿ. ಪರವಾಗಿ ವಕೀಲ ಪಿ.ಪ್ರಸನ್ನಕುಮಾರ್‌ ವಾದ ಮಂಡಿಸಿದ್ದರು.

ನಕಲಿ ದಾಖಲೆಗಳ ಅಧಾರದ ಮೇಲೆ 892.85 ಕೋಟಿ ರು. ಸಾಲ(Loan) ನೀಡಿರುವುದು ತನಿಖೆ(Investigation) ವೇಳೆ ಗೊತ್ತಾಗಿದೆ. ಪ್ರಸ್ತುತ ಹಣ ಎಲ್ಲಿದೆ? ಯಾರೆಲ್ಲಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ, ಎಷ್ಟು ಮಂದಿಗೆ ಸಾಲ ನೀಡಲಾಗಿದೆ ಇತ್ಯಾದಿ ವಿಚಾರಗಳ ಕುರಿತು ಇ.ಡಿ. ಮಾಹಿತಿ ಕಲೆ ಹಾಕಲಿದೆ. ವಿಚಾರಣೆ ಬಳಿಕ ಈ ಕುರಿತು ಮಾಹಿತಿ ಕಲೆ ಹಾಕಿ ಹೆಚ್ಚಿನ ತನಿಖೆ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

Bank Fraud Cases: ವಂಚಕ ಬ್ಯಾಂಕಿಂದ ಸಾಲ ಮರುಪಾವತಿಗೆ ನೆರವು: ಸಚಿವ STS

ನಗರದ ಬಸವನಗುಡಿಯಲ್ಲಿನ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಗ್ರಾಹಕರಿಗೆ ನೀಡಿರುವ ಸಾಲದ ಪ್ರಮಾಣವು ಆರ್‌ಬಿಐ ಮಿತಿಗಿಂತ ಹೆಚ್ಚಾಗಿದ್ದು, ವಸೂಲಾಗದ ಸಾಲದ (ಎನ್‌ಪಿಎ) ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿರುವುದು ಸಮಸ್ಯೆಯಾಗಿದೆ. ಅವ್ಯವಹಾರದಿಂದಾಗಿ ಸಾವಿರಾರು ಠೇವಣಿದಾರರು ಆತಂಕಕ್ಕೊಳಗಾಗಿದ್ದರು. ಅಲ್ಲದೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಬಳಿ ಠೇವಣಿದಾರರು ಹಣ ವಾಪಸ್‌ ನೀಡುವಂತೆ ಮನವಿ ಮಾಡಿದ್ದರು.

ಈ ವೇಳೆ ಕೇಂದ್ರ ಸರ್ಕಾರವು(Central Government) ತನ್ನ ಕೆಲಸ ಮಾಡುತ್ತಿದ್ದು, ತಾಳ್ಮೆಯಿಂದ ಇರುವಂತೆ ಹೇಳಿದ್ದರು. ಕೇಂದ್ರ ಮಧ್ಯಪ್ರವೇಶಿಸಿ ಠೇವಣಿದಾರರಿಗೆ(Depositors) 5 ಲಕ್ಷ ರು.ವರೆಗಿನ ಠೇವಣಿ ವಿಮೆ ಮೊತ್ತವನ್ನು ಮರುಪಾವತಿ ಮಾಡುವುದಾಗಿ ತಿಳಿಸಿದೆ. ಬ್ಯಾಂಕ್‌ನಲ್ಲಿ ಒಟ್ಟು 43,619 ಠೇವಣಿದಾರರಿದ್ದು, ಇದರಲ್ಲಿ 33,390ರಷ್ಟು ಮಂದಿ ಐದು ಲಕ್ಷ ರು.ವರೆಗೆ ಠೇವಣಿ ಮಾಡಿದ್ದಾರೆ. ಬ್ಯಾಂಕ್‌ನ ಒಟ್ಟು ಠೇವಣಿ 2403.21 ಕೋಟಿ ರು.ನಷ್ಟಿದ್ದರೆ, ನೀಡಿರುವ ಸಾಲದ ಮೊತ್ತವು 1438 ಕೋಟಿ ರುಪಾಯಿ. 25ಕ್ಕೂ ಹೆಚ್ಚು ಸಾಲಗಾರರಿಂದ ಬ್ಯಾಂಕ್‌ಗೆ ನಷ್ಟವಾಯಿತು ಎಂದು ಹೇಳಲಾಗಿದೆ.
 

Follow Us:
Download App:
  • android
  • ios