ನವದೆಹಲಿ(ಫೆ.10): ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧಿಸಿ, 9 ಕಾರ್ಮಿಕ ಸಂಘಟನೆಗಳನ್ನು ಒಳಗೊಂಡಿರುವ ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟ (ಯುಎಫ್‌ಬಿಯು) ಮಾಚ್‌ರ್‍ 15 ಮತ್ತು 16ರಂದು ಎರಡು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಿದೆ.

ಸಣ್ಣ ಹೂಡಿಕೆದಾರರೂ ಸರಕಾರಿ ಸಾಲ ಬಾಂಡ್ ಪಡೀಬಹುದು: RBI

ಕಳೆದ ವಾರ ಬಜೆಟ್‌ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಬಂಡವಾಳ ಹಿಂತೆಗೆತದ ಭಾಗವಾಗಿ 2 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲಾಗುವುದೆಂದು ಘೋಷಿಸಿದ್ದರು.

ಸರ್ಕಾರದ ಈ ನಿರ್ಣಯವನ್ನು ವಿರೋಧಿಸಿ ಒಕ್ಕೂಟವು ಪ್ರತಿಭಟನೆಗೆ ಕರೆ ನೀಡಿದೆ ಎಂದು ಅಖಿಲ ಭಾರತ ಬ್ಯಾಂಕ್‌ ಕಾರ್ಮಿಕರ ಸಂಘ (ಎಐಬಿಇಎ)ದ ಕಾರ‍್ಯದರ್ಶಿ ಸಿ.ಎಚ್‌.ವೆಂಕಟಾಚಲಂ ಮಂಗಳವಾರ ತಿಳಿಸಿದ್ದಾರೆ.

ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ: ಫೆ. 8ರಂದು ಗಂಗಾವತಿಯಲ್ಲಿ ಉದ್ಯೋಗ ಮೇಳ

ಕಳೆದ ನಾಲ್ಕು ವರ್ಷಗಳಲ್ಲಿ ಈಗಾಗಲೇ ಕೇಂದ್ರ ಸರ್ಕಾರ 14 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿದೆ.