Asianet Suvarna News Asianet Suvarna News

ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರ ತಲುಪಲು ವಿಶೇಷ ಕಾರ್ಯಾಗಾರ

ಗ್ರಾಹಕರನ್ನು ಸಂಪರ್ಕಿಸುವ ಉದ್ದೇಶದಿಂದ ಅವರಿಗೆ ವಿವಿಧ ಸೇವೆಗಳ ಬಗ್ಗೆ ಅರಿವು ಮೂಡಿಸಲು ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

Bank Of India organises customer Meet program
Author
Bengaluru, First Published Oct 4, 2019, 3:09 PM IST

ಬೆಂಗಳೂರು [ಅ.04] : ಗ್ರಾಹಕರ ನಿರಂತರ ಒಡನಾಟ ಅವರೊಂದಿಗಿನ ವಿಶ್ವಸನೀಯ ಸೇವೆ ಎಲ್ಲಾ ಬ್ಯಾಂಕ್ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಗಳು ದೇಶದೆಲ್ಲೆಡೆ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಬ್ಯಾಂಕ್ ಇಂಡಿಯಾದ ವಲಯ ಪ್ರಬಂಧಕ ಪ್ರಮೋದ್ ಕುಮಾರ್ ಬತಾಲ್ ಹೇಳಿದರು. 

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ ಗ್ರಾಹಕ ಸಂಪರ್ಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ದೇಶದ ಎಲ್ಲೆಡೆ ಸಾರ್ವಜನಿಕ ಬ್ಯಾಂಕ್ ಗಳು ಆಯ್ದ 400 ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಗ್ರಾಹಕರನ್ನು ಸಂಪರ್ಕಿಸಬೇಕೆಂಬ ಮಹಾನ್ ಗುರಿಯನ್ನು ಹೊಂದಿದ್ದೇವೆ. ಇದಕ್ಕಾಗಿ ಗ್ರಾಹಕ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. 

ರೈತರ ಆದಾಯ ಡಬಲ್ ಮಾಡಲು ಬ್ಯಾಂಕ್ ಆಫ್ ಬರೋಡಾ ಅಭಿಯಾನ...

ಇನ್ನು ಬ್ಯಾಂಕ್ ಕೊಡುಗೆಗಳು ಹಾಗೂ ಅಲ್ಲಿರುವ ಸೇವೆ ಬಗ್ಗೆ ಹೆಚ್ಚಿನ ಜನರಿಗೆ ತಿಳುವಳಿಕೆ ನೀಡುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯೊಳಗೆ ಇರುವ ಎಲ್ಲಾ ಸರ್ಕಾರಿ ಖಾಸಗಿ, NBFC, HFC, MFI, ಸಿಡ್ಬಿ, ನಬಾರ್ಡ್ ಸಹಿತ ಎಲ್ಲಾ ಹಣಕಾಸು ಸಂಸ್ಥೆಗಳು ಒಂದೇ ಸೂರಿನಡಿ ಸೇರಿ ತಮ್ಮ ಗ್ರಾಹಕರಿಗೆ ಅದರಲ್ಲೀ  ಮುಖ್ಯವಾಗಿ ಸಾರ್ವಜನಿಕ ಮಾಹಿತಿ ಒದಗಿಸುವ ಉದ್ದೇಶ ಇದರ ಹಿಂದೆ ಇದೆ ಎಂದು ಪ್ರಮೋದ್ ಕುಮಾರ್ ಹೇಳಿದರು. 

ಹಲವು ಸೌಲಭ್ಯಗಳೊಂದಿಗೆ ಗ್ರಾಹಕರ ಬಳಿಗೆ ‘ಬ್ಯಾಂಕ್ ಆಫ್ ಇಂಡಿಯಾ’ ಹೊಸಹೆಜ್ಜೆ...

ಈ ವೇಳೆ ಐಡಿಬಿಐ ಬ್ಯಾಂಕ್ ವಲಯ ಮುಖ್ಯಸ್ಥರಾದ ಶ್ರೀಮತಿ ನೀತಾ ಸೂದ್ , ಐಒಬಿಐ ನ ಮನೋರಮಾ, ನಬಾರ್ಡ್ ಸೂರ್ಯಕುಮಾರ್, ಆರ್.ಕೆ. ಮಿತ್ರಾ ಉಪಸ್ಥೀತರಿದ್ದರು. 

Follow Us:
Download App:
  • android
  • ios