RBI ರೆಪೋ ದರ ಏರಿಕೆ ಮಾಡದಿದ್ರೂ ಸಾಲದ ಬಡ್ಡಿದರ ಹೆಚ್ಚಿಸಿವೆ ಈ ಬ್ಯಾಂಕ್ ಗಳು; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

ಬ್ಯಾಂಕ್ ಆಫ್ ಬರೋಡಾ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಂಸಿಎಲ್ ಆರ್ ದರದಲ್ಲಿ ಏರಿಕೆ ಮಾಡಿವೆ. ಇದರಿಂದ ಸಾಲಗಳ ಬಡ್ಡಿದರದಲ್ಲಿ ಹೆಚ್ಚಳವಾಗಿದೆ. 

Bank Of Baroda Canara Bank And Bank Of Maharashtra Hike Lending Rates EMIs To Go Up anu

ನವದೆಹಲಿ( ಆ.14): ಬ್ಯಾಂಕ್ ಆಫ್ ಬರೋಡಾ ಹಾಗೂ ಕೆನರಾ ಬ್ಯಾಂಕ್ ಸೇರಿದಂತೆ ಸಾರ್ವಜನಿಕ ವಲಯದ ಅನೇಕ ಬ್ಯಾಂಕ್ ಗಳು ತಮ್ಮ ಎಂಸಿಎಲ್ ಆರ್ ದರವನ್ನು 10 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿವೆ.  ಕಳೆದ ವಾರವಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಎಂಸಿಪಿ ಸಭೆ ನಡೆದಿತ್ತು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ರೆಪೋ ದರ ಈ ಹಿಂದಿನ ಶೇ.6.50ರಷ್ಟೇ ಇದೆ. ಮಾರ್ಜಿನಲ್ ಕಾಸ್ಟ್ ಲೆಂಡಿಂಗ್ ರೇಟ್ಸ್ (ಎಂಸಿಎಲ್ ಆರ್) ಬ್ಯಾಂಕ್ ಗಳು ಸಾಲದ ಮೇಲೆ ವಿಧಿಸುವ ಕನಿಷ್ಠ ದರವಾಗಿದೆ. ಎಂಸಿಎಲ್ ಆರ್ ಹೆಚ್ಚಳ ಮಾಡುವ ಮೂಲಕ ಬ್ಯಾಂಕ್ ಗಳು ತಮ್ಮ ಮೇಲಿನ  ಹೆಚ್ಚುವರಿ ಹೊರೆಯನ್ನು ಸಾಲಗಾರರಿಗೆ ವರ್ಗಾಯಿಸುತ್ತವೆ. ಇದರಿಂದ ಗೃಹ, ವಾಹನ ಸೇರಿದಂತೆ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳವಾಗುತ್ತದೆ. ಪರಿಣಾಮ ಸಾಲಗಾರರ ತಿಂಗಳ ಇಎಂಐ ದರದಲ್ಲಿ ಹೆಚ್ಚಳವಾಗುತ್ತದೆ. ಇದು ಸಾಲಗಾರರ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ರೆಪೋ ದರದಲ್ಲಿ ಏರಿಕೆಯಾದ ತಕ್ಷಣ ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತವೆ. ವಾಣಿಜ್ಯ ಬ್ಯಾಂಕುಗಳಿಗೆ ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ ಪಡೆಯೋ ಸಾಲದ (Loan) ಮೇಲೆ ವಿಧಿಸೋ ಬಡ್ಡಿದರವೇ ರೆಪೋ ದರ. ರೆಪೋ ದರ  ದೇಶದಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಬಳಸುವ ಅತೀಮುಖ್ಯ ಸಾಧನವಾಗಿದೆ. 

ಎಂಸಿಎಲ್ ಆರ್ ದರ ಹೆಚ್ಚಳ
ಆರ್ ಬಿಐ ಇತ್ತೀಚಿನ ನಿರ್ದೇಶನದ ಅನ್ವಯ ಬ್ಯಾಂಕ್ ಗಳು ಎಫ್ ಡಿಗಳ ಮೇಲಿನ ಶೇ.10ರಷ್ಟನ್ನು ನಗದು ಮೀಸಲಾತಿ ಅನುಪಾತ (ಸಿಆರ್ ಆರ್) ರೂಪದಲ್ಲಿ 2023ರ ಆಗಸ್ಟ್ 12ರಿಂದ ಇಡಬೇಕು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಹಾಗೂ ಕೆನರಾ ಬ್ಯಾಂಕ್ ಎಂಸಿಎಲ್ ಆರ್  ಅನ್ನು 5 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಹೀಗಾಗಿ ಈ ಎರಡೂ ಬ್ಯಾಂಕ್ ಗಳ ಹೊಸ ಒಂದು ವರ್ಷದ ಎಂಸಿಎಲ್ ಆರ್ ಶೇ.8.70ರಷ್ಟು ಇರಲಿದೆ. ಈ ಹೊಸ ದರ ಆಗಸ್ಟ್ 12ರಿಂದಲೇ ಜಾರಿಗೆ ಬರಲಿದೆ. ಇದರಿಂದ ಎಂಸಿಎಲ್ ಆರ್ ಲಿಂಕ್ಡ್ ಬಡ್ಡಿದರದ ಆಧಾರದಲ್ಲಿ ಸಾಲಗಳನ್ನು ಪಡೆದವರ ತಿಂಗಳ ಮರುಪಾವತಿ ಮೊತ್ತದಲ್ಲಿ ಏರಿಕೆಯಾಗಲಿದೆ.

Personal Finance: ಬೇಗ ಗೃಹ ಸಾಲದ ಹೊಣೆ ಇಳಿಸ್ಬೇಕಂದ್ರೆ ಹಿಂಗ್ ಮಾಡಿ!

ಇನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡ ಎಂಸಿಎಲ್ ಆರ್ ದರದಲ್ಲಿ 10 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಅಂದರೆ ಬಹುತೇಕ ಸಾಲಗಳಿಗೆ ಬೆಂಚ್ ಮಾರ್ಕ್ ದರವಾಗಿರುವ ಒಂದು ವರ್ಷದ ಎಂಸಿಎಲ್ ಆರ್ ಶೇ.8.50ರಿಂದ ಶೇ.8.60ಗೆ ಏರಿಕೆಯಾಗಿದೆ. ಈ ಪರಿಷ್ಕೃತ ದರ 2023ರ ಆಗಸ್ಟ್ 10ರಿಂದಲೇ ಜಾರಿಗೆ ಬರಲಿದೆ. 

ಎಂಸಿಎಲ್ ಆರ್ ದರ ಹೆಚ್ಚಳದ ಪರಿಣಾಮ
ಎಂಸಿಎಲ್ ಆರ್ ಲಿಂಕ್ಡ್ ಬಡ್ಡಿದರದಲ್ಲಿ ಸಾಲ ಪಡೆದವರಿಗೆ ಇಎಂಐ ಮೊತ್ತದಲ್ಲಿ ಏರಿಕೆಯಾಗಲಿದೆ. ಇದರಿಂದ ಅವರ ತಿಂಗಳ ವೆಚ್ಚದಲ್ಲಿ ಕೂಡ ಹೆಚ್ಚಳವಾಗಲಿದೆ. ಇದು ಅವರ ತಿಂಗಳ ಬಜೆಟ್ ಮೇಲೆ ಕೂಡ ಪರಿಣಾಮ ಬೀರಲಿದೆ. ಇನ್ನು ಎಂಸಿಎಲ್ ಆರ್ ದರ ಹೆಚ್ಚಳದಿಂದ ಆರ್ಥಿಕತೆ ಮೇಲೆ ಕೂಡ ಸಾಕಷ್ಟು ಪರಿಣಾಮಗಳಾಗಲಿವೆ. ಸಂಸ್ಥೆಗಳಿಗೆ ಕೂಡ ಹಣವನ್ನು ಸಾಲ ಪಡೆಯೋದು ಹೆಚ್ಚು ದುಬಾರಿಯಾಗಲಿದೆ.

ಕರ್ಣಾಟಕ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕದಲ್ಲಿ ₹370 ಕೋಟಿ ಲಾಭ

ಸಾಲದ ಬಡ್ಡಿದರದ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಎಂಸಿಎಲ್ ಆರ್ ಬ್ಯಾಂಕ್ ಗಳು ಸಾಲದ ಮೇಲೆ ವಿಧಿಸುವ ಕನಿಷ್ಠ ಬಡ್ಡಿದರವಾಗಿದೆ. ಈ ಬೆಂಚ್ ಮಾರ್ಕ್ ಬಡ್ಡಿದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 2016ರಲ್ಲಿ ಪರಿಚಯಿಸಿತ್ತು. ಮೂಲ ದರ ವ್ಯವಸ್ಥೆಯ ಬದಲಿಗೆ ಇದನ್ನು ಪರಿಚಯಿಸಲಾಗಿತ್ತು. ಎಂಸಿಎಲ್ ಆರ್ ರೆಪೋ ದರ, ರಿಸ್ಕ್ ಪ್ರೀಮಿಯಂ ಹಾಗೂ ಟೆನರ್ ಪ್ರೀಮಿಯಂನಿಂದ ಪ್ರಭಾವಿತವಾಗಿದೆ. 

Latest Videos
Follow Us:
Download App:
  • android
  • ios