ನವೆಂಬರ್ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ; ಆರ್ ಬಿಐ ಹಾಲಿಡೇ ಲಿಸ್ಟ್ ಹೀಗಿದೆ..
ನವೆಂಬರ್ ತಿಂಗಳ ಬ್ಯಾಂಕ್ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆಗೊಳಿಸಿದೆ. ಅದರ ಅನ್ವಯ ನವೆಂಬರ್ ನಲ್ಲಿ ಕನ್ನಡ ರಾಜ್ಯೋತ್ಸವ, ದೀಪಾವಳಿ ಮುಂತಾದ ಹಬ್ಬಗಳ ಹಿನ್ನೆಲೆಯಲ್ಲಿ ಒಟ್ಟು 15 ದಿನಗಳ ಕಾಲ ರಜೆಯಿರಲಿದೆ.
Business Desk: ಅಕ್ಟೋಬರ್ ತಿಂಗಳು ಮುಗಿಯಲು ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿವೆ. ಹೀಗಿರುವಾಗ ನವೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಎಷ್ಟು ದಿನ ರಜೆಯಿದೆ ಎಂದು ತಿಳಿಯೋದು ಬೇಡವೆ? ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕುಗಳಿಗೆ ಸಂಬಂಧಿಸಿ ರಜಾಪಟ್ಟಿ ಬಿಡುಗಡೆಗೊಳಿಸುತ್ತದೆ. ಅದರಂತೆ ನವೆಂಬರ್ ತಿಂಗಳ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆಗೊಳಿಸಿದೆ. ಅದರ ಅನ್ವಯ ನವೆಂಬರ್ ತಿಂಗಳಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕುಗಳಿಗೆ ರಜೆಯಿದೆ. ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ, ದೀಪಾವಳಿ ಮುಂತಾದ ಹಬ್ಬಗಳಿವೆ. ಹೀಗಾಗಿ ಈ ತಿಂಗಳಲ್ಲಿ ಕೂಡ ಬ್ಯಾಂಕ್ ಗಳು ಹೆಚ್ಚಿನ ರಜೆ ಹೊಂದಿವೆ. . ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಬ್ಯಾಂಕಿಗೆ ಭೇಟಿ ನೀಡಿ ಮಾಡುವ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ.
ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು (Accounts Closing Holidays). ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks), ಕೋಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regional banks) ಅನ್ವಯಿಸಲಿವೆ.
ಎಫ್‌ಡಿಯಲ್ಲಿ ಹಣ ಹೂಡಿಕೆ ಮಾಡಬೇಕಾ? ಈ 2 ಬ್ಯಾಂಕ್‌ನಲ್ಲಿದೆ ಹೆಚ್ಚು ಬಡ್ಡಿ ಪಡೆಯೋ ಅತ್ಯುತ್ತಮ ಅವಕಾಶ
ನವೆಂಬರ್ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡಲೇಬೇಕಾದ ಅನಿವಾರ್ಯತೆಯಿದ್ದರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಗೃಹಸಾಲಕ್ಕೆ ಸಂಬಂಧಿಸಿದ ಕೆಲಸಗಳಿದ್ದರೆ ಅಥವಾ ವಾಹನ ಇಲ್ಲವೇ ಇನ್ಯಾವುದೇ ಸಾಲದ ಕೆಲಸಗಳಿಗೆ ಬ್ಯಾಂಕಿಗೆ ಭೇಟಿ ನೀಡಬೇಕಿದ್ದರೆ ರಜೆಗಳನ್ನು ನೋಡಿಕೊಂಡು ಹೋಗಿ. ಇಲ್ಲವಾದರೆ ಸುಮ್ಮನೆ ಬ್ಯಾಂಕಿಗೆ ಹೋಗಿ ಬಂದಂತಾಗುತ್ತದೆ. ನಿಮ್ಮ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ. ರಜೆಯಿರುವ ದಿನ ಎಟಿಎಂ ಸೇವೆಗಳು ಹಾಗೂ ಆನ್ ಲೈನ್ ಬ್ಯಾಂಕಿಗೆ ವ್ಯವಹಾರಗಳಿಗೆ ಯಾವುದೇ ಅಡ್ಡಿಯಿಲ್ಲ.
ನವೆಂಬರ್ ತಿಂಗಳ ರಜಾಪಟ್ಟಿ ಹೀಗಿದೆ:
ನವೆಂಬರ್ 1: ಕನ್ನಡ ರಾಜ್ಯೋತ್ಸವಮ ಕುಟ್, ಕರ್ವಾ ಚೌತ್ (ಕರ್ನಾಟಕ, ಇಂಫಾಲ್ ಹಾಗೂ ಶಿಮ್ಲಾದಲ್ಲಿ ಬ್ಯಾಂಕಿಗೆ ರಜೆ)
ನವೆಂಬರ್ 5: ಭಾನುವಾರ
ನವೆಂಬರ್ 10: ಗೋವರ್ಧನ್ ಪೂಜೆ, ಲಕ್ಷ್ಮೀ ಪೂಜೆ, ದೀಪಾವಳಿ (ಶಿಲ್ಲಾಂಗ್ ನಲ್ಲಿ ಬ್ಯಾಂಕ್ ರಜೆ)
ನವೆಂಬರ್ 11: ಎರಡನೇ ಶನಿವಾರ
ನವೆಂಬರ್ 12: ಭಾನುವಾರ
ನವೆಂಬರ್ 13: ಗೋವರ್ಧನ್ ಪೂಜೆ, ಲಕ್ಷ್ಮೀ ಪೂಜೆ, ದೀಪಾವಳಿ (ಅಗರ್ತಾಲ, ಡೆಹ್ರಾಡೂನ್, ಗ್ಯಾಂಗ್ಟಕ್, ಇಂಫಾಲ್, ಜೈಪುರ್, ಕಾನ್ಪುರ್ ಹಾಗೂ ಲಖ್ನೋದಲ್ಲಿ ಬ್ಯಾಂಕುಗಳಿಗೆ ರಜೆ)
ನವೆಂಬರ್ 14: ದೀಪಾವಳಿ, ವಿಕ್ರಂ ಸಂವತ್ ಹೊಸ ವರ್ಷ, ಲಕ್ಷ್ಮೀ ಪೂಜೆ (ಅಹಮದಾಬಾದ್ , ಬೆಲ್ಪುರ್, ಬೆಂಗಳೂರು, ಗ್ಯಾಂಗ್ಟಕ್, ಮುಂಬೈ ಹಾಗೂ ನಾಗ್ಪುರದಲ್ಲಿ ರಜೆ)
10,000 ಕೋಟಿ ರೂ. ಮೌಲ್ಯದ 2000ರೂ. ನೋಟು ಹಿಂತಿರುಗಲು ಬಾಕಿ: ಆರ್ ಬಿಐ ಗವರ್ನರ್
ನವೆಂಬರ್ 15: ಭಾಯಿ ದೂಜ್, ಚಿತ್ರಗುಪ್ತ ಜಯಂತಿ, ಲಕ್ಷಮೀ ಪೂಜೆ, ನಿಂಗಲ್ ಚಿಕ್ಕುಬ, ಭಾರತಿ ದಿತಿಯ (ಗ್ಯಾಂಗ್ಟಕ್, ಇಂಫಾಲ್ , ಕಾನ್ಪುರ್, ಕೋಲ್ಕತ್ತ, ಲಖ್ನೋ ಹಾಗೂ ಶಿಮ್ಲಾ)
ನವೆಂಬರ್ 19: ಭಾನುವಾರ
ನವೆಂಬರ್ 20: ಛತ್ (ಪಟ್ನಾ ಹಾಗೂ ರಾಂಚಿಯಲ್ಲಿ ಬ್ಯಾಂಕಿಗೆ ರಜೆ)
ನವೆಂಬರ್ 23: ಸೆಂಗ್ ಕುಟ್ ಸ್ನೆಮ್ /ಇಗಾಸ್ ಬಗ್ವಾಲ್ ( ಡೆಹ್ರಾಡೂನ್ ಹಾಗೂ ಶಿಲ್ಲಾಂಗ್ ನಲ್ಲಿ ಬ್ಯಾಂಕಿಗೆ ರಜೆ)
ನವೆಂಬರ್ 25: ನಾಲ್ಕನೇ ಶನಿವಾರ
ನವೆಂಬರ್ 26: ಭಾನುವಾರ
ನವೆಂಬರ್ 27: ಗುರು ನಾನಕ್ ಜಯಂತಿ, ಕಾರ್ತಿಕ್ ಪೂರ್ಣಿಮಾ (ಅಹಮದಾಬಾದ್, ಬೆಂಗಳೂರು, ಚೆನ್ನೈ, ಗ್ಯಾಂಗ್ಟಕ್, ಗುವಹಟಿ, ಹೈದರಾಬಾದ್ , ಇಂಫಾಲ್, ಕೊಚ್ಚಿ, ಪಣಜಿ, ಪಟ್ನಾ, ತ್ರಿವೆಂಡ್ರಮ್ ಹಾಗೂ ಶಿಲ್ಲಾಂಗ್ ಹೊರತುಪಡಿಸಿ ದೇಶದ ಇತರ ಎಲ್ಲ ಭಾಗಗಳಲ್ಲಿ ಬ್ಯಾಂಕಿಗೆ ರಜೆ)
ನವೆಂಬರ್ 30: ಕನಕದಾಸ ಜಯಂತಿ (ಬೆಂಗಳೂರಿನಲ್ಲಿ ಬ್ಯಾಂಕ್ ರಜೆ)